ಕೇಸ್ ಆಫ್ ಕೊಂಡಾಣ ಅದ್ಭುತ ಇಂಗ್ಲಿಷ್ ಸಿನಿಮಾದಂತಿದೆ: ಶಿವರಾಜ್‌ಕುಮಾರ್

ಭರ್ಜರಿ ಪ್ರದರ್ಶನ ಕಾಣುತ್ತಿದೆ ‘ಕೇಸ್ ಆಫ್ ಕೊಂಡಾಣ’ ಸಿನಿಮಾ. ಸಿನಿಮಾ ನೋಡಿ ಮೆಚ್ಚಿಕೊಂಡಾಡಿದ ಶಿವಣ್ಣ.
 

Vijay Raghavendra Case of Kondana is amazing film says Shivarajkumar vcs

‘ತುಂಬಾ ಸಹಜವಾಗಿ ಮಾಡಿರುವ ಸಿನಿಮಾ ಕೇಸ್ ಆಫ್ ಕೊಂಡಾಣ. ಇದನ್ನು ನೋಡುತ್ತಿದ್ದರೆ ನೆಟ್‌ಫ್ಲಿಕ್ಸ್‌ನಲ್ಲಿ ಯಾವುದೋ ಇಂಗ್ಲಿಷ್‌ ಸಿನಿಮಾ ನೋಡುತ್ತಿದ್ದಂತೆ ಭಾಸವಾಯಿತು. ಬೇರೆ ಭಾಷೆಯವರು ಈ ಸಿನಿಮಾ ನೋಡಿದರೆ ಕೊಂಡಾಡುವಂತಿದೆ. ಅದ್ಭುತವಾಗಿ ನಿರ್ದೇಶನ ಮಾಡಿದ್ದಾರೆ ದೇವಿಪ್ರಸಾದ್ ಶೆಟ್ಟಿ’ ಎಂದು ಶಿವರಾಜ್‌ ಕುಮಾರ್‌ ಹೇಳಿದ್ದಾರೆ.

ವಿಜಯ ರಾಘವೇಂದ್ರ ನಟನೆಯ ‘ಕೇಸ್ ಆಫ್ ಕೊಂಡಾಣ’ ಸಿನಿಮಾ ನೋಡಿ ಮೆಚ್ಚಿಕೊಂಡ ಶಿವರಾಜ್‌ ಕುಮಾರ್‌, ‘ಅಸಹಾಯಕ ಸ್ಥಿತಿಯಲ್ಲಿನ ಮನುಷ್ಯನ ವರ್ತನೆಗಳನ್ನು ಬಹಳ ಚೆನ್ನಾಗಿ ತೋರಿಸಿದ್ದಾರೆ. ಪ್ರತಿಯೊಬ್ಬ ಪಾತ್ರಧಾರಿಯೂ ಸೊಗಸಾಗಿ ನಟಿಸಿದ್ದಾರೆ. ಗಗನ್ ಬಡೇರಿಯಾ ಹಿನ್ನೆಲೆ ಸಂಗೀತ ಬಹಳ ಚೆನ್ನಾಗಿದೆ’ ಎಂದು ಹೇಳಿದರು.ಶ್ರೀಮುರಳಿ, ತರುಣ್ ಸುಧೀರ್ ಮುಂತಾದವರೂ ಈ ಸಿನಿಮಾ ನೋಡಿದ್ದು, ಸಿನಿಮಾವನ್ನು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ಜ.26ರಂದು ಬಿಡುಗಡೆಯಾದ ಈ ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Case of Kondana Review ತೀವ್ರವಾಗಿ ಕಾಡುವ ಕ್ರೈಮ್ ಥ್ರಿಲ್ಲರ್‌

ಕೇಸ್‌ ಆಫ್‌ ಕೊಂಡಾಣ ಭಿನ್ನ ಬಗೆಯ ಕ್ರೈಮ್‌ ಥ್ರಿಲ್ಲರ್‌. ಕಾಲವನ್ನೇ ಪ್ರೇಕ್ಷಕನೆದುರು ಅಪರಾಧಿಯಂತೆ ಕಟ ಕಟೆಯಲ್ಲಿ ನಿಲ್ಲಿಸಿಬಿಡುವುದು, ಪರಮ ವೇಗದ ಸ್ಕ್ರೀನ್‌ಪ್ಲೇ ಈ ಸಿನಿಮಾದ ಹೆಚ್ಚುಗಾರಿಕೆ ಎನ್ನಬಹುದು.ಕಾಲನ ನಿರ್ದಯತೆಯಲ್ಲಿ ಸಂಭವಿಸುವ ಕೆಲವು ಆಕಸ್ಮಿಕಗಳು ಬದುಕುಗಳನ್ನು ಹೇಗೆ ಅಡಿಮೇಲು ಮಾಡುತ್ತವೆ ಎಂಬುದಿಲ್ಲಿ ಪರಿಣಾಮಕಾರಿಯಾಗಿ ಬಿಂಬಿತವಾಗಿದೆ. ಜೊತೆಗೆ ಡೀಟೇಲಿಂಗ್‌ಅನ್ನು ತೀವ್ರವಾಗಿ ಕಟ್ಟಿಕೊಡಲಾಗಿದೆ. ವಿಜಯ ರಾಘವೇಂದ್ರ ಭಯ, ಉದ್ವೇಗವನ್ನು ನಟನೆಯಲ್ಲಿ ತಂದ ರೀತಿಯೇ ಅವರೆಂಥಾ ಕಲಾವಿದ ಎಂಬುದನ್ನು ಹೇಳುತ್ತದೆ. ಭಾವನಾ ಮೆನನ್‌ ಬಹಳ ತೀವ್ರವಾಗಿ ಅಭಿನಯಿಸಿದ್ದಾರೆ. ಖುಷಿ ರವಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಂಭಾಷಣೆ ಚುರುಕಾಗಿದೆ. ಛಾಯಾಗ್ರಹಣ ಚೆನ್ನಾಗಿದೆ.

 

Latest Videos
Follow Us:
Download App:
  • android
  • ios