ಶಿವಮೊಗ್ಗದ ಶಾಲೆಗಳ ಸ್ಮಾರ್ಟ್ ಕ್ಲಾಸ್ ರಾಜ್ಯಕ್ಕೆ ಮಾದರಿ : ಸುರೇಶ್ ಕುಮಾರ್
ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಿವಮೊಗ್ಗಕ್ಕಿಂದು ಭೇಟಿ ನೀಡಿದರು. ಈ ವೇಳೆ ಇಲ್ಲಿನ ಶಾಲೆಗಳ ಸ್ಮಾರ್ಟ್ ಕ್ಲಾಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಿವಮೊಗ್ಗ (ಜ.20): ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭವಾಗಿದ್ದು ಇದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಶಿವಮೊಗ್ಗದಲ್ಲಿಂದು ಮಾತನಾಡಿದ ಸಚಿವರು ಕೋವಿಡ್ ಸಂಕಷ್ಟದ ಕಾಲದಲ್ಲಿ SSLC ಪರೀಕ್ಷೆ ಯಾವುದೇ ಗೊಂದಲ ಇಲ್ಲದೆ ನಡೆಸಿದ್ದೇವೆ ಅನ್ ಲೈನ್ ಶಿಕ್ಷಣ ಪರಿಪೂರ್ಣ ಅಲ್ಲ ನೇರ ತರಗತಿ ಮೂಲಕ ಶಿಕ್ಷಣ ನೀಡುವುದು ಸರಿಯಾಗಿದೆ. ಪ್ರಶ್ನೆ ಪತ್ರಿಕೆ ಸಿದ್ದ ಪಡಿಸುವ ವೇಳೆ ಉತ್ತಮ ರೀತಿಯಲ್ಲಿ ತಯಾರಿಸಲು ಮುಂದಾಗುತ್ತೇವೆ ಎಂದರು.
ಪ್ರಸಕ್ತ ವರ್ಷ ನಿವೃತ್ತಿ ಹೊಂದಿದ ಉಪನ್ಯಾಸಕರು ಶಾಲೆಗೆ ಬಂದು ಪಾಠ ಮಾಡಲು ಮನವಿ ಮಾಡಿದ ಸಚಿವರು ಆರ್ ಎಂಎಸ್ಎ ಶಾಲಾ ಕೊಠಡಿಗಳನ್ನು ಬೇಗನೆ ಪೂರ್ಣ ಮಾಡಲು ಸೂಚನೆ ನೀಡಲಾಗುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಸಿಲಬಸ್ , ಶುಲ್ಕ ಬಗ್ಗೆ ಸುರೇಶ್ ಕುಮಾರ್ ಮಹತ್ವದ ಹೇಳಿಕೆ .
ಶಿವಮೊಗ್ಗ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಯೋಗ ಶಿಕ್ಷಣ ಶುರುವಾಗಿದೆ. ಇದು ರಾಜ್ಯವ್ಯಾಪಿ ಬರಲಿ ಎಂದರು.
ಇನ್ನು ಪಿಯು ಪರೀಕ್ಷೆ ವೇಳಾಪಟ್ಟಿ ಬಗ್ಗೆಯೂ ಮಾತನಾಡಿದ ಅವರು ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಬರಲಿದೆ ಎಂದು ತಿಳಿಸಿದರು.
ಶಿಕ್ಷಣ ಇಲಾಖೆ ಅನುತ್ಪಾದಕ ಇಲಾಖೆ ಎಂದು ಬಹಳ ಹಿಂದೆ ಶಿಕ್ಷಣ ಸಚಿವರೊಬ್ಬರು ಹೇಳಿದ್ದರು. ಆದರೆ ಶಿಕ್ಷಣ ಇಲಾಖೆ ಈಗ ಮಾನವ ಸಂಪನ್ಮೂಲ ಅಭಿವೃದ್ಧಿ ಪಡಿಸುವ ಇಲಾಖೆಯಾಗಿದೆ. ಶಿಕ್ಷಕರ ವರ್ಗಾವಣೆ ಕುರಿತು ಕೆಎಟಿಯಲ್ಲಿ ತಡೆಯಾಜ್ಞೆ ತೆರವು ಮಾಡಿಸಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.