Asianet Suvarna News Asianet Suvarna News

ರೋಡ್ಸ್ ಸ್ಕಾಲರ್‌ಶಿಫ್ ಗೆದ್ದ ಮೊದಲ ವಿದ್ಯಾರ್ಥಿಗೆ ಶಾಲಾ ಶಿಕ್ಷಕಿಯೇ ಸ್ಫೂರ್ತಿ

ಪೋಟ್ಸ್ ನಾಲ್ಕು ವರ್ಷವಿದ್ದಾಗ ಅಮೆರಿಕಕ್ಕೆ ವಲಸೆ ಬಂದು ಫ್ಲೋರಿಡಾ ಎಲಿಮೆಂಟರಿ ಸ್ಕೂಲ್‌ ಸೇರಿಕೊಂಡು ಅತ್ಯುತ್ತಮ ಶಿಕ್ಷಣ ಪಡೆದುಕೊಂಡ. ಆತ ಇದೀಗ ಪ್ರತಿಷ್ಠಿತ ರೋಡ್ಸ್ ಸ್ಕಾಲರ್‌ಶಿಪ್ ಪಡೆದುಕೊಡಿಂದ್ದು ತನ್ನ ಈ ಸಾಧನೆಗೆ ಎಲಿಮೆಂಟರ್ ಸ್ಕೂಲ್ ಟೀಚರ್‌ ಎಂದು ಹೇಳಿಕೊಂಡಿದ್ದಾನೆ.
 

Potes is the first Latino DACA recipient to win the Rhodes scholarship
Author
Bengaluru, First Published Nov 27, 2020, 4:55 PM IST

ನಮ್ಮೆಲ್ಲರ ಜೀವನದಲ್ಲಿ ಶಿಕ್ಷಕರು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆಂಬುದು ಕಾಲಕ್ಕೆ ಕಾಲಕ್ಕೆ ಸಾಬೀತಾಗುತ್ತಲೇ ಇರುತ್ತದೆ. ನಾವಿಂದು ಏನಾಗಿದ್ದೇವೋ ಅದರಲ್ಲಿ ನಮಗೆ ವಿದ್ಯೆ ಹೇಳಿಕೊಟ್ಟ ಶಿಕ್ಷಕರ ಪಾತ್ರ ಹಿರಿದಾಗಿರುತ್ತದೆ. ಇಂಥದ್ದೇ ಯಶಸ್ಸಿನ ಕತೆಯಲ್ಲಿ ಎಲಿಮೆಂಟರಿ ಸ್ಕೂಲ್‌ ಟೀಚರ್‌ರೊಬ್ಬರು ವಲಸಿಗ ವಿದ್ಯಾರ್ಥಿಯ ಜೀವನದ ಪ್ರಮುಖ ಪಾತ್ರ ಬೀರಿದ್ದಾರೆ.

ಆತನ ಹೆಸರು ಸ್ಯಾಂಟಿಗೋ ಪೋಟ್ಸ್. ಈತನಿಗೆ ನಾಲ್ಕು ವರ್ಷವಿದ್ದಾಗಲೇ ಕೊಲಂಬಿಯಾದಿಂದ ವಲಸಿಗನಾಗಿ ಅಮೆರಿಕದ ಫ್ಲೋರಿಡಾ ಸೇರಿದ. ಹಾಗೆ ಬಂದ ಈತ ಹೋಗಿ ನೆಲೆ ಕಂಡಿದ್ದು ಫ್ಲೋರಿಡಾ ಮಿಯಾಮಿಯ ಸ್ವೀಟ್‌ವಾಟರ್ ಎಲಿಮೆಂಟರಿ ಸ್ಕೂಲ್‌ನ ಟೀಚರ್ ಎಸ್ಟಿವಾ ಅವರ ಬಳಿ.  ಹುಟ್ಟಾ ಪ್ರತಿಭಾವಂತನಾಗಿದ್ದ ಸ್ಯಾಂಟಿಗೋ ಇದೀಗ ಪ್ರತಿಷ್ಠಿತ ರೋಡ್ಸ್ ಸ್ಕಾಲರ್‌ಶಿಫ್  ಪಡೆದುಕೊಳ್ಳಲು ಯಶಸ್ವಿಯಾಗಿದ್ದಾನೆ ಮತ್ತು ತನ್ನ ಈ ಯಶಸ್ಸಿನ ಪಯಣದಲ್ಲಿ ಎಲಿಮೆಂಟರ್ ಸ್ಕೂಲ್ ಟೀಚರ್ ಎಸ್ಟಿವಾ ಅವರ ಪಾತ್ರ ಬಹಳ ಇದೆ ಎಂದು ಹೇಳಿಕೊಂಡಿದ್ದಾನೆ. 

ಬಿಡದ ಛಲ, MBBS ಸೀಟು ಪಡೆಯಲು ಯಶಸ್ವಿಯಾದ ದನ ಕಾಯೋ ಹುಡುಗಿ!

ಅಂದ ಹಾಗೆ, ಡಿಎಸಿಎ(Deferred Action for Childhood Arrivals) ಯೋಜನೆಯಡಿ ಅಮೆರಿಕಕ್ಕೆಬಂದು ರೋಡ್ಸ್ ಸ್ಕಾಲರ್‌ಶಿಫ್ ಪಡೆದುಕೊಳ್ಳುತ್ತಿರುವ ಮೊದಲ ಲ್ಯಾಟಿನೋ ವಲಸಿಗ ಎಂಬ ಕೀರ್ತಿಗೆ ಪೋಟ್ಸ್ ಪಾತ್ರನಾಗಿದ್ದಾನೆ. ನ್ಯೂಯಾರ್ಕ್‌ನ ಕೋಲಂಬಿಯಾ ಯುನಿವರ್ಸಿಟಿಯಿಂದ 2020ರಲ್ಲಿ ಗ್ಯಾಜುಯೇಟ್ ಆಗಿರುವ ಪೋಟ್ಸ್ 2021ರ ಸಾಲಿನ ರೋಡ್ಸ್ ಸ್ಕಾಲರ್‌ಶಿಫ್ ಪಡೆದುಕೊಳ್ಳುತ್ತಿರುವ ಮೊದಲ ವಿದ್ಯಾರ್ಥಿಯಾಗಿದ್ದಾನೆಂದು ರೋಡ್ಸ್ ಟ್ರಸ್ಟ್ ಘೋಷಿಸಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ.

Potes is the first Latino DACA recipient to win the Rhodes scholarship

ತನ್ನ ಈ ಎಲ್ಲ ಯಶಸ್ಸನ್ನು ಪೋಟ್ಸ್ ಎಸ್ಟಿವಾ ಅವರಿಗೆ ಸಮರ್ಪಿಸಿದ್ದಾನೆ. ಎರಡನೇ ಕ್ಲಾಸಿನಿಂದ ಐದನೇ ಕ್ಲಾಸಿನವರೆಗೂ ಈ ಎಸ್ಟಿವಾ ಟೀಚರ್ ಅವರನ್ನು ವಾರಕ್ಕೆ ಕನಿಷ್ಠ ಎರಡು ಬಾರಿಯಾದೂ ಆತ ಮೀಟ್ ಮಾಡುತ್ತಿದ್ದ. ನನ್ನ ಈವರೆಗಿನ ಜೀವನದಲ್ಲಿ  ಅವರು(ಎಸ್ಟಿವಾ) ನನ್ನ ದೊಡ್ಡ ಆಶೀರ್ವಾದವಾಗಿದ್ದಾರೆ ಎಂದು ತಿಳಿಸಿದ್ದಾನೆ. ನನ್ನ ತಂದೆ ತಾಯಿ ಕಾಲೇಜಿಗೆ ಹೋದವರಲ್ಲ; ಅವರಿಗೆ 16 ವರ್ಷವಿದ್ದಾಗಲೇ ನಾನು ಜನಿಸಿದೆ. ಹಾಗಾಗಿ ಆಕೆ ನಿಜವಾಗ್ಲೂ ನನ್ನ ಮೊದಲ ತಾಯಿಯಂತೆಯೇ ನನ್ನ ಮೇಲೆ ಕರುಣಾಮಯಿಯಾಗಿದ್ದರು. ಕಠಿಣ ಶಿಕ್ಷಣವನ್ನು ಕಲಿಸಲು ತಮ್ಮದೇ ದಾರಿ ಮೂಲಕ ಪ್ರಯತ್ನಿಸಿದರು ಎಂದು ನೆನಪಿಸಿಕೊಳ್ಳುತ್ತಾನೆ ಪೋಟ್ಸ್.

ಫಿಜಿಕ್ಸ್, ಫಿಲಾಸಫಿ, ಸೋಷಿಯಲ್ ಸೈಕಾಲಜಿ ಮತ್ತು ನ್ಯೂರೋಸೈನ್ಸ್‌ ಪ್ರೊಫೆಸರ್‌ಗಳಿಗೆ ಸಂಶೋಧನಾ ಸಹಾಯಕರಾಗಿ ಅಥವಾ ಟೀಚರ್ ಆಗಿ ವಿದ್ಯಾರ್ಥಿಗಳಿಗೆ ಸ್ಯಾಂಟಿಗೋ ಕಲಿಸುತ್ತಿದ್ದಾರೆ. ಶೈಕ್ಷಣಿಕವಾಗಿ ಅತ್ಯುತ್ತಮ ನಾಯಕತ್ವದ ಗುಣಗಳನ್ನು ಪ್ರದರ್ಶಿಸಿದ್ದರಿಂದ ಅನೇಕ ಕಾಲೇಜು ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದಾರೆ. ಡಿಎಸಿಎ ಸಂಬಂಧ ಅನೇಕ ಕಾನೂನಾತ್ಮಕ ಸಮಸ್ಯೆಗಳ ಬೆಳಕು ಚೆಲ್ಲುವ ಬರಹಗಳನ್ನು ಪ್ರಕಟಿಸಿದ್ದಾರೆ ಎಂದು ರೋಡ್ಸ್ ಟ್ರಸ್ಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸಖತ್ ಸಂಬಳ ನೀಡುವ ವೃತ್ತಿಗಳು ಯಾವವು ಗೊತ್ತಾ?

ಆತ ಎಷ್ಟು ಪರಿಪೂರ್ಣ ವ್ಯಕ್ತಿಯಾಗಿದ್ದಾನೆಂದರೆ ಅವನೊಬ್ಬ ಸುಸಂಗತ ಹೃದಯವಂತ ಮನುಷ್ಯ ಎನ್ನುತ್ತಾರೆ ಎಲಿಮೆಂಟರಿ ಟೀಚರ್ ಎಸ್ಟಿವಾ ಅವರು. ವಲಸಿಗ ವಿದ್ಯಾರ್ಥಿಯ ಜೀವನಕ್ಕೆ ಬೆಳಕಾದ ಎಸ್ಟಿವಾ ಕೂಡ ವಲಸಿಗರೇ. ಎಸ್ಟಿವಾ ಅವರು ಕ್ಯೂಬನ್ ನಿರಾಶ್ರಿತ ಕ್ಯಾಂಪಿನಲ್ಲಿದ್ದು, ವಲಸಿಗರಾಗಿ ಅಮೆರಿಕಕ್ಕೆ ಬಂದವರು.  ಲ್ಯಾಟಿನೋ ವಲಸಿಗರು ಮತ್ತು ನಿರಾಶ್ರಿತರು ಅಮೆರಿಕದ ಎರಡು ತಲೆಮಾರುಗಳ ಅವಕಾಶ ಮತ್ತು ಯಶಸ್ಸನ್ನು ಹೊಂದಲು ಇನ್ನೂ ಹೆಚ್ಚಿನ ಅರ್ಥವಿದೆ ಎಂದು ಅವರು ಹೇಳಿದರು.

ತಾನು ದೊಡ್ಡ ಕನಸುಗಳನ್ನು ಬೆನ್ನಟ್ಟುವ ಸಾಮರ್ಥ್ಯವಿದೆ ಎಂಬುದನ್ನು ಎಸ್ಟಿವಾ ಚಿಕ್ಕ ವಯಸ್ಸಿನಲ್ಲೇ ಹೇಳಿಕೊಡದಿದ್ದರೆ ನಾನು ಇಂದು ಈ ಮಟ್ಟದ ಯಶಸ್ಸು ತಲುಪುತ್ತಿರಲಿಲ್ಲ ಎನ್ನುತ್ತಾರೆ ಪೋಟ್ಸ್. ಫಲವತ್ತಾದ ಮಣ್ಣಲ್ಲಿ ನಾನು ಬೀಜ ನೆಟ್ಟೆ. ಆ ಸಸಿಗೆ ನೀನು ಕಾಳಜಿ ವಹಿಸಿದೆ. ಹಾಗಾಗಿ ನೀನೇ(ಪೋಟ್ಸ್) ನಿಜವಾದ ಸಾಧಕ ಎನ್ನುತ್ತಾರೆ ತಮ್ಮ ಶಿಷ್ಯನ ಬಗ್ಗೆ ಎಸ್ಟಿವಾ ಅವರು. 

ಆಕ್ಸ್‌ಫರ್ಡ್ ಯುನಿವರ್ಸಿಟಿಯಲ್ಲಿ ಪೋಟ್ಸ್ ಈಸ್ಟ್ ಏಷ್ಯಾ ಮತ್ತು ಇಂಟರ್‌ನ್ಯಾಷನಲ್ ಪಾಲಿಟಿಕ್ಸ್ ಬಗ್ಗೆ ಪೋಟ್ಸ್ ಅಧ್ಯಯನ ಮಾಡಿ ಬಳಿಕ ಅಮೆರಿಕದ ನ್ಯಾಷನಲ್ ಸೆಕ್ಯುರಿಟಿ ಸಂಬಂಧ ಕೆಲಸ ಮಾಡುವ ಗುರಿಯನ್ನು ಹಾಕಿಕೊಂಡಿದ್ದಾರೆ.
 

ಈ ಯುನಿವರ್ಸಿಟೀಲಿ ಕಲಿತರೆ ಉದ್ಯೋಗ ಪಕ್ಕಾ, ಕರ್ನಾಟಕದ್ದು ಇದೆಯಾ?

Follow Us:
Download App:
  • android
  • ios