Asianet Suvarna News Asianet Suvarna News

ಕಾಮಗಾರಿ ಮುಗಿದ ನಾಲ್ಕೇ ತಿಂಗಳಲ್ಲಿ ಬಿರುಕುಬಿಟ್ಟ ಶಾಲಾ ಕಟ್ಟಡ!

ಕೋಲಾರ ಜಿಲ್ಲೆಯ ಕರಿಪಲ್ಲಿ ಗ್ರಾಮದಲ್ಲಿ ನೂತನವಾಗಿ ಜಿಲ್ಲಾ ಪಂಚಾಯತ್ ಕೋಲಾರ ವತಿಯಿಂದ 10.60 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶಾಲಾ ಕಟ್ಟಡ, ಕೇವಲ ನಾಲ್ಕು ತಿಂಗಳಲ್ಲೇ ಬಿರುಕುಬಿಟ್ಟಿದೆ! ಕಳಪೆ ಕಾಮಗಾರಿ ಬಗ್ಗ ತನಿಖೆ ನಡೆಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ

The school building cracked in just four months after the work was completed kolar rav
Author
First Published Sep 4, 2022, 8:20 AM IST

ಕೋಲಾರ (ಸೆ.4) : ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ವಿರುದ್ಧ ಕಮಿಷನ್ ಆರೋಪ ಬೆನ್ನಲ್ಲೇ ಗುತ್ತಿಗೆದಾರರಿಂದ ಇದೀಗ ಎಡವಟ್ಟು ಆಗಿದೆ. ಸಚಿವರು ಕಮಿಷನ್ ಕೇಳುತ್ತಿದ್ದಾರೆಂದು ಆರೋಪಿಸಿದ್ದರು ಆದರೆ ಕಮಿಷನ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದಂತಹ ಸಚಿವರು ಕಾಮಗಾರಿಗಳನ್ನು ಪರಿಶೀಲನೆ ಮಾಡುತ್ತೇನೆ ಎಂದಾಗ ಈ ರೀತಿಯಾಗಿ ಸುಳ್ಳು ಆರೋಪಗಳು ಮಾಡುತ್ತಿದ್ದಾರೆಂದು ಪ್ರತಿಕ್ರಿಯೆ ನೀಡಿದ್ದರು ಈ ಆರೋಪಗಳ ಬೆನ್ನಲ್ಲೇ ಗುತ್ತಿಗೆದಾರನ ಎಡವಟ್ಟು ಆಗಿದೆ.

ಶಾಲಾ ಛಾವಣಿ ಬಿದ್ದು ವಿದ್ಯಾರ್ಥಿನಿ ಸಾವು: ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಲು ಒತ್ತಾಯ

ಹೌದು ಕೋಲಾರ(Kolara) ಜಿಲ್ಲೆಯ ಶ್ರೀನಿವಾಸಪುರ(Shrinivasapura) ತಾಲ್ಲೂಕಿನ ಕೋಡಿಪಲ್ಲಿ(Kodipalli) ಗ್ರಾಮ ಪಂಚಾಯತಿ ವ್ಯಾಪ್ತಿಯ  ಕರಿಪಲ್ಲಿ(Karipalli) ಗ್ರಾಮದಲ್ಲಿ ನೂತನವಾಗಿ ಜಿಲ್ಲಾ ಪಂಚಾಯತ್ ಕೋಲಾರ ವತಿಯಿಂದ 10.60 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಅಂತಹ ಶಾಲಾ ಕಟ್ಟಡ ಕಾಮಗಾರಿ ಪೂರ್ಣಗೊಂಡು ಕೇವಲ ನಾಲ್ಕು ತಿಂಗಳಲ್ಲಿಯೇ ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದ್ದು, ಗೋಡೆಗಳು ಸಂಪೂರ್ಣವಾಗಿ ಬಿರುಕು ಬಿಟ್ಟಿದೆ. ಮೇಲ್ಛಾವಣಿ ಸಂಪೂರ್ಣವಾಗಿ ಸೋರುತ್ತಿದ್ದು ಕೈಯಿಂದ ಪರಿಚಿದರೆ ಸಾಕು ಮಣ್ಣು ಸಂಪೂರ್ಣವಾಗಿ ಕೈಗೆ ಬರುತ್ತಿದೆ ಅಧಿಕಾರಿಗಳ ಎಡವಟ್ಟಿನಿಂದ  ಪ್ರತಿನಿತ್ಯ ಭಯದಲ್ಲಿಯೇ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಹಳೆಯ ಎರಡು ಕಟ್ಟಡಗಳಿದ್ದು ಅದರಲ್ಲಿ 30 ವಿದ್ಯಾರ್ಥಿಗಳಿದ್ದಾರೆ. ಆ ಎರಡು ಕಟ್ಟಡಗಳು ಸಂಪೂರ್ಣವಾಗಿ ಶಿಥಿಲಾವಸ್ಥೆಯಲ್ಲಿರುವ ಕಾರಣದಿಂದಾಗಿ ನೂತನವಾಗಿ ಸರ್ಕಾರಿ ಶಾಲಾ ಕಟ್ಟಡ ಮಂಜೂರಾಗಿ ನಿರ್ಮಿಸಲಾಗಿದ್ದು ಆ ಕಟ್ಟಡ ಗುತ್ತಿಗೆದಾರರ ಅಲಕ್ಷ್ಯ, ಕಳಪೆ ಕಾಮಗಾರಿಯಿಂದಾಗಿ ಪೂರ್ಣಗೊಂಡ ಕೇವಲ ನಾಲ್ಕು ತಿಂಗಳಲ್ಲಿ ಶಿಥಿಲಾವಸ್ಥೆ ತಲುಪಿದೆ. ಮಳೆ ಸುರಿದು ಕಟ್ಟಡದೊಳಗೆ ಮಳೆ ನೀರು ಇಳಿದಿರುವುದರಿಂದ ಯಾವಾಗ ಕುಸಿದು ಬಿಳುತ್ತೋ ಎಂಬ ಆತಂಕದಲ್ಲೇ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಕಳಪೆ ಕಾಮಗಾರಿ ಬಗ್ಗೆ ತನಿಖೆಯಾಗಬೇಕಿದೆ.

ಸೋರುತ್ತಿರುವ ಸರ್ಕಾರಿ ಶಾಲಾ ಕಟ್ಟಡ: ಮಕ್ಕಳ ಗೋಳು ನೋಡಲಾಗದೇ ಶಾಲೆಯ ಛಾವಣಿ ಏರಿದ ಪೋಷಕರು

 ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಮಕ್ಕಳಿಗೆ ಕಟ್ಟಡದ ವ್ಯವಸ್ಥೆಯನ್ನು ಕಲ್ಪಿಸಿ ಎಂದು ಗ್ರಾಮಸ್ಥರು, ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

Follow Us:
Download App:
  • android
  • ios