ಶಿಕ್ಷಕರು ಅರ್ಧಗಂಟೆ ಮುಂಚೆ ಶಾಲೆಗೆ ಬರಬೇಕು: ಶಿಕ್ಷಣ ಇಲಾಖೆ ಸೂಚನೆ

ಸರ್ಕಾರಿ ಶಾಲೆಗಳಲ್ಲಿ ಪಠ್ಯ ಬೋಧನೆ ಮತ್ತು ಮಕ್ಕಳ ಕಲಿಕಾ ಗುಣಮಟ್ಟ ಬಲವರ್ಧನೆಗೊಳಿಸುವ ಸಲುವಾಗಿ ಶಿಕ್ಷಕರು ನಿಗದಿತ ಅವಧಿಗಿಂತ ಅರ್ಧಗಂಟೆ ಮೊದಲೇ ಶಾಲೆಗೆ ಹಾಜರಾಗಿ ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ. 

Teachers must come to school half an hour early Education Department notice gvd

ಬೆಂಗಳೂರು (ಮಾ.16): ಸರ್ಕಾರಿ ಶಾಲೆಗಳಲ್ಲಿ ಪಠ್ಯ ಬೋಧನೆ ಮತ್ತು ಮಕ್ಕಳ ಕಲಿಕಾ ಗುಣಮಟ್ಟ ಬಲವರ್ಧನೆಗೊಳಿಸುವ ಸಲುವಾಗಿ ಶಿಕ್ಷಕರು ನಿಗದಿತ ಅವಧಿಗಿಂತ ಅರ್ಧಗಂಟೆ ಮೊದಲೇ ಶಾಲೆಗೆ ಹಾಜರಾಗಿ ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ. ಮಕ್ಕಳ ಶೈಕ್ಷಣಿಕ, ಬೌದ್ಧಿಕ ಹಾಗೂ ಸಾಮಾಜಿಕ ಬೆಳೆವಣಿಗೆ ದೃಷ್ಟಿಯಿಂದ ಶಿಕ್ಷಕರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಬೇಕು. ಪ್ರತಿ ಶಾಲೆಯಲ್ಲಿ ಮುಖ್ಯ ಶಿಕ್ಷಕರು, ಇತರೆ ಸಹ ಶಿಕ್ಷಕರು ನಿಗದಿತ ಸಮಯಕ್ಕೆ ಅರ್ಧಗಂಟೆ ಮೊದಲೇ ಕರ್ತವ್ಯಕ್ಕೆ ಹಾಜರಾಗಿ ಇಲಾಖಾ ಮಾರ್ಗಸೂಚಿಗಳನ್ನು ಅನುಸರಿಸಬೇಕು. 

ರಜೆಯ ಮೇಲೆ ತೆರಳುವಾಗ, ಶಾಲೆಗೆ ಹಾಜರಾಗಿದ್ದ ವೇಳೆ ಅನ್ಯ ಕಾರ್ಯನಿಮಿತ್ತ ಹೊರೆಗೆ ಹೋಗುವುದಾದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪೂರ್ವಾನುಮತಿ ಪಡೆದಿರಬೇಕು. ಶಿಕ್ಷಕರು ಶಾಲಾ ಅವಧಿಯಲ್ಲಿ ಬಿಇಒ, ಡಿಡಿಪಿಐ ಕಚೇರಿಗಳಿಗೆ ತೆರಳುವುದನ್ನು ಕಡ್ಡಾಯವಾಗಿ ನಿಯಂತ್ರಿಸಬೇಕು. ವಿಷಯವಾರು ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲಿಸಿ, ಅಗತ್ಯ ಕ್ರಮವಹಿಸಬೇಕು ಎಂದು ಇಲಾಖಾ ಆಯುಕ್ತೆ ಬಿ.ಬಿ.ಕಾವೇರಿ ಸುತ್ತೋಲೆ ಹೊರಡಿಸಿದ್ದಾರೆ.

ಬಿಜೆಪಿ ನಾಯಕರ ತಾಳಕ್ಕೆ ಜೆಡಿಎಸ್‌ ಕುಣಿತ: ಸಿಎಂ ಸಿದ್ದರಾಮಯ್ಯ ಆರೋಪ

ಶಾಲಾ, ಕಾಲೇಜಿಗೆ ಮೀಸಲಾತಿ ಪಠ್ಯವಾಗಲಿ: ಶಾಲಾ, ಕಾಲೇಜುಗಳ ಪಠ್ಯಕ್ರಮಗಳಲ್ಲಿ ಮೀಸಲಾತಿ ವಿಷಯವನ್ನು ಒಂದು ಅಧ್ಯಾಯವಾಗಿ ಮತ್ತು ವಿವಿಗಳಲ್ಲಿ ಒಂದು ಪಠ್ಯ ವಿಷಯವಾಗಿ ಸೇರಿಸಿ ಬೋಧಿಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ, ಪ.ಜಾತಿ, ಪ.ಪಂಗಡ ಅಧ್ಯಾಪಕರ ಮತ್ತು ಅಧ್ಯಾಪಕೇತರರ ಸಂಘವು ಆಗ್ರಹಿಸಿದೆ. ಮೀಸಲಾತಿ ಎಂದರೆ ಪ.ಜಾತಿ, ಪ.ಪಂಗಡಕ್ಕೆ ಮಾತ್ರ ಸಂಬಂಧಿಸಿದ್ದು, ಇತರರಿಗೂ ಮೀಸಲಾತಿ ಸೌಲಭ್ಯ ಇದೆ ಅಥವಾ ಮೀಸಲಾತಿ ನೀಡಲಾಗುತ್ತಿದೆ ಎಂಬ ತಿಳಿವಳಿಕೆಯೇ ಅನೇಕ ಹಿಂದುಳಿದ ಮತ್ತು ಅಲ್ಪಸಂಖ್ಯಾತರಲ್ಲಿ ಇಲ್ಲ

ಮೈಸೂರು ರಾಜ್ಯದಲ್ಲಿ ಬ್ರಾಹ್ಮಣೇತರರೆಲ್ಲರಿಗೂ ಮೀಸಲಾತಿ ವ್ಯವಸ್ಥೆ ಜಾರಿಗೆ ಬಂದು 123 ವರ್ಷ ಕಳೆದರೂ, ಇಂದಿಗೂ ಮೀಸಲಾತಿಯ ಅರ್ಥ, ಅದರ ಇತಿಹಾಸ ಹಾಗೂ ಮೀಸಲಾತಿ ನಿಯಮಗಳ ಬಗ್ಗೆ ಇತರೇ ಹಿಂದುಳಿದ ಸಮುದಾಯಕ್ಕೆ ಮಾಹಿತಿಯೇ ಇಲ್ಲ. ಸಮಾಜದ ಎಲ್ಲಾ ಹಿಂದುಳಿದ ವರ್ಗಗಳು ಮೀಸಲಾತಿ ಪಡೆಯುತ್ತಿದ್ದಾರೆ ಮತ್ತು ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಕೂಡ ಮೀಸಲಾತಿ ವ್ಯಾಪ್ತಿಗೆ ಬಂದಿದ್ದಾರೆ. ಆದರೆ ಜನ ಸಾಮಾನ್ಯರಲ್ಲಿ ಮಾತ್ರವಲ್ಲ ವಿದ್ಯಾವಂತ ನೌಕರರಲ್ಲಿಯೂ ಈವರೆಗೂ ಮಾಸಲಾತಿ ಎಂದರೆ ಪ.ಜಾತಿ, ಪ.ಪಂಗಡಕ್ಕೆ ಮಾತ್ರ ಮತ್ತು ಅದನ್ನು ಅಂಬೇಡ್ಕರ್‌ಅವರು ಎಸ್ಸಿ, ಎಸ್ಟಿಗೆ ಮಾತ್ರ ಕೊಡಿಸಿದ್ದು ಎಂಬ ತಪ್ಪು ಕಲ್ಪನೆಯೇ ಜನ ಸಾಮಾನ್ಯರ ಮನಸ್ಸಿನಲ್ಲಿ ಉಳಿದು ಬಿಟ್ಟಿದೆ. 

ಜನರ ದಿಕ್ಕು ತಪ್ಪಿಸುವುದೇ ಬಿಜೆಪಿ ಅಜೆಂಡಾ: ಸಚಿವ ಚಲುವರಾಯಸ್ವಾಮಿ

ಆದ್ದರಿಂದ ಶಾಲಾ ಕಾಲೇಜುಗಳಲ್ಲಿನ ಪಠ್ಯಕ್ರಮಗಳಲ್ಲಿ ಮೀಸಲಾತಿ ಮತ್ತು ಅದಕ್ಕೆ ಸಂಬಂಧಿಸಿದ ಇತಿಹಾಸ, ಮೀಸಲಾತಿಯ ವರ್ಗೀಕರಣ, ಮೀಸಲಾತಿ ನಿಯಮದಲ್ಲಿ ಅಡಕವಾದ ಸಾಮಾಜಿಕ ನ್ಯಾಯ ಮತ್ತು ವೈಜ್ಞಾನಿಕ ವಿಂಗಡಣೆ ಕುರಿತು ಸೇರಿಸುವುದು ಅಗತ್ಯ ಎಂದು ಸಂಘದ ಅಧ್ಯಕ್ಷ ಪುಟ್ಟರಾಜು, ಜಿ.ಬಿ. ದೊರೆಸ್ವಾಮಿ ಮತ್ತು ಕಾರ್ಯದರ್ಶಿ ಶ್ರೀನಿನಾಯಕ್‌ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios