ಬೀಫ್ ತಿನ್ನುವ ಕಾರಣಕ್ಕೆ ವಿದ್ಯಾರ್ಥಿನಿಗೆ ಕಿರುಕುಳ ನೀಡಿ ಹಿಜಾಬ್ ನಿಂದ ಶೂ ಕ್ಲೀನ್ ಮಾಡಿಸಿದ ಶಿಕ್ಷಕರು!
ಧರ್ಮ ಹಾಗೂ ಬೀಫ್ ತಿನ್ನುವ ಕಾರಣಕ್ಕೆ ಶಿಕ್ಷಕರು ವಿದ್ಯಾರ್ಥಿಯೋರ್ವನಿಗೆ ಕಿರುಕುಳ ನೀಡಿ, ಹಿಜಾಬ್ ನಿಂದ ಶೂ ಪಾಲಿಶ್ ಮಾಡಿಸಿ ಥಳಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಬೆಂಗಳೂರು (ನ.23): ಧರ್ಮ ಹಾಗೂ ಬೀಫ್ ತಿನ್ನುವ ಕಾರಣಕ್ಕೆ ಶಿಕ್ಷಕರು ವಿದ್ಯಾರ್ಥಿಯೋರ್ವನಿಗೆ ಕಿರುಕುಳ ನೀಡಿ, ಹಿಜಾಬ್ ನಿಂದ ಶೂ ಪಾಲಿಶ್ ಮಾಡಿಸಿ ಥಳಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ತಮಿಳುನಾಡಿನ ಅಶೋಕಪುರಂನ ಸರ್ಕಾರಿ ಪ್ರೌಢಶಾಲೆಯಲ್ಲಿ 7 ನೇ ತರಗತಿಯ ಬಾಲಕಿಯ ಪೋಷಕರು ಅಲ್ಲಿನ ಮುಖ್ಯ ಶಿಕ್ಷಣಾಧಿಕಾರಿಗೆ ದೂರು ನೀಡಿ, ಶಿಕ್ಷಕರಿಬ್ಬರು ಗೋಮಾಂಸ ತಿನ್ನುವ ಅಭ್ಯಾಸ ಮತ್ತು ತಮ್ಮ ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದರ ಜೊತೆಗೆ ಶಿಕ್ಷಕರಾದ ಅಭಿನಯ ಹಾಗೂ ರಾಜ್ ಕುಮಾರ್ ತಮ್ಮ ಪುತ್ರಿಗೆ ಹಿಬಾಬ್‌ನಿಂದ ಶೂ ಪಾಲಿಶ್ ಮಾಡಲು ಕೂಡ ಬಲವಂತಪಡಿಸಿದ್ದರು ಎಂದು ದೂರಿದ್ದಾರೆ.
ಕಾಮುಕ ಪ್ರಿನ್ಸಿಪಾಲ್ ಕಿರುಕುಳ: ಸರ್ಕಾರಿ ಶಾಲೆಯ 142 ಅಪ್ರಾಪ್ತೆಯರಿಗೆ ಲೈಂಗಿಕ ದೌರ್ಜನ್ಯ!
ಹಿಜಾಬ್ ಧರಿಸಿ ಶಾಲೆಗೆ ಬರುವ ಮಕ್ಕಳನ್ನು ಶಿಕ್ಷಕಿ ಇಷ್ಟಪಡುತ್ತಿರಲಿಲ್ಲ ಮತ್ತು ಕಳೆದ ಕೆಲವು ತಿಂಗಳಿಂದ ಪರೋಕ್ಷವಾಗಿ ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ. ಎರಡು ತಿಂಗಳ ಹಿಂದೆ, ಶಿಕ್ಷಕರು ನನ್ನ ಉದ್ಯೋಗದ ಬಗ್ಗೆ ಮಗಳಲ್ಲಿ ಕೇಳಿದರು. ನಾನು ಗೋಮಾಂಸ ಮತ್ತು ಮಾಂಸದ ಅಂಗಡಿ ನಡೆಸುತ್ತಿದ್ದೇನೆ ಎಂದು ಮಗು ಹೇಳಿತ್ತು. ಇದಾದ ಬಳಿಕ ಎರಡು ವಾರಗಳ ಹಿಂದೆ ಶಿಕ್ಷಕರು ನನ್ನ ಮಗುವಿಗೆ ಥಳಿಸಿದ್ದರು ಮತ್ತು ನಮ್ಮ ಆಹಾರ ಪದ್ಧತಿಯ ಗೋಮಾಂಸ ಸೇವನೆಯನ್ನು ಟೀಕಿಸಿದರು ಎಂದು ಗಂಭೀರ ಆರೋಪ ಮಾಡಿದ್ದಾರೆ ಪೋಷಕರು.
9,000 ಕೋಟಿ ರೂ ದಂಡ ಪಾವತಿಗೆ ಇಡಿ ನೋಟಿಸ್ ವರದಿ, ಸ್ಪಷ್ಟನೆ ನೀಡಿದ ಕಂಪನಿ!
ಈ ಸಮಸ್ಯೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿಯೊಂದಿಗೆ ಹೇಳಿದರೆ ಅವರು ಶಿಕ್ಷಕರಿಗೆ ಬೆಂಬಲ ನೀಡಿದರು. ಮುಖ್ಯ ಶಿಕ್ಷಕಿ ಪೋಷಕರ ದೂರಿನ ಬಗ್ಗೆ ಕ್ರಮ ಕೈಗೊಳ್ಳದ ಕಾರಣ, ಸಿಇಒ ಅವರಿಗೆ ದೂರು ನೀಡಿದರು. ಈ ಬಗ್ಗೆ ಮಾತನಾಡಲು ಮುಖ್ಯಶಿಕ್ಷಕಿ ರಾಜೇಶ್ವರಿ ನಿರಾಕರಿಸಿದರು. ಪೋಷಕರಿಂದ ದೂರನ್ನು ಸ್ವೀಕರಿಸಿದ್ದು, ತನಿಖೆಗೆ ಆದೇಶಿಸುವುದಾಗಿ ಮುಖ್ಯ ಶಿಕ್ಷಣಾಧಿಕಾರಿ ಆರ್ ಬಾಲಮುರಳಿ ಹೇಳಿದ್ದಾರೆ.