2023 NIRF Ranking ಸೋಮವಾರ ಬಿಡುಗಡೆ ಮಾಡಲಾಗಿದೆ ಮತ್ತು ಐಐಟಿ ಮದ್ರಾಸ್ ಸತತ ಐದನೇ ವರ್ಷ ದೇಶದ ಅತ್ಯುನ್ನತ ಸಂಸ್ಥೆ ಎನಿಸಿಕೊಂಡಿದೆ. ಒಟ್ಟಾರೆಯಾಗಿ ಭಾರತದಲ್ಲಿನ ಟಾಪ್ 10 ಸಂಸ್ಥೆಗಳನ್ನು ಮತ್ತು ಪ್ರತಿ ವರ್ಗದ ಅಗ್ರ ಐದು ಸಂಸ್ಥೆಗಳನ್ನು ಇಲ್ಲಿ ನೀಡಲಾಗಿದೆ.

ನವದೆಹಲಿ (ಜೂ.6):  2023 ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (NIRF) ಶ್ರೇಯಾಂಕವನ್ನು ಶಿಕ್ಷಣ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ರಾಜ್‌ಕುಮಾರ್ ರಂಜನ್ ಸಿಂಗ್ ಅವರು ಬಿಡುಗಡೆ ಮಾಡಿದ್ದಾರೆ. ಎನ್‌ಐಆರ್‌ಎಫ್‌ನ ಅಧಿಕೃತ ವೆಬ್‌ಸೈಟ್ nirfindia.org ನಲ್ಲಿ ಶ್ರೇಯಾಂಕಗಳನ್ನು ಪರಿಶೀಲನೆ ಕೂಡ ಮಾಡಬಹುದಾಗಿದೆ ಶ್ರೇಯಾಂಕಗಳು ನಾಲ್ಕು ವಿಭಾಗಗಳನ್ನು ಒಳಗೊಂಡಿದೆ. ಸಮಗ್ರ, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಾಗಿವೆ. ಇನ್ನು ವಿಷಯವಾರುವ ವಿಭಾಗಗಳಲ್ಲಿ ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್‌ ಫಾರ್ಮಸಿ, ಕಾನೂನು, ವೈದ್ಯಕೀಯ, ವಾಸ್ತುಶಿಲ್ಪ ಮತ್ತು ಪ್ಲ್ಯಾನಿಂಗ್‌, ದಂತ ವೈದ್ಯಕೀಯ ಮತ್ತು ಹೊಸ ಸೇರ್ಪಡೆಯಾಗಿ ಕೃಷಿ ಮತ್ತು ಸಂಬಂಧಿತ ವಲಯಗಳನ್ನು ಒಳಗೊಂಡಿವೆ. ಚೆನ್ನೈನ ಐಐಟಿ ಮದ್ರಾಸ್‌ ಸಂಸ್ಥೆ ಸತತ ಐದನೇ ವರ್ಷ ಸಮಗ್ರ ವಿಭಾಗದ ಶ್ರೇಯಾಂಕದಲ್ಲಿ ಮೊದಲ ಸ್ಥಾನ ಸಂಪಾದಿಸಿದೆ. ಅದರೊಂದಿಗೆ ಇಂಜಿನಿಯರಿಂಗ್‌ ವಿಭಾಗದಲ್ಲೂ ದೇಶದ ಅತ್ಯುನ್ನತ ಸಂಸ್ಥೆ ಎನಿಸಿಕೊಂಡಿದೆ. ಅದರೊಂದಿಗೆ ಹಿಂದಿನ ವರ್ಷದ ಕ್ರಮವನ್ನೇ ಕಾಪಾಡಿಕೊಂಡು ಬಂದಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮತ್ತೊಮ್ಮೆ ಎನ್‌ಐಆರ್‌ಎಫ್ ಶ್ರೇಯಾಂಕ 2023 ರಲ್ಲಿ ವಿಶ್ವವಿದ್ಯಾನಿಲಯಗಳ ವಿಣಾಗದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದರೆ, ಜೆಎನ್‌ಯು ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಎರಡನೇ ಮತ್ತು ಮೂರನೇ ಸ್ಥಾನಗಳಲ್ಲಿವೆ. ಐಐಎಸ್‌ಸಿ ಬೆಂಗಳೂರು ಕೂಡ ಸಮಗ್ರ ವಿಭಾಗದಲ್ಲಿ ಎರಡನೇ ಅತ್ಯುತ್ತಮ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ.

NIRF RANKING 2023: ಸಮಗ್ರ ವಿಭಾಗದಲ್ಲಿ ದೇಶದ 10 ಅತ್ಯುನ್ನತ ಸಂಸ್ಥೆಗಳು

Rank 1: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಮದ್ರಾಸ್, ಸ್ಥಳ: ಚೆನ್ನೈ, ತಮಿಳುನಾಡು

Rank 2: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಬೆಂಗಳೂರು, ಸ್ಥಳ: ಬೆಂಗಳೂರು, ಕರ್ನಾಟಕ

Rank 3: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT), ನವದೆಹಲಿ, ದೆಹಲಿ

Rank 4: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಬಾಂಬೆ, ಮುಂಬೈ, ಮಹಾರಾಷ್ಟ್ರ

Rank 5: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಕಾನ್ಪುರ, ಸ್ಥಳ: ಕಾನ್ಪುರ, ಉತ್ತರ ಪ್ರದೇಶ

Rank 6: ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS), ಸ್ಥಳ: ನವದೆಹಲಿ, ದೆಹಲಿ

Rank 7: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಖರಗ್‌ಪುರ, ಸ್ಥಳ: ಖರಗ್‌ಪುರ, ಪಶ್ಚಿಮ ಬಂಗಾಳ

Rank 8: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ರೂರ್ಕಿ, ಸ್ಥಳ: ರೂರ್ಕಿ, ಉತ್ತರಾಖಂಡ

Rank 9: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಗುವಾಹಟಿ, ಸ್ಥಳ: ಗುವಾಹಟಿ, ಅಸ್ಸಾಂ

Rank 10: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU), ಸ್ಥಳ: ನವದೆಹಲಿ, ದೆಹಲಿ


NIRF RANKINGS: ದೇಶದ ಐದು ಅತ್ಯುತ್ತಮ ವಿಶ್ವವಿದ್ಯಾಲಯಗಳು

Rank 1: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಬೆಂಗಳೂರು, ಸ್ಥಳ: ಬೆಂಗಳೂರು, ಕರ್ನಾಟಕ

Rank 2: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU), ಸ್ಥಳ: ನವದೆಹಲಿ, ದೆಹಲಿ

Rank 3: ಜಾಮಿಯಾ ಮಿಲಿಯಾ ಇಸ್ಲಾಮಿಯಾ (JMI), ಸ್ಥಳ: ನವದೆಹಲಿ, ದೆಹಲಿ

Rank 4: ಜಾದವ್‌ಪುರ ವಿಶ್ವವಿದ್ಯಾಲಯ (JU), ಸ್ಥಳ: ಕೋಲ್ಕತ್ತಾ, ಪಶ್ಚಿಮ ಬಂಗಾಳ

Rank 5: ಬನಾರಸ್ ಹಿಂದೂ ವಿಶ್ವವಿದ್ಯಾಲಯ (BHU), ಸ್ಥಳ: ವಾರಣಾಸಿ, ಉತ್ತರ ಪ್ರದೇಶ


NIRF RANKING 2023: ದೇಶದ ಐದು ಅತ್ಯುತ್ತಮ ಇಂಜಿನಿಯರಿಂಗ್‌ ಸಂಸ್ಥೆಗಳು

Rank 1: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಮದ್ರಾಸ್, ಸ್ಥಳ: ಚೆನ್ನೈ, ತಮಿಳುನಾಡು

Rank 2: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ದೆಹಲಿ, ಸ್ಥಳ: ನವದೆಹಲಿ, ದೆಹಲಿ

Rank 3: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಬಾಂಬೆ, ಸ್ಥಳ: ಮುಂಬೈ, ಮಹಾರಾಷ್ಟ್ರ

Rank 4: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಕಾನ್ಪುರ, ಸ್ಥಳ: ಕಾನ್ಪುರ, ಉತ್ತರ ಪ್ರದೇಶ

Rank 5: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ರೂರ್ಕಿ, ಸ್ಥಳ: ರೂರ್ಕಿ, ಉತ್ತರಾಖಂಡ


NIRF RANKINGS: ದೇಶದ ಐದು ಅತ್ಯುತ್ತಮ ಮ್ಯಾನೇಜ್‌ಮೆಂಟ್‌ ಸಂಸ್ಥೆಗಳು

Rank 1: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ಅಹಮದಾಬಾದ್, ಸ್ಥಳ: ಅಹಮದಾಬಾದ್, ಗುಜರಾತ್

Rank 2: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ಬೆಂಗಳೂರು, ಸ್ಥಳ: ಬೆಂಗಳೂರು, ಕರ್ನಾಟಕ

Rank 3: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ಕೋಝಿಕ್ಕೋಡ್, ಸ್ಥಳ: ಕೋಝಿಕ್ಕೋಡ್, ಕೇರಳ

Rank 4: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ಕಲ್ಕತ್ತಾ, ಸ್ಥಳ: ಕೋಲ್ಕತ್ತಾ, ಪಶ್ಚಿಮ ಬಂಗಾಳ

Rank 5: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ದೆಹಲಿ, ಸ್ಥಳ: ನವದೆಹಲಿ, ದೆಹಲಿ


NIRF RANKING 2023: ದೇಶದ ಐದು ಅತ್ಯುತ್ತಮ ಫಾರ್ಮಸಿ ಸಂಸ್ಥೆಗಳು

Rank 1: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್ (NIPER), ಸ್ಥಳ: ಹೈದರಾಬಾದ್, ತೆಲಂಗಾಣ

Rank 2: ಜಾಮಿಯಾ ಹಮ್ದರ್ದ್(JH), ಸ್ಥಳ: ನವದೆಹಲಿ, ದೆಹಲಿ

Rank 3: ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ (BITS) ಪಿಲಾನಿ, ಸ್ಥಳ: ಪಿಲಾನಿ, ರಾಜಸ್ಥಾನ

Rank 4: ಜೆಎಸ್‌ಎಸ್‌ ಕಾಲೇಜ್ ಆಫ್ ಫಾರ್ಮಸಿ, ಸ್ಥಳ: ಊಟಿ, ತಮಿಳುನಾಡು

Rank 5: ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (ICT)ಸ್ಥಳ: ಮುಂಬೈ, ಮಹಾರಾಷ್ಟ್ರ


NIRF: ಸತತ ಎರಡನೇ ವರ್ಷವೂ ಬೆಂಗಳೂರಿನ ಐಐಎಸ್ಸಿ ದೇಶದ ನಂ.1 ವಿವಿ!

NIRF RANKINGS: ದೇಶದ ಐದು ಅತ್ಯುತ್ತಮ ಕಾಲೇಜುಗಳು

Rank 1: ಮಿರಾಂಡಾ ಹೌಸ್, ಸ್ಥಳ: ನವದೆಹಲಿ, ದೆಹಲಿ

Rank 2: ಹಿಂದೂ ಕಾಲೇಜು, ಸ್ಥಳ: ನವದೆಹಲಿ, ದೆಹಲಿ

Rank 3: ಪ್ರೆಸಿಡೆನ್ಸಿ ಕಾಲೇಜು, ಸ್ಥಳ: ಚೆನ್ನೈ, ತಮಿಳುನಾಡು

Rank 4: PSGR ಕೃಷ್ಣಮ್ಮಲ್ ಮಹಿಳಾ ಕಾಲೇಜು, ಸ್ಥಳ: ಕೊಯಮತ್ತೂರು, ತಮಿಳುನಾಡು

Rank 5: ಸೇಂಟ್ ಕ್ಸೇವಿಯರ್ ಕಾಲೇಜು, ಸ್ಥಳ: ಕೋಲ್ಕತ್ತಾ, ಪಶ್ಚಿಮ ಬಂಗಾಳ

NIRF Rankings 2022: ಮೈಸೂರು ವಿಶ್ವವಿದ್ಯಾನಿಲಯಕ್ಕೆ 33ನೇ ರ‍್ಯಾಂಕ್

NIRF RANKING 2023: ದೇಶದ ಅಗ್ರ 5 ವೈದ್ಯಕೀಯ ಕಾಲೇಜುಗಳು

Rank 1: ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS), ಸ್ಥಳ: ನವದೆಹಲಿ, ದೆಹಲಿ

Rank 2: ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಸ್ನಾತಕೋತ್ತರ ಸಂಸ್ಥೆ, ಸ್ಥಳ: ಚಂಡೀಗಢ, ಚಂಡೀಗಢ

Rank 3: ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು, ಸ್ಥಳ: ವೆಲ್ಲೂರು, ತಮಿಳುನಾಡು

Rank 4: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್(NIMHNS), ಸ್ಥಳ: ಬೆಂಗಳೂರು, ಕರ್ನಾಟಕ

Rank 5: ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್, ಸ್ಥಳ: ಪುದುಚೇರಿ


NIRF RANKING 2023: ದೇಶದ ಅಗ್ರ 5 ಸಂಶೋಧನಾ ಸಂಸ್ಥೆಗಳು

Rank 1: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಬೆಂಗಳೂರು, ಸ್ಥಳ: ಬೆಂಗಳೂರು, ಕರ್ನಾಟಕ

Rank 2: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಮದ್ರಾಸ್, ಸ್ಥಳ: ಚೆನ್ನೈ, ತಮಿಳುನಾಡು

Rank 3: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ದೆಹಲಿ, ಸ್ಥಳ: ನವದೆಹಲಿ, ದೆಹಲಿ

Rank 4: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆ, ಸ್ಥಳ: ಮುಂಬೈ, ಮಹಾರಾಷ್ಟ್ರ

Rank 5: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಖರಗ್‌ಪುರ, ಸ್ಥಳ: ಖರಗ್‌ಪುರ, ಪಶ್ಚಿಮ ಬಂಗಾಳ


NIRF RANKING 2023: ದೇಶದ ಅಗ್ರ 5 ಇನ್ನೋವೇಶನ್‌ ಸಂಸ್ಥೆಗಳು

Rank 1: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಕಾನ್ಪುರ, ಸ್ಥಳ: ಕಾನ್ಪುರ, ಉತ್ತರ ಪ್ರದೇಶ

Rank 2: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಮದ್ರಾಸ್, ಸ್ಥಳ: ಚೆನ್ನೈ, ತಮಿಳುನಾಡು

Rank 3: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಹೈದರಾಬಾದ್, ಸ್ಥಳ: ಹೈದರಾಬಾದ್, ತೆಲಂಗಾಣ

Rank 4: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ದೆಹಲಿ, ಸ್ಥಳ: ನವದೆಹಲಿ, ದೆಹಲಿ

Rank 5: ಭಾರತೀಯ ವಿಜ್ಞಾನ ಸಂಸ್ಥೆ (IISc) ಬೆಂಗಳೂರು, ಸ್ಥಳ: ಬೆಂಗಳೂರು, ಕರ್ನಾಟಕ


NIRF RANKING: ದೇಶದ ಅಗ್ರ 5 ಕಾನೂನು ಕಾಲೇಜುಗಳು

Rank 1: ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ, ಸ್ಥಳ: ಬೆಂಗಳೂರು, ಕರ್ನಾಟಕ

Rank 2: ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (NLU), ಸ್ಥಳ: ನವದೆಹಲಿ, ದೆಹಲಿ

Rank 3: ನಲ್ಸಾರ್ ಕಾನೂನು ವಿಶ್ವವಿದ್ಯಾಲಯ, ಸ್ಥಳ: ಹೈದರಾಬಾದ್, ತೆಲಂಗಾಣ

Rank 4: ಪಶ್ಚಿಮ ಬಂಗಾಳ ರಾಷ್ಟ್ರೀಯ ನ್ಯಾಯಾಂಗ ವಿಜ್ಞಾನ ವಿಶ್ವವಿದ್ಯಾಲಯ, ಸ್ಥಳ: ಕೋಲ್ಕತ್ತಾ, ಪಶ್ಚಿಮ ಬಂಗಾಳ

Rank 5: ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಸ್ಥಳ: ನವದೆಹಲಿ, ದೆಹಲಿ


NIRF RANKING: ದೇಶದ ಅಗ್ರ 5 'ಆರ್ಕಿಟೆಕ್ಚರ್' ಸಂಸ್ಥೆಗಳು

Rank 1: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ರೂರ್ಕಿ, ಸ್ಥಳ: ರೂರ್ಕಿ, ಉತ್ತರಾಖಂಡ

Rank 2: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NIT) ಕ್ಯಾಲಿಕಟ್, ಸ್ಥಳ: ಕೋಝಿಕ್ಕೋಡ್, ಕೇರಳ

Rank 3: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಖರಗ್‌ಪುರ, ಸ್ಥಳ: ಖರಗ್‌ಪುರ, ಪಶ್ಚಿಮ ಬಂಗಾಳ

Rank 4: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NIT) ತಿರುಚಿರಾಪಳ್ಳಿ, ಸ್ಥಳ: ತಿರುಚಿರಾಪಳ್ಳಿ, ತಮಿಳುನಾಡು

Rank 5: ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್, ಸ್ಥಳ: ನವದೆಹಲಿ, ದೆಹಲಿ


NIRF RANKING: ದೇಶದ ಅಗ್ರ 5 ದಂತ ವೈದ್ಯಕೀಯ ಕಾಲೇಜುಗಳು

Rank 1: ಸವೀತಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಅಂಡ್ ಟೆಕ್ನಿಕಲ್ ಸೈನ್ಸಸ್, ಸ್ಥಳ: ಚೆನ್ನೈ, ತಮಿಳುನಾಡು

Rank 2: ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್, ಸ್ಥಳ: ಉಡುಪಿ ಕರ್ನಾಟಕ

Rank 3: ಡಾ.ಡಿ.ವೈ.ಪಾಟೀಲ್ ವಿದ್ಯಾಪೀಠ, ಸ್ಥಳ: ಪುಣೆ, ಮಹಾರಾಷ್ಟ್ರ

Rank 4: ಮೌಲಾನಾ ಆಜಾದ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್, ಸ್ಥಳ: ನವದೆಹಲಿ, ದೆಹಲಿ

Rank 5: ಎಬಿ ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆ, ಸ್ಥಳ: ಮಂಗಳೂರು, ಕರ್ನಾಟಕ


NIRF RANKING: ದೇಶದ ಅಗ್ರ 5 'ಕೃಷಿ ಮತ್ತು ಸಂಬಂಧಿತ' ಸಂಸ್ಥೆಗಳು

Rank 1: ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ಸ್ಥಳ: ನವದೆಹಲಿ, ದೆಹಲಿ

Rank 2: ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ, ಕರ್ನಾಲ್, ಸ್ಥಳ: ಕರ್ನಾಲ್, ಹರಿಯಾಣ

Rank 3: ಪಂಜಾಬ್ ಕೃಷಿ ವಿಶ್ವವಿದ್ಯಾಲಯ, ಸ್ಥಳ: ಲುಧಿಯಾನ, ಪಂಜಾಬ್

Rank 4: ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಸ್ಥಳ: ವಾರಣಾಸಿ, ಉತ್ತರ ಪ್ರದೇಶ

Rank 5: ತಮಿಳುನಾಡು ಕೃಷಿ ವಿಶ್ವವಿದ್ಯಾಲಯ,, ಸ್ಥಳ: ಕೊಯಮತ್ತೂರು, ತಮಿಳುನಾಡು