11ನೇ ತರಗತಿ ಆಫ್‌ಲೈನ್‌ ಪರೀಕ್ಷೆಗೆ ಸುಪ್ರೀಂ ಅನುಮತಿ

  • ಹಲವು ದಿನಗಳಿಂದ ಇದ್ದ ಗೊಂದಲಕ್ಕೆ ತೆರೆ
  • ಕೇರಳ ಪಿಯುಸಿ ಪರೀಕ್ಷೆಗಳಿಗೆ ಸಮ್ಮತಿ ನೀಡಿದ ಸುಪ್ರೀಂ
Supreme Court Allows Kerala To Hold Offline Class 11 Exams dpl

ನವದೆಹಲಿ(ಸೆ.18): ಕೊರೋನಾ ನಡುವೆಯೂ ಕೇರಳದಲ್ಲಿ 11ನೇ ತರಗತಿಗೆ ಭೌತಿಕ ಪರೀಕ್ಷೆ ನಡೆಸಲು ಸುಪ್ರೀಂಕೋರ್ಟ್‌ ಅನುಮತಿ ನೀಡಿದೆ. ಆಫ್‌ಲೈನ್‌ ಮೂಲಕ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ತೀರ್ಮಾನ ಕುರಿತಂತೆ ಮಧ್ಯಪ್ರವೇಶಿಸಲು ನಿರಾಕರಿಸಿದ್ದ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

2 ವಾರಗಳ ಹಿಂದೆ ಪರೀಕ್ಷೆಗೆ ತಾತ್ಕಾಲಿಕ ತಡೆ ನೀಡಿದ್ದ ಕೊರ್ಟ್‌, ಭೌತಿಕ ಪರೀಕ್ಷೆ ನಡೆಸಲು ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ರಾಜ್ಯ ಸರ್ಕಾರ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಕುರಿತು ರಾಜ್ಯದಿಂದ ವರದಿ ಕೇಳಿತ್ತು. ಬಳಿಕ ರಾಜ್ಯ ಸಲ್ಲಿಸಿದ ವರದಿ ತೃಪ್ತಿಕರವಾಗಿದೆ ಎಂದು ಹೇಳಿ ಇದೀಗ ಅನುಮತಿ ನೀಡಿದೆ.

ಶಾಲೆ ನವೀಕರಣಕ್ಕೆ 40 ಲಕ್ಷ ರೂ.ಸಂಗ್ರಹಿಸಿದ ಶಿಕ್ಷಕರು, ಗ್ರಾಮಸ್ಥರು!

ಸೆಪ್ಟೆಂಬರ್ 3 ರಂದು ಕೇರಳದಲ್ಲಿ ಕೊರೋನಾ ಪರಿಸ್ಥಿತಿಯಿಂದ ಮಕ್ಕಳ ಸುರಕ್ಷತೆ ನಿಟ್ಟಿನಲ್ಲಿ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ತಡೆಯಲು ಸುಪ್ರೀಂ ಕೋರ್ಟ್ ಮೂರು ದಿನಗಳ ತಡೆ ನೀಡಿತು.

ಪರೀಕ್ಷೆಗಳ ಸಂದರ್ಭ ಇರುವಂತಹ ಕೋವಿಡ್ ಪ್ರೋಟೋಕಾಲ್‌ಗಳನ್ನು ಉಲ್ಲೇಖಿಸಿರುವ ಕೇರಳ ಸರ್ಕಾರದ ಅಫಿಡವಿಟ್ ಅನ್ನು ಪೀಠವು ಗಮನಿಸಿದೆ. ರಾಜ್ಯ ಸರ್ಕಾರವು ಇತ್ತೀಚೆಗೆ ನಡೆದ ಅಖಿಲ ಭಾರತ ಜೆಇಇ ಪರೀಕ್ಷೆಯನ್ನು ಉಲ್ಲೇಖಿಸಿದ್ದು, 11 ನೇ ತರಗತಿಯ ಪರೀಕ್ಷೆಗಳನ್ನು ಆಫ್‌ಲೈನ್‌ನಲ್ಲಿ ನಡೆಸುವ ಸರ್ಕಾರದ ನಿರ್ಧಾರದ ಮೇಲಿನ ತಡೆಯಾಜ್ಞೆಯನ್ನು ತೆಗೆದುಹಾಕುವಂತೆ ನ್ಯಾಯಾಲಯವನ್ನು ಕೋರಿತ್ತು.

Latest Videos
Follow Us:
Download App:
  • android
  • ios