ಕಲಬುರಗಿ: ಬಾಡಿಗೆ ಶಿಕ್ಷಕಿ ನೇಮಕ, ಶಿಕ್ಷಕ ಅಮಾನತು
ಈ ಪ್ರಕರಣದಲ್ಲಿ ಶಿಕ್ಷಕನಿಗೆ ಕಾರಣ ಕೇಳುವ ನೋಟಿಸ್ ನೀಡಿದ್ದರು, ಆದರೆ ಶಿಕ್ಷಕ ಸರ್ಪಕ ನೀಡಿರಲಿಲ್ಲ. ಹೀಗಾಗಿ ಅವರನ್ನು ಸೇವಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದ ಬಿಇಒ ಸಿದ್ದವೀರಯ್ಯ
ಕಲಬುರಗಿ/ಚಿತ್ತಾಪುರ(ಜು.14): ಬಾಡಿಗೆ ಶಿಕ್ಷಕಿ ನೇಮಿಸಿಕೊಂಡು ಮಕ್ಕಳಿಗೆ ಪಾಠ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಪಂ ವ್ಯಾಪ್ತಿಯ ಭಾಲಿ ನಾಯಕ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಮಹೇಂದ್ರ ಕುಮಾರ್ ಇವರನ್ನು ಸೇವೆಯಿಂದ ಅಮಾನತು ಮಾಡಿ ಚಿತ್ತಾಪುರ ಬಿಇಒ ಆದೇಶ ಹೊರಡಿಸಿದ್ದಾರೆ.
ಚಿತ್ತಪುರ ಬಿಇಒ ಸಿದ್ದವೀರಯ್ಯ ರುದ್ನೂರ್ ಅವರು ಈ ಪ್ರಕರಣದಲ್ಲಿ ಶಿಕ್ಷಕನಿಗೆ ಕಾರಣ ಕೇಳುವ ನೋಟಿಸ್ ನೀಡಿದ್ದರು, ಆದರೆ ಶಿಕ್ಷಕ ಸರ್ಪಕ ನೀಡಿರಲಿಲ್ಲ. ಹೀಗಾಗಿ ಅವರನ್ನು ಸೇವಯಿಂದ ಅಮಾನತು ಮಾಡಲಾಗಿದೆ ಎಂದು ಬಿಇಒ ಸಿದ್ದವೀರಯ್ಯ ತಿಳಿಸಿದ್ದಾರೆ. ಮಹೇಂದ್ರಕುಮಾರ್ ಇವರ ಮೇಲಿನ ಆರೋಪಗಳ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕರಿಂದಲೂ ಮಾಹಿತಿ ಪಡೆಯಲು ಬಿಇಓ ಪ್ರಯತ್ನಿಸಿದ್ದರು.
ಎಸ್ಎಂಎಸ್ ಶಾಲೆ ಪ್ರಶ್ನೆ ಪತ್ರಿಕೆ ವೈರಲ್- ಧರ್ಮ ಶಿಕ್ಷಣದ ಆರೋಪ- ಆಡಳಿತ ಮಂಡಳಿ ಸ್ಪಷ್ಟನೆ
ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ನೀಡಿದ ಹೇಳಿಕೆಯಲ್ಲಿ ಮಹೇಂದ್ರ ಬಾಡಿಗೆ ಶಿಕ್ಷಕರಿಂದ ಪಾಠ ಹೇಳಿಸಿಲ್ಲವೆಂದಿದ್ದರು. ಆದರೆ ಎಸ್‌ಡಿಎಂಸಿ ಸಮಿತಿಗೆ ಈ ಸಂಗತಿ ಗಮನಕ್ಕೆ ತಂದು ಅವರಿಂದ ವಿವರಣೆ ಕೇಳಿದಾಗ ಅವರು ಮಕ್ಕಳ ಹಿತದೃಷ್ಟಿಯಿಂದ ಹೀಗೆ ಮಾಡಿದ್ದಾರೆಂದು ಹೇಳಿದ್ದರು. ಜವಾಬ್ದಾರಿ ಹುದ್ದೆಯಲ್ಲಿದ್ದು ಸಮಯಕ್ಕೆ ಸರಿಯಾಗಿ ಶಾಲೆಗೆ ಬಂದು ಮಕ್ಕಳಿಗೆ ಪಾಠ ಮಾಡೋದು ಶಿಕ್ಷಕರ ಕರ್ತವ್ಯ. ಆದಾಗ್ಯೂ ತಮ್ಮ ಕೆಲಸ ಬಿಟ್ಟು ಬಾಡಿಗೆ ಶಿಕ್ಷಕಿ ನೇಮಿಸಿರೋದು ಶಿಕ್ಷಕ ಹುದ್ದೆಗೆ, ಘನತೆಗೆ ತಕ್ಕುದಾದದ್ದಲ್ಲವೆಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.