ಹಳೆಯ ಶಿಕ್ಷಣ ವ್ಯವಸ್ಥೆ ಬದಲಾಗಲಿ: ಶಾಸಕ ಜ್ಯೋತಿ ಗಣೇಶ್
: ರಾಜ್ಯದಲ್ಲಿ ಶೇ.50ರಷ್ಟುವಿದ್ಯಾರ್ಥಿಗಳು ಖಾಸಗಿ ಶಾಲೆಯಲ್ಲಿ, ಶೇ.40ರಷ್ಟುವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಖಾಸಗಿ ಇರಲಿ, ಸರ್ಕಾರಿ ಇರಲಿ ಹಳೆಯ ಶಿಕ್ಷಣ ವ್ಯವಸ್ಥೆ ಬದಲಾಗಬೇಕು ಎಂದು ಶಾಸಕ ಜ್ಯೋತಿ ಗಣೇಶ್ ತಿಳಿಸಿದರು.
ತುಮಕೂರು (ಸೆ.6) : ರಾಜ್ಯದಲ್ಲಿ ಶೇ.50ರಷ್ಟುವಿದ್ಯಾರ್ಥಿಗಳು ಖಾಸಗಿ ಶಾಲೆಯಲ್ಲಿ, ಶೇ.40ರಷ್ಟುವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಖಾಸಗಿ ಇರಲಿ, ಸರ್ಕಾರಿ ಇರಲಿ ಹಳೆಯ ಶಿಕ್ಷಣ ವ್ಯವಸ್ಥೆ ಬದಲಾಗಬೇಕು ಎಂದು ಶಾಸಕ ಜ್ಯೋತಿ ಗಣೇಶ್ ತಿಳಿಸಿದರು. ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಯ ಆಡಿಟೋರಿಯಂ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶೈಕ್ಷಣಿಕ ಜಿಲ್ಲೆ ತುಮಕೂರು ಸಂಯುಕ್ತಾಶ್ರಯದಲ್ಲಿ ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ 135ನೇ ಜನ್ಮದಿನಾಚರಣೆ ಮತ್ತು ನಿವೃತ್ತ ಹಾಗೂ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದಲ್ಲಿ ಬದಲಾಗುತ್ತಾ ಶಿಕ್ಷಣ ನೀತಿ ? ಮಕ್ಕಳು ಹೇಗೆ ಕಲಿಯುತ್ತಾರೆ?
ಮಕ್ಕಳಲ್ಲಿ ಸಾಕಷ್ಟುಮಾಹಿತಿ ಇರುತ್ತದೆ, ಅದನ್ನು ಜ್ಞಾನವನ್ನಾಗಿ ಪರಿವರ್ತಿಸುವ ಕೆಲಸವಾಗಬೇಕಿದೆ. ಶಿಕ್ಷಕರು(Teachers) ಮಕ್ಕಳಿಗೆ ಸ್ಫೂರ್ತಿ(inspiration) ತುಂಬುವ ಕೆಲಸ ಮಾಡಬೇಕು ಎಂದರು. ಇಡೀ ದೇಶದ ದಿಕ್ಸೂಚಿಯನ್ನು ಬದಲಿಸುವಂತಹ ಸಾಮರ್ಥ್ಯ ಶಿಕ್ಷಣ(Education) ವ್ಯವಸ್ಥೆಗಿದೆ. ಆದುದರಿಂದ ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ಶಿಕ್ಷಕರ ದಿನಾಚರಣೆ(Teachers Day) ಅತ್ಯಂತ ಮಹತ್ವ ಪೂರ್ಣವಾಗಿದ್ದು, ಈ ದಿನಾಚರಣೆಯನ್ನು ನಾವಿಂದು ಅರ್ಥಪೂರ್ಣವಾಗಿ ಆಚರಿಸೋಣ ಎಂದರು. ಡಾ. ವೀರೇಶಾನಂದ ಸರಸ್ವತಿ ಸ್ವಾಮೀಜಿ(Dr.Veereshanand saraswati swamiji) ಮಾತನಾಡಿ, ಶಿಕ್ಷಕ ವೃತ್ತಿ ನನಗೆ ಹೆಚ್ಚು ಖುಷಿಯನ್ನು ನೀಡಿತ್ತು ಎಂದು ಸರ್ವಪಲ್ಲಿ ರಾಧಾಕೃಷ್ಣನ್(Dr.Sarvapalli Radhakrishnan) ಅವರು ತನ್ನ ಶಿಷ್ಯ ಕನ್ನಡಿಗ ಎನ್. ಮೂರ್ತಿರಾಯರೊಂದಿಗೆ ಹಂಚಿಕೊಂಡ ಮಾತುಗಳನ್ನು ಸ್ಮರಿಸಿದರು.
ಸ್ವಾಮಿ ವಿವೇಕಾನಂದರ(Swamy Vivekananda) ನಂತರ ವಿಶ್ವದಾದ್ಯಂತ ಅತ್ಯಂತ ಹೆಚ್ಚು ಉಪನ್ಯಾಸಗಳನ್ನು ನೀಡಿದ ಶ್ರೇಷ್ಠ ದಾರ್ಶನಿಕ, ತತ್ವಜ್ಞಾನಿ, ವಿದ್ವಾಂಸ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಮೈಸೂರು ವಿಶ್ವವಿದ್ಯಾನಿಲಯ(Mysuru University)ದ ಪ್ರಾಧ್ಯಾಪಕರಾಗಿರುತ್ತಾರೆ. ಅಲ್ಲಿಂದ ಮದ್ರಾಸ್ ವಿಶ್ವವಿದ್ಯಾಲಯಕ್ಕೆ ವರ್ಗಾವಣೆ ಆದ ಸಂದರ್ಭದಲ್ಲಿ ಅಲ್ಲಿನ ವಿದ್ಯಾರ್ಥಿಗಳು ಭಾವುಕರಾಗಿ ಗುರುಗಳಾದ ರಾಧಾಕೃಷ್ಣನ್‌ರನ್ನು ಸಾರೋಟಿನಲ್ಲಿ ಕೂರಿಸಿ ರೈಲ್ವೆ ನಿಲ್ದಾಣದವರೆಗೆ ಕರೆತಂದು ಬೀಳ್ಕೊಟ್ಟಪ್ರಸಂಗವನ್ನು ನೆರೆದಿದ್ದ ಅಪಾರ ಶಿಕ್ಷಕ ವೃಂದದ ಮುಂದೆ ತೆರೆದಿಟ್ಟರು.
ಶಿಕ್ಷಕರಾದವರು ತಮ್ಮ ವಿದ್ಯಾರ್ಥಿಗಳ ಬದುಕನ್ನು ಕಟ್ಟಿಕೊಡುವಂತ ಗುರುವಾಗಬೇಕು. ಇಲ್ಲವಾದರೇ ಮಕ್ಕಳು ಹಾದಿ ತಪ್ಪುತ್ತಾರೆ ಎಂಬ ಮಾತನ್ನು ಒಂದು ದೃಷ್ಠಾಂತದ ಮೂಲಕ ಶ್ರೀಗಳು ಉದಹರಿಸಿದರು. ರಾಷ್ಟ್ರವಿರುವುದು ಶಿಕ್ಷಕರ ಕೈಯಲ್ಲಿ ಅವರು ಉತ್ತಮ ಪ್ರಜೆಗಳನ್ನಾಗಿ ರೂಪಿಸಿದರೆ ರಾಷ್ಟ್ರ ಉತ್ತಮವಾಗಿರುತ್ತದೆ. ಶಿಕ್ಷಕನಿಗೆ ಕಲಿಯಲು ಆಸಕ್ತಿಯಿಂದ ಇದ್ದರೆ ಮಾತ್ರ ಉನ್ನತವಾದುದನ್ನು ಕಲಿಸಲು ಸಾಧ್ಯ. ಶಿಕ್ಷಕ ನಿಂತ ನೀರಾಗದೇ ಸದಾ ಚಲನಶೀಲರಾಗಿರಬೇಕು. ಶಿಕ್ಷಣ ಯಾವತ್ತಿಗೂ ಫಲಿತಾಂಶ ಆಧಾರಿತವಾಗಿರಬಾರದು ಮಕ್ಕಳ ಜ್ಞಾನ ವಿಕಾಸವಾಗುವಂತಹ ಅಂಶಗಳನ್ನು ತುಂಬಬೇಕು ಎಂದರು.
Teachers Day 2022: ಶಿಕ್ಷಕರು ಜೀವನದಲ್ಲಿ ಯಾಕೆ ಮುಖ್ಯ ಗೊತ್ತಾ?
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಪಂ ಸಿಇಓ ಡಾ.ಕೆ. ವಿದ್ಯಾಕುಮಾರಿ, ಡಿಡಿಪಿಐ ಸಿ.ನಂಜಯ್ಯ, ಡಿಡಿಪಿಯು ಗಂಗಾಧರ್, ಬಿಇಓ ಹನುಮನಾಯಕ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ ಮತ್ತು ಸಹಶಿಕ್ಷಕ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಧಾನ ಮಂತ್ರಿಗಳು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದು, ಈ ನೀತಿ ಪರಿಣಾಮಕಾರಿಯಾಗಿ ಅನುಷ್ಠಾನವಾದಲ್ಲಿ ಕಂಡಿತವಾಗಿಯೂ ನಮ್ಮ ದೇಶ ಇಡೀ ಜಗತ್ತಿಗೆ ವಿಶ್ವ ಗುರುವಾಗಲಿದೆ. ಈ ನೂತನ ಶಿಕ್ಷಣ ನೀತಿ ಕಂಡಿತವಾಗಿಯೂ ಉತ್ತಮ ವಿದ್ಯಾರ್ಥಿಗಳನ್ನು ಮತ್ತು ದೇಶಭಕ್ತರನ್ನು ನೀಡುವುದರಲ್ಲಿ ಅನುಮಾನವಿಲ್ಲ.
ಜ್ಯೋತಿ ಗಣೇಶ್ ಶಾಸಕ