ಆನೇಕಲ್‌(ಜ.21): ಕೊರೋನಾ ದೆಸೆಯಿಂದಾಗಿ ಶಾಲಾ ಮಕ್ಕಳು ಮತ್ತು ಶಿಕ್ಷಣ ಇಲಾಖೆ ಸಂಕಷ್ಟ ಎದುರಿಸುತ್ತಿದೆ ಎಂದು ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿದ್ದಾರೆ. 

ತಾಲೂಕಿನ ಸೋಲೂರಿನಲ್ಲಿ ಯುವ ಬ್ರಿಗೇಡ್‌ ಸಹಕಾರ ದಾನಿಗಳ ನೆರವಿನಿಂದ ಅಭಿವೃದ್ಧಿಪಡಿಸಿದ ವಿನೋಭ ಬಾವೆ ವಿದ್ಯಾ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನಾ ಕಾರ‍್ಯಕ್ರಮದಲ್ಲಿ ಮಾತನಾಡಿ, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವ ಕಾರಣ ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಾಗುವ ಜೊತೆಗೆ ಬಾಲ್ಯ ವಿವಾಹಗಳು ಹೆಚ್ಚಾದವು. ಸಾಮಾಜಿಕ ಪಿಡುಗಗಳನ್ನು ತಡೆಯುವ ಸಲುವಾಗಿ ಶಾಲೆಗಳನ್ನು ಪುನಾರಂಭಿಸಲು ದಿಟ್ಟ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಆರ್‌ಎಸ್‌ಎಸ್‌ ಸಹ ಸರಕಾರ್ಯವಾಹ ಮುಕುಂದ್‌ಜೀ, ಶಕ್ತಿ ಕೇಂದ್ರ ಟ್ರಸ್ಟ್‌ನ ಮ್ಯಾನೇಜಿಂಗ್‌ ಟ್ರಸ್ಟಿಸೂಲಿಬೆಲೆ ಚಕ್ರವರ್ತಿ, ಯುವ ಬ್ರಿಗೇಡ್‌ ರಾಜ್ಯ ಸಂಚಾಲಕ ಚಂದ್ರಶೇಖರ್‌, ಕಿರಣ್‌ ಪಾಟೀಲ್‌, ರಾಘವೇಂದ್ರ ಪ್ರಭು, ಮುಖಂಡರಾದ ಸಿ.ತೋಪಯ್ಯ, ಎನ್‌.ಶಂಕರ್‌, ಶರತ್‌, ಜಗದೀಶ್‌, ಬಿಇಒ ಪಾಲ್ಗೊಂಡಿದ್ದರು.

ಶಿವಮೊಗ್ಗದ ಶಾಲೆಗಳ ಸ್ಮಾರ್ಟ್ ಕ್ಲಾಸ್ ರಾಜ್ಯಕ್ಕೆ ಮಾದರಿ : ಸುರೇಶ್ ಕುಮಾರ್

20 ಆನೆ 1 ಜನವರಿ:

ಆನೇಕಲ್‌ ತಾಲೂಕಿನ ಗಡಿ ಗ್ರಾಮ ಸೋಲೂರಿನ ವಿನೋಭ ಬಾವೆ ವಿದ್ಯಾ ಸಂಸ್ಥೆಯ ಕಟ್ಟಡವನ್ನು ಆರ್‌ಎಸ್‌ಎಸ್‌ನ ಸಹ ಸರಕಾರ್ಯವಾಹ ಮುಕುಂದ್‌ಜೀ ಉದ್ಘಾಟಿಸಿದರು. ಸಚಿವರಾದ ಸುರೇಶ್‌ ಕುಮಾರ್‌, ಸೂಲಿಬೆಲೆ ಚಕ್ರವರ್ತಿ, ತೋಪಯ್ಯ ಇತರರಿದ್ದಾರೆ.