ಪಿಯುಸಿ ಡುಮ್ಕಿ; ಆದ್ರೂ ಈ ಹಳ್ಳಿ ಹುಡ್ಗಂಗೆ ಇನ್ಸ್ಟಾದಲ್ಲಿದ್ದಾರೆ 1 ಮಿಲಿಯನ್ ಫಾಲೋವರ್ಸ್; ಈತನ ಬಳಿ ಇದೆ ವಿಶೇಷ ಟ್ಯಾಲೆಂಟ್
ಈ ಟ್ವೆಲ್ತ್ ಫೇಲ್ ಹುಡುಗ ಹುಟ್ಟಿ ಬೆಳೆದಿದ್ದು ಒಡಿಶಾದ ತೀರಾ ಹಳ್ಳಿಯೊಂದರಲ್ಲಿ. ಆದರೂ, ಇವನು ಜನರಿಗೆ ತನ್ನ ಇನ್ಸ್ಟಾ ರೀಲ್ಸ್‌ಗಳ ಮೂಲಕ ವಿಶೇಷ ರೀತಿಯಲ್ಲಿ ಅಮೆರಿಕನ್ ಆ್ಯಕ್ಸೆಂಟ್‌ನಲ್ಲಿ ಇಂಗ್ಲಿಷ್ ಮಾತಾಡೋದು ಹೇಗೆ ಎಂದು ಹೇಳಿಕೊಡ್ತಾನೆ. ಈಗ ಈತನ ಫಾಲೋವರ್ಸ್ ಸಂಖ್ಯೆ 1 ಮಿಲಿಯನ್ ದಾಟಿದೆ. ಎಂಥಾ ಸ್ಪೂರ್ತಿದಾಯಕ ಕತೆಯಲ್ಲವೇ?
ಈ ಹುಡುಗ ನೋಡಿ. ನೋಡೋಕೆ ಪಕ್ಕಾ ಲೋಕಲ್, ಆದ್ರೆ ಲಾಂಗ್ವೇಜ್ ಮಾತ್ರ ಇಂಟರ್‌ನ್ಯಾಶನಲ್.
ಒಡಿಶಾದ ನಬರಂಗ್‌ಪುರ ಜಿಲ್ಲೆಯ ಚಿತ್ರಕೋಟೆ ಎಂಬ ಪುಟ್ಟ ಹಳ್ಳಿಯೊಂದರ 21 ವರ್ಷದ ಹುಡುಗ ಧೀರಜ್ ಟಾಕ್ರಿ 12ನೇ ಕ್ಲಾಸ್ ಫೇಲ್. ಮನೆಯಲ್ಲಿ ಸಿಕ್ಕಾಪಟ್ಟೆ ಬಡತನ. ಅಷ್ಟೆಲ್ಲ ಇದ್ದೂ ಆತನಿಗೀಗ ಇನ್ಸ್ಟಾಗ್ರಾಂನಲ್ಲಿ 1 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಆತ ಉತ್ತಮ ಕಂಟೆಂಟ್ ಕ್ರಿಯೇಟರ್ ಆಗಿ, ಫಾಲೋವರ್‌ಗಳ ಪ್ರೀತಿಯ ಶಿಕ್ಷಕನೆನಿಸಿದ್ದಾನೆ.
ಇಷ್ಟಕ್ಕೂ ಈ ಹುಡುಗ ತನ್ನ ರೀಲ್ಸ್‌ಗಳಲ್ಲಿ ಏನು ಕಲಿಸುತ್ತಾನೆ ಗೊತ್ತಾ? ಅಮೆರಿಕನ್ ಆ್ಯಕ್ಸೆಂಟ್‌ನಲ್ಲಿ ಇಂಗ್ಲಿಷ್ ಮಾತಾಡುವುದು ಹೇಗೆ ಎಂಬುದನ್ನು ವಿಶಿಷ್ಠ ರೀತಿಯಲ್ಲಿ ಹೇಳಿಕೊಡುತ್ತಾ ಫಾಲೋವರ್‌ಗಳ ಫೇವರೇಟ್ ಆಗಿದ್ದಾನೆ ಧೀರಜ್.
ಎಷ್ಟೊಂದು ಓದಿದವರೇ ಇಂಗ್ಲಿಷ್ ಮಾತಾಡಲು ತಡಬಡಾಯಿಸುವಾಗ, ಅದರಲ್ಲೂ ಅಮೆರಿಕನ್ ಆ್ಯಕ್ಸೆಂಟ್ ಇಂಗ್ಲಿಷಂತೂ ಬೇರೆಯದೇ ಗ್ರಹದ ಭಾಷೆಯ ಹಾಗೆ ಕೇಳುವಾಗ ಹಳ್ಳಿ ಹುಡುಗ, 12ನೇ ಕ್ಲಾಸ್ ಫೇಲ್ ಧೀರಜ್‌ನ ಈ ಸಾಮರ್ಥ್ಯ ಬಹಳ ವಿಶೇಷವಾಗಿದೆ.
ಕೇಸ್ ಆಫ್ ಕೊಂಡಾಣ ಅದ್ಭುತ ಇಂಗ್ಲಿಷ್ ಸಿನಿಮಾದಂತಿದೆ: ಶಿವರಾಜ್‌ಕುಮಾರ್
ಈತ ಅಮೆರಿಕನ್ ಆ್ಯಕ್ಸೆಂಟ್ ಇಂಗ್ಲಿಷ್ ಹೇಳಿಕೊಡುವ ರೀತಿಯೂ ಭಿನ್ನ. ತನ್ನ ವಿಡಿಯೋಗಳಲ್ಲಿ ವೆಬ್ ಸರಣಿಗಳು ಮತ್ತು ಟಿವಿ ಶೋಗಳ ತುಣುಕುಗಳನ್ನು ಸಂಯೋಜಿಸುವ ಮೂಲಕ ಅಮೇರಿಕನ್‌ನಂತೆ ಇಂಗ್ಲಿಷ್ ಮಾತನಾಡುವುದು ಹೇಗೆ ಎಂದು Instagram ನಲ್ಲಿ ಹಿಂದಿಯಲ್ಲಿ ಮಾತಾಡುತ್ತಾ ಹೇಳಿಕೊಡುತ್ತಾನೆ.
ಲಾಕ್‌ಡೌನ್ ಅವಕಾಶ
ಸ್ಥಳೀಯ ಹಳ್ಳಿಯ ಶಾಲೆಯಲ್ಲಿ 10 ನೇ ತರಗತಿವರೆಗೆ ಓದಿದ ನಂತರ, ಧೀರಜ್ ಪಿಯುಸಿ ಪೂರ್ಣಗೊಳಿಸಲು ಹತ್ತಿರದ ಪಟ್ಟಣಕ್ಕೆ ಹೋದರು. ಆದರೆ ಅವರ 12 ನೇ ತರಗತಿ ಪರೀಕ್ಷೆಗಳಲ್ಲಿ ವಿಫಲರಾದರು.
'ನಮ್ಮ ಆರ್ಥಿಕ ಪರಿಸ್ಥಿತಿ ಅಸ್ಥಿರವಾಗಿದ್ದ ಕಾರಣ ಮನೆಯಲ್ಲಿ ಕೆಲಸಗಳು ಸುಲಭವಾಗಿರಲಿಲ್ಲ. ನನ್ನ ತಂದೆ ಸೈಕಲ್ ರಿಪೇರಿ ಮಾಡುತ್ತಿದ್ದರು. ನನ್ನ ತಾಯಿ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಬಳೆಗಳು ಮತ್ತು ಇತರ ರೀತಿಯ ಆಭರಣಗಳನ್ನು ಮಾರಾಟ ಮಾಡುತ್ತಿದ್ದರು. ನನ್ನ 12 ನೇ ತರಗತಿ ಪರೀಕ್ಷೆ ಫೇಲ್ ಆದ ನಂತರ ನಾನು ಒಂದು ವರ್ಷ ಕೇರಳಕ್ಕೆ ಹೋದೆ. ಅಲ್ಲಿ ನಾನು ಕೇರಳದ ತಿರುವಲ್ಲದಲ್ಲಿರುವ ಕ್ರಿಶ್ಚಿಯನ್ ತರಬೇತಿ ಸಂಸ್ಥೆಯಲ್ಲಿ ವಾಸಿಸುತ್ತಿದ್ದೆ ಮತ್ತು ಅಧ್ಯಯನ ಮಾಡಿದೆ. ಅಲ್ಲಿ ಓದಲು ಮೆಟ್ರಿಕ್ಯುಲೇಷನ್ ಪ್ರಮಾಣಪತ್ರ ಮಾತ್ರ ಅಗತ್ಯವಾಗಿತ್ತು' ಎನ್ನುತ್ತಾರೆ ಧೀರಜ್. ಸಂಸ್ಥೆಯಲ್ಲಿಯೇ ಅವರು ಇಂಗ್ಲಿಷ್ ಕಲಿಯಲು ಪ್ರಾರಂಭಿಸಿದರು.
ಆಗ ಧೀರಜ್ ಬಳಿ ಇದ್ದದ್ದು ಸಣ್ಣ ಫೋನ್. ವಾರದಲ್ಲೊಮ್ಮೆ ಮಾತ್ರ 3 ಗಂಟೆ ಬಳಸಲು ಅವಕಾಶವಿತ್ತಂತೆ. ಒಮ್ಮೆ ಯೂಟ್ಯೂಬ್‌ನಲ್ಲಿ ಯಾರೋ ಇಂಗ್ಲಿಷ್ ಕಲಿಸುವುದನ್ನು ನೋಡಿದಾಗ ಅದು ಆಕರ್ಷಿಸಿತಂತೆ. ಇಂಗ್ಲಿಷ್ ಹಾಡುಗಳನ್ನು ಹಾಡುವ ಹುಚ್ಚು ಅಮೆರಿಕನ್ ಉಚ್ಚರಣೆ ಕಲಿಯಲು ಪ್ರೇರೇಪಿಸಿತಂತೆ.
ಬಳಿಕ ಊರಿಗೆ ಹಿಂದಿರುಗಿದ ಧೀರಜ್, ಆನ್‌ಲೈನ್‌ನಲ್ಲಿ ಹೆಚ್ಚಿನ ಸಂಖ್ಯೆಯ ವೀಡಿಯೊಗಳನ್ನು ವೀಕ್ಷಿಸುವ ಮೂಲಕ ಪ್ರಸ್ತುತ ತಮ್ಮ ರೀಲ್‌ಗಳಲ್ಲಿ ಬಳಸುತ್ತಿರುವ [ಅಮೇರಿಕನ್] ಉಚ್ಚಾರಣೆಯನ್ನು ಕಲಿಯಲು ಪ್ರಾರಂಭಿಸಿದರು. ಅಲ್ಲದೆ, ಈ ಹೊತ್ತಿಗೆ, 4G ಇಂಟರ್ನೆಟ್ ಸಂಪರ್ಕದೊಂದಿಗೆ ಸ್ಮಾರ್ಟ್ಫೋನ್ ಹೊಂದಿದ್ದರು.
ಲಾಕ್‌ಡೌನ್ ಸಮಯದಲ್ಲಿ ಫೋಟೋ, ವಿಡಿಯೋ ಎಡಿಟಿಂಗ್ ಕಲಿತ ಧೀರಜ್, 'ನಾನು ಸುಮಾರು ನಾಲ್ಕು ವರ್ಷಗಳಿಂದ ಪಾಶ್ಚಿಮಾತ್ಯ ಉಚ್ಚಾರಣೆಯಲ್ಲಿ ಇಂಗ್ಲಿಷ್ ಮಾತನಾಡುವುದನ್ನು ಕಲಿಯುತ್ತಿರುವುದರಿಂದ, ನನ್ನಂತಹ ಇತರರಿಗೆ ಕಲಿಸಲು ಬಯಸಿ ವಿಡಿಯೋ ಮಾಡಲಾರಂಭಿಸಿದೆ' ಎನ್ನುತ್ತಾರೆ.
ಸೀರೆಯಲ್ಲಿ ಅಪ್ಸರೆಯಂತೆ ಕಂಡ ಕಾಂತಾರ ಲೀಲಾ: ಸಂಸ್ಕೃತಿ ಅಂದ್ರೇ ನಮ್ ಸಪ್ತಮಿ ಗೌಡ ಏನಂತೀರಾ ಎಂದ ಫ್ಯಾನ್ಸ್!
ಅಕ್ಟೋಬರ್ 2023ರಿಂದ ಧೀರಜ್ ಇಂಥ ಅಮೆರಿಕನ್ ಇಂಗ್ಲಿಷ್ ಕಲಿಸುವಂಥ ವಿಡಿಯೋ ಪ್ರತಿದಿನ ಹಾಕಲಾರಂಭಿಸಿದರು. ಆರಂಭದಲ್ಲಿ ಅವರ ವಿಡಿಯೋ ಟ್ರೋಲ್‌ಗೆ ಒಳಗಾಯಿತು. ಕೆಲವರು ದ್ವೇಷದ ಕಾಮೆಂಟ್ ಹಾಕಲಾರಂಭಿಸಿದರು. ಆದರೆ, 7ಡಿಸೆಂಬರ್ 2023 ರಂದು 160 ಇದ್ದ ಅವರ ಅನುಯಾಯಿಗಳ ಸಂಖ್ಯೆ 20 ಜನವರಿ 2024 ರಂದು 1 ಮಿಲಿಯನ್‌ಗೆ ಏರಿತು. ಅಂದರೆ, ಕೇವಲ 44 ದಿನಗಳಲ್ಲಿ 1 ಮಿಲಿಯನ್ ಬೆಂಬಲಿಗರನ್ನು ಸಂಪಾದಿಸಿದ್ದಾರೆ ಧೀರಜ್. ಇದೀಗ ಸಾಕಷ್ಟು ಬ್ರ್ಯಾಂಡ್‌ಗಳು ಪ್ರಚಾರದ ವಿಡಿಯೋ ಮಾಡಲು ಧೀರಜ್‌ರನ್ನು ಸಂಪರ್ಕಿಸುತ್ತಿವೆಯಂತೆ. ಶೀಘ್ರದಲ್ಲೇ ಬದುಕು ಬದಲಾಗುವ ನಿರೀಕ್ಷೆಯಲ್ಲಿದ್ದಾರೆ ಧೀರಜ್.
ಪ್ರಸ್ತುತ, ಅವರ ಪೋಷಕರು ನಿರುದ್ಯೋಗಿಗಳಾಗಿದ್ದಾರೆ. ಆದರೆ ಅವರ ಹಿರಿಯ ಸಹೋದರ ಸ್ಥಳೀಯ ಜನ ಸೇವಾ ಕೇಂದ್ರವನ್ನು ನಡೆಸುತ್ತಿದ್ದಾರೆ.