ಪಿಯು ಪ್ರವೇಶಕ್ಕೆ ಜು.30ರವರೆಗೆ ಕಾಲಾವಕಾಶ

ಜೂ.30ರವರೆಗೆ ದಂಡ ಶುಲ್ಕ ರಹಿತ ದಾಖಲಾತಿಗೆ ಅವಕಾಶ ನೀಡಿದೆ. ಅಲ್ಲದೆ ಜೂ.30ರ ನಂತರ ಜು.10ರವರೆಗೆ 670 ರು. ದಂಡ ಶುಲ್ಕದೊಂದಿಗೆ, ಜು.10ರ ನಂತರ ಜು.20ರವರೆಗೆ 2890 ರು. ವಿಶೇಷ ದಂಡ ಶುಲ್ಕ ಪಾವತಿಸಿ ದಾಖಲಾತಿ ಪಡೆಯಲು ಅವಕಾಶ. 

Time for PU Admission Till June 30th in Karnataka grg

ಬೆಂಗಳೂರು(ಜೂ.22):  2023-24ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳ ದಾಖಲಾತಿಗೆ ನೀಡಲಾಗಿದ್ದ ದಂಡ ಶುಲ್ಕ ರಹಿತ ಕಾಲಾವಕಾಶವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಜೂನ್‌ 30ರವರೆಗೆ ವಿಸ್ತರಿಸಿದೆ. ಅಲ್ಲದೆ ದಂಡ ಶುಲ್ಕ ಸಹಿತವಾಗಿ ಜು.10ರವರೆಗೆ, ವಿಶೇಷ ದಂಡ ಶುಲ್ಕ ಪಾವತಿಸಿ ಜು.20ರವರೆಗೆ ದಾಖಲಾತಿ ಪಡೆಯಲು ಅವಕಾಶ ನೀಡಿದೆ.

ಈ ಮೊದಲು ದಂಡ ಶುಲ್ಕವಿಲ್ಲದೆ ಪ್ರವೇಶ ಪಡೆಯಲು ಜೂ.15 ಕೊನೆಯ ದಿನವಾಗಿತ್ತು. ದಂಡ ಶುಲ್ಕದೊಂದಿಗೆ ದಾಖಲಾತಿಗೆ ಜೂ.22ರವರೆಗೆ ಅವಕಾಶ ನೀಡಲಾಗಿತ್ತು. ಆದರೆ, ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಿಗೆ ದಾಖಲಾತಿ ಬಯಸಿ ಬರುವ ಬಡ ವಿದ್ಯಾರ್ಥಿಗಳಿಗೆ ದಂಡ ಶುಲ್ಕ ಕಟ್ಟುವುದು ಕಷ್ಟವಾಗಲಿದೆ, ಹಾಗಾಗಿ ದಂಡ ಶುಲ್ಕ ರಹಿತ ದಾಖಲಾತಿಗೆ ಜೂ.27ರವರೆಗೆ ಕಾಲಾವಕಾಶ ವಿಸ್ತರಿಸುವಂತೆ ಮನವಿ ಮಾಡಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಇಲಾಖೆಗೆ ಪತ್ರ ಬರೆದಿತ್ತು.

ಶಾಲಾ ಮಕ್ಕಳಿಗೆ ಮೊಟ್ಟೆ 1 ದಿನ ಕಡಿತ: ಸರ್ಕಾರದ ಆದೇಶ

ಇದನ್ನು ಪರಿಗಣಿಸಿದ ಇಲಾಖೆ ಇದೀಗ ಜೂ.30ರವರೆಗೆ ದಂಡ ಶುಲ್ಕ ರಹಿತ ದಾಖಲಾತಿಗೆ ಅವಕಾಶ ನೀಡಿದೆ. ಅಲ್ಲದೆ ಜೂ.30ರ ನಂತರ ಜು.10ರವರೆಗೆ 670 ರು. ದಂಡ ಶುಲ್ಕದೊಂದಿಗೆ, ಜು.10ರ ನಂತರ ಜು.20ರವರೆಗೆ 2890 ರು. ವಿಶೇಷ ದಂಡ ಶುಲ್ಕ ಪಾವತಿಸಿ ದಾಖಲಾತಿ ಪಡೆಯಲು ಅವಕಾಶ ನೀಡಿ ಸುತ್ತೋಲೆ ಹೊರಡಿಸಿದೆ.

Latest Videos
Follow Us:
Download App:
  • android
  • ios