ತುಮಕೂರು  (ನ.16):  ಪದವಿ ಕಾಲೇಜು ಪುನರ್ ಆರಂಭದ ಬಗ್ಗೆ ಸರ್ಕಾರ ದಿಢೀರನೆ ನಿರ್ಧಾರ ತೆಗೆದುಕೊಂಡಿದೆ. ಸರ್ಕಾರ ಅಪಾಯಕಾರಿ ನಿರ್ಧಾರ ತೆಗೆದುಕೊಂಡಿದೆ ಎಂದು  ತುಮಕೂರು ಖಾಸಗಿ ಶಾಲಾ ಕಾಲೇಜು ಮಂಡಳಿಯ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ.

"

ಸರ್ಕಾರದ ನಿರ್ಧಾರಕ್ಕೆ ಖಾಸಗಿ ಶಾಲಾ ಕಾಲೇಜುಗಳ ವಿರೋಧವಿದ್ದು, ಸರ್ಕಾರ ಕೇವಲ‌ ಹೇಳಿಕೆ ಮುಂಜಾಗೃತ ಕ್ರಮದ ಬಗ್ಗೆ ಸ್ಪಷ್ಟ ನಿಲುವು ಹೇಳಿಲ್ಲ. ಮಕ್ಕಳಿಗೆ ಕೊರೊನಾ ಟೆಸ್ಟ್ ಯಾರು ಮಾಡಿಸುತ್ತಾರೆ..? ವಿವಿಯವರು ಟೆಸ್ಟ್ ಮಾಡಿಸುತ್ತಾರಾ ? ಅಥವಾ ಸರ್ಕಾರ ಟೆಸ್ಟ್ ಮಾಡಿಸುತ್ತಾ ? ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.  

ಕಾಲೇಜು ತೆರೆದ ಬಳಿಕ ಶಾಲೆಗಳೂ ಓಪನ್‌: ಸಚಿವ ಅಶ್ವತ್ಥ್‌ ನಾರಾಯಣ ...

ಒಂದು ವಾರ ಮುಂಚಿತವಾಗಿ ಗೈಡ್ ಲೈನ್ ಹೇಳಬೇಕಿತ್ತು. ಈವರೆಗೂ ವಿವಿಗಳಿಂದ ಅಧಿಕೃತ ಆದೇಶ ಪತ್ರಗಳು ಬಂದಿಲ್ಲ. ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಕೊರೊನಾ ಟೆಸ್ಟ್ ಬಗ್ಗೆ‌ ಸರ್ಕಾರ ಸ್ಪಷ್ಟ ನಿಲುವು ತಿಳಿಸಿಲ್ಲ.‌ ಕೊರೊನಾ ಟೆಸ್ಟ್  ಆರ್ಥಿಕ ವೆಚ್ಚವನ್ನು ಯಾರು ಭರಿಸಬೇಕು ಎಂದು ಸುವರ್ಣ ನ್ಯೂಸ್ ಗೆ  ತುಮಕೂರು ಜಿಲ್ಲಾ ಖಾಸಗಿ ಅನುದಾನ ರಹಿತ ಶಾಲಾ ಕಾಲೇಜುಗಳ ಅಧ್ಯಕ್ಷ ಹಾಲನೂರು ಲೇಪಾಕ್ಷಿ ಹೇಳಿದ್ದಾರೆ.