Vijayapura: ಗುಮ್ಮಟನಗರಿಯ 52 ಪರೀಕ್ಷಾ ಕೇಂದ್ರಗಳಲ್ಲಿ ಟಿಇಟಿ ಪರೀಕ್ಷೆ!
ರವಿವಾರ 52 ಪರೀಕ್ಷಾ ಕೇಂದ್ರಗಳಲ್ಲಿ ಶಿಕ್ಷಕರ ಅರ್ಹತಾ (ಟಿಇಟಿ) ಪರೀಕ್ಷೆಗಳು ಶಾಂತ ರೀತಿಯಿಂದ ಯಶಸ್ವಿಯಾಗಿ ಜರುಗಿದ್ದು, ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಜಯಪುರ (ನ.06): ರವಿವಾರ 52 ಪರೀಕ್ಷಾ ಕೇಂದ್ರಗಳಲ್ಲಿ ಶಿಕ್ಷಕರ ಅರ್ಹತಾ (ಟಿಇಟಿ) ಪರೀಕ್ಷೆಗಳು ಶಾಂತ ರೀತಿಯಿಂದ ಯಶಸ್ವಿಯಾಗಿ ಜರುಗಿದ್ದು, ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರೀಕ್ಷೆ ಹಿನ್ನೆಲೆ ಕೇಂದ್ರಗಳ ಸುತ್ತ ಬಿಗಿ ಭದ್ರತೆ: ನಗರದ ಬಿ.ಎಂ.ಪಾಟೀಲ ಪಬ್ಲಿಕ್ ಶಾಲೆ, ಕಾಳಿದಾಸ ಪ್ರೌಢ ಶಾಲೆ, ಸರ್ಕಾರಿ ಪಾಲಿಟೆಕ್‌ನಿಕ್ ಕಾಲೇಜಿನಲ್ಲಿ ನಡೆದ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಿ, ವ್ಯವಸ್ಥಿತವಾಗಿ ಪರೀಕ್ಷೆಗಳು ನಡೆಯುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಅಗತ್ಯ ಸಲಹೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗತ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿರಹಟ್ಟಿಮಠ ಉಪಸ್ಥಿತರಿದ್ದರು.
ವಿಜಯಪುರದಲ್ಲಿ ನಿಲ್ಲದ ಕಬ್ಬು ಬೆಳೆಗಾರರ ಅಸಮಾಧಾನ
ಎಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು: ಇಂದು ನಡೆದ ಟಿಇಟಿ ಪರೀಕ್ಷೆಯ ಪ್ರಥಮ ಅಧಿವೇಶನದಲ್ಲಿ ಒಟ್ಟು 10,760 ಅಭ್ಯರ್ಥಿಗಳಲ್ಲಿ 9,844 ಅಭ್ಯರ್ಥಿಗಳು ಹಾಜರಾಗಿದ್ದು 916 ಅಭ್ಯರ್ಥಿಗಳು ಗೈರುಹಾಜರಾಗಿದ್ದರು.ಒಟ್ಟಾರೆ ಶೇ. 91.49ರಷ್ಟು ಅಭ್ಯರ್ಥಿಗಳು ಪ್ರಥಮ ಅಧಿವೇಶನ ಪರೀಕ್ಷೆ ಬರೆದರು. ದ್ವಿತೀಯ ಅಧಿವೇಶನದಲ್ಲಿ 13,407 ಅಭ್ಯರ್ಥಿಗಳ ಪೈಕಿ 12,568 ಅಭ್ಯರ್ಥಿಗಳು ಹಾಜರಾಗಿದ್ದು 839 ಅಭ್ಯರ್ಥಿಗಳು ಗೈರುಹಾಜರಾಗಿದ್ದರು. ಒಟ್ಟಾರೆ ಎರಡನೇ ಅಧೀವೇಶನದಲ್ಲಿ ಶೇ. 93.74 ಹಾಜರಾತಿ ದಾಖಲಾಗಿದ್ದು, ಒಟ್ಟಾರೆ ಶೇ.97.61ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ.
ಶಿಕ್ಷಕರ ಅರ್ಹತೆ ಪರೀಕ್ಷೆ: ರಾಜ್ಯಾದ್ಯಂತ ಭಾನುವಾರ ನಡೆಯಲಿರುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)-2022ಯನ್ನು ಕಟ್ಟುನಿಟ್ಟಾಗಿ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಅಭ್ಯರ್ಥಿಗಳಿಗೆ ಹಲವು ಸೂಚನೆ ನೀಡಿದ್ದು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದೆ.
ಪರೀಕ್ಷೆ ಆರಂಭಕ್ಕೂ ಮುನ್ನ ಒಂದು ಗಂಟೆ ಮೊದಲೇ ಪರೀಕ್ಷಾ ಕೇಂದ್ರದ ಬಳಿ ಅಭ್ಯರ್ಥಿ ಹಾಜರಿರಬೇಕು. ಪರೀಕ್ಷೆ ಆರಂಭಕ್ಕೆ ಅರ್ಧ ಗಂಟೆ ಮೊದಲೇ ಪರೀಕ್ಷಾ ಕೇಂದ್ರದ ಬಾಗಿಲು ಮುಚ್ಚಿ ಪರೀಕ್ಷಾರ್ಥಿಗಳ ತಪಾಸಣೆ ನಡೆಸಲಾಗುವುದು. ಪರೀಕ್ಷೆ ಶುರುವಾದ ನಂತರ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಇರುವುದಿಲ್ಲ. ಒಮ್ಮೆ ಕೊಠಡಿ ಪ್ರವೇಶಿಸಿದ ಬಳಿಕ ಪರೀಕ್ಷೆ ಮುಗಿಯುವವರೆಗೂ ಹೊರ ಬರಲು ಅವಕಾಶ ಇರುವುದಿಲ್ಲ. ಅಭ್ಯರ್ಥಿಗಳು ಶೂ ಮತ್ತು ಬೆಲ್ಟ್ ಧರಿಸಿ ಬರುವುದನ್ನು ನಿಷೇಧಿಸಲಾಗಿದೆ. ಮೊಬೈಲ್, ಕ್ಯಾಲ್ಕು್ಯಲೇಟರ್, ಕೈಗಡಿಯಾರ, ಬೆಂಕಿಪೊಟ್ಟಣ, ಲೈಟರ್, ಬ್ಲೂಟೂತ್ ಮತ್ತಿತರ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವಂತಿಲ್ಲ.
ಇಂದು ಕ್ರಾಂತಿಯೋಗಿ ಮಹಾದೇವರ ಜನ್ಮದಿನೋತ್ಸವ: ಏಕೀಕರಣಕ್ಕಾಗಿ ಹೋರಾಡಿದ್ದ ಮಾಧವಾನಂದ ಶ್ರೀ!
ಹಾಲ್ ಟಿಕೆಟ್‌ನಲ್ಲಿ ಸಹಿ ಮತ್ತು ಪೋಟೋ ಪ್ರಕಟವಾಗದಿದ್ದರೆ ಅಥವಾ ಸಹಿ ಮತ್ತು ಪೋಟೋಗೆ ವ್ಯತ್ಯಾಸವಿದ್ದರೆ ಅಂತಹ ಅಭ್ಯರ್ಥಿಗಳು ತಮ್ಮೊಂದಿಗೆ ಇತ್ತೀಚಿನ ಪೋಟೋ, ಆನ್‌ಲೈನ್ ಅರ್ಜಿ, ಆಧಾರ್ ಕಾರ್ಡ್ ಅಥವಾ ಇನ್ಯಾವುದೇ ಅಧಿಕೃತ ಗುರುತಿನ ಚೀಟಿ ತೋರಿಸಬೇಕು. ಪೇಪರ್-1 ಕ್ಕೆ 1,54,929 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ಗಂಟೆಯವರೆಗೂ 589 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪೇಪರ್-2ಕ್ಕೆ 2,06,456 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು ಮಧ್ಯಾಹ್ನ 2 ರಿಂದ ಸಂಜೆ 4.30 ರವರೆಗೆ 781 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.