ಬೆಂಗಳೂರು ವಿವಿಯಲ್ಲಿ ದೇಶದ ಮೊದಲ ಜಪಾನೀಸ್ ಡಿಪ್ಲೋಮಾ ಕೋರ್ಸ್ ಆರಂಭ!
ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಭಾಷಾ ಅಧ್ಯಯನ ಕೇಂದ್ರವು ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ, ಜಪಾನ್ ರಾಯಭಾರಿ ಕಚೇರಿ ಮತ್ತು ಕೈಗಾರಿಕೆಗಳ ಬೆಂಬಲದೊಂದಿಗೆ ಉದ್ಯೋಗಿಗಳಿಗಾಗಿ ದೇಶದಲ್ಲೇ ಮೊದಲ ‘ಜಪಾನೀಸ್ ಭಾಷೆಯಲ್ಲಿ 1 ವರ್ಷದ ಡಿಪ್ಲೊಮಾ ಪದವಿ’ ಆರಂಭಿಸಿದೆ.
ಬೆಂಗಳೂರು (ಅ.10): ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಭಾಷಾ ಅಧ್ಯಯನ ಕೇಂದ್ರವು ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ, ಜಪಾನ್ ರಾಯಭಾರಿ ಕಚೇರಿ ಮತ್ತು ಕೈಗಾರಿಕೆಗಳ ಬೆಂಬಲದೊಂದಿಗೆ ಉದ್ಯೋಗಿಗಳಿಗಾಗಿ ದೇಶದಲ್ಲೇ ಮೊದಲ ‘ಜಪಾನೀಸ್ ಭಾಷೆಯಲ್ಲಿ 1 ವರ್ಷದ ಡಿಪ್ಲೊಮಾ ಪದವಿ’ ಆರಂಭಿಸಿದೆ.
ಇದೇ ಮೊದಲ ಬಾರಿಗೆ ಭಾರತದಲ್ಲಿ ಜಪಾನೀಸ್ ಭಾಷೆಯಲ್ಲಿ ಯುಜಿ ಡಿಪ್ಲೋಮಾ ಕೋರ್ಸ್. ಅದು ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಕೋರ್ಸ್ ಪ್ರಾರಂಭ ಮಾಡಿದ ಹೆಗ್ಗಳಿಕೆಯಾಗಗಿದೆ. ಯುಜಿ ಡಿಪ್ಲೊಮಾ ಜಪಾನೀಸ್ ಭಾಷೆಯಲ್ಲಿ ಕಲಿಕೆ. ಈ ಕೋರ್ಸು ವಿಶೇಷವಾಗಿ ಭಾರತದ ಜಪಾನ್ ಕಂಪನಿಗಳಲ್ಲಿ ಇಲ್ಲವೇ ನೇರ ಜಪಾನ್ ದೇಶದಲ್ಲಿ ಕೆಲಸ ಮಾಡಲಿಚ್ಚಿಸುವವರಿಗೆ ಪೂರಕವಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಪಿಎಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ, ಹೈಕೋರ್ಟ್ ನೋಟಿಸ್
ಜಪಾನ್ ಸಮಾಜದ ಶಿಕ್ಷಣ ವ್ಯವಸ್ಥೆ, ವೃತ್ತಿ ಬದುಕು ಕುರಿತು ವಿನ್ಯಾಸಗೊಳಿಸಲಾಗಿದೆ. ಈ ಕೋರ್ಸು ವ್ಯಾಸಂಗಕ್ಕೆ ಐಟಿಐ ಅಥವಾ ಇನ್ಯಾವುದೇ ತಾಂತ್ರಿಕ, ವೃತ್ತಿಪರ ಶಿಕ್ಷಣದಲ್ಲಿ ಡಿಪ್ಲೊಮಾ ಅಥವಾ ಪದವಿ ಪಡೆದಿರುವ 18 ವರ್ಷ ಮೇಲ್ಪಟ್ಟವರು ಅರ್ಹರಾಗಿರುತ್ತಾರೆ. ಈ ಕೋರ್ಸು ಅಧ್ಯಯನ ಮುಗಿದ ಬಳಿಕ ಕೊನೆಯಲ್ಲಿ ಜಪಾನೀಸ್ ಭಾಷಾ ಪ್ರಾವೀಣ್ಯತೆ ಪರೀಕ್ಷೆ (ಜೆಎಲ್‌ಪಿಟಿ) ಅಥವಾ ಜಪಾನ್ ಅಡಿಪಾಯ ಪರೀಕ್ಷೆ (ಜೆಎಫ್‌ಟಿ) ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದವರಿಗೆ ಜಪಾನ್‌ನಲ್ಲಿ ಕೆಲಸ ಮಾಡುವ ಉದ್ಯೋಗಾವಕಾಶಗಳು ದೊರೆಯಲಿವೆ.
ಸೆಂಟ್ರಲ್ ಕಾಲೇಜು ಜ್ಞಾನಜ್ಯೋತಿ ಸಭಾಂಗಣದ ಜಾಗತಿಕ ಭಾಷಾ ವಿಭಾಗಕ್ಕೆ ಚಾಲನೆ ನೀಡಿದ ಬೆಂಗಳೂರು ನಗರ ವಿವಿ ಕುಲಪತಿ ಡಾ.ಲಿಂಗರಾಜಗಾಂಧಿ ಹಾಗೂ ಜಪಾನೀಸ್ ಜನರಲ್ ಕೌನ್ಸಿಲರ್ ನಾಕಾನೆ. ಜಪಾನೀಸ್ ವಿಭಾಗದ ಮುಖ್ಯಸ್ಥರಾದ ಜ್ಯೋತಿ ವೆಂಕಟೇಶ್ ಕಾರ್ಯಕ್ರಮದಲ್ಲಿ ಬಾಗಿಯಾದ ಬಳಿಕ ಮಾತನಾಡಿದ ಅವರು, ಜಪಾನೀಸ್ ಭಾಷೆ ಕಲಿಕೆಯಿಂದ ಜಪಾನ್ ದೇಶದಲ್ಲಿ ಉದ್ಯೋಗ ಸಿಗಲಿದೆ. ಜಪಾನ್ ಭಾಷೆ ಕಲಿತ ವಿದ್ಯಾರ್ಥಿಗಳಿಗೆ ಜಪಾನ್ ಮೂರು ಲಕ್ಷ ಉದ್ಯೋಗದ ಆಫರ್ ನೀಡಿದೆ. ಜಾಗತಿಕ ಭಾಷೆ ಕಲಿಕೆಯಿಂದ ವಿದ್ಯಾರ್ಥಿಗಳ ಹೆಚ್ಚು ಅನುಕೂಲವಾಗಲಿದೆ ಎಂದರು
Bengaluru university: ಪಿಎಚ್‌ಡಿ ಎಂಟ್ರಿ ಟೆಸ್ಟಲ್ಲಿ ಲೋಪ, ವಿಸಿಗೆ ಪತ್ರ ಬರೆದು ವಿದ್ಯಾರ್ಥಿಗಳು ಅಸಮಾಧಾನ.
ಹೆಚ್ಚಿನ ಮಾಹಿತಿಗೆ ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರದ ನಿರ್ದೇಶಕರಾದ ಜ್ಯೋತಿ ವೆಂಕಟೇಶ್ ಅವರನ್ನು (ದೂ: 080-29572019 / 98453 94890) ಸಂಪರ್ಕಿಸಬಹುದು. ಅಥವಾ ಇಮೇಲ್: cgl.bcu@gmail.comಗೆ ಇ-ಮೇಲ್ ಮಾಡಿ ಮಾಹಿತಿ ಪಡೆಯಬಹುದು ಎಂದು ವಿವಿಯ ಪ್ರಕಟಣೆ ತಿಳಿಸಿದೆ.