ಶಾಲೆ ನವೀಕರಣಕ್ಕೆ 40 ಲಕ್ಷ ರೂ.ಸಂಗ್ರಹಿಸಿದ ಶಿಕ್ಷಕರು, ಗ್ರಾಮಸ್ಥರು!
ಶಿಕ್ಷಕ ಕೇವಲ ಅಕ್ಷರಗಳನ್ನು ಕಲಿಸುವ ಮಾತ್ರ ಗುರವಲ್ಲ. ಸಮಯ ಸಂದರ್ಭ ಎದುರಾದಾಗ ತನ್ನ ಶಾಲೆಯ ಉನ್ನತಿಗೂ ಕಂಕಣಬದ್ಧರಾಗಿರುತ್ತಾನೆಂಬುದಕ್ಕೆ ಮಹಾರಾಷ್ಟ್ರದ ಜಿಲ್ಲಾ ಪರಿಷತ್ ಶಿಕ್ಷಕರು ಉದಾಹರಣೆಯಾಗಿದ್ದಾರೆ. ಶಾಲೆಯ ನವೀಕರಣಕ್ಕಾಗಿ ಗ್ರಾಮಸ್ಥರ ಜತೆಗೂಡಿ ಈ ಶಿಕ್ಷಕರು 40 ಲಕ್ಷ ರೂಪಾಯಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿಕ್ಷಕರು ಮನಸ್ಸು ಮಾಡಿದ್ರೆ ಏನು ಬೇಕಾದರೂ ಸಾಧಿಸಬಹುದು. ಮಕ್ಕಳನ್ನು ಓದಿನಲ್ಲಿ ತಲ್ಲೀನಗೊಳಿಸುವುದು, ಅತ್ಯಗತ್ಯವಾದ ಸೌಲಭ್ಯಗಳನ್ನು ಒದಗಿಸುವುದು- ಇತ್ಯಾದಿ ಹತ್ತಾರು ಕೆಲಸ ಗಳನ್ನು ಶಿಕ್ಷಕರು ನಿಭಾಯಿಸುತ್ತಾರೆ. ಇದೀಗ ಇನ್ನು ಒಂದು ಹೆಜ್ಜೆ ಹೋಗಿರುವ ಮಹಾರಾಷ್ಟ್ರ ಶಿಕ್ಷಕರು, ಶಾಲೆಗಳ ಕಟ್ಟಡ ಉಳಿಸಲು ಪಣ ತೊಟ್ಟಿದ್ದಾರೆ. ಶಾಲೆಗಳ ನವೀಕರಣ ಮಾಡಿಸಲು ಲಕ್ಷಾಂತರ ರೂಪಾಯಿ ಸಂಗ್ರಹಿಸೋ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಗ್ಗೆ ಆತಂಕ ಬೇಡ, ಮುಕ್ತ ಚರ್ಚೆಗೆ ಸಿದ್ಧ ಎಂದ ಸಿಎಂ
ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಡಿಯೋನಿ ತಹಸಿಲ್‌ನ ಜಿಲ್ಲಾ ಪರಿಷತ್ ಶಿಕ್ಷಕರು ಮತ್ತು ಗ್ರಾಮಸ್ಥರು ಶಾಲೆಗಳನ್ನು ನವೀಕರಿಸಲು 40.78ರೂ. ಲಕ್ಷವನ್ನು ಸಂಗ್ರಹಿಸುವ ಮೂಲಕ ತಮ್ಮ ಸುತ್ತಮುತ್ತಲಿನ ಶಿಕ್ಷಣದ ಉದ್ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆ ಎಂಬ ವರದಿಯನ್ನು ಹಲವು ಸುದ್ದಿಜಾಲತಾಣಗಳು ವರದಿ ಮಾಡಿವೆ.
261 ಜಿಲ್ಲಾ ಪರಿಷತ್ ಶಿಕ್ಷಕರು ಮತ್ತು ಹಲವು ಮಂದಿ ಗ್ರಾಮಸ್ಥರು ದಾನ ಮಾಡುವ ಅಗತ್ಯ ಹಾಗೂ ಕಾರಣದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಬ್ಲಾಕ್ ಡೆವಲಪ್ ಮೆಂಟ್ ಆಫೀಸರ್ ಮನೋಜ್ ರಾವುತ್ ತಿಳಿಸಿದರು. ಶಿಕ್ಷಕರು ಹಾಗೂ ಗ್ರಾಮಸ್ಥರು ತಹಸಿಲ್‌ನ ಪ್ರತಿ ಗ್ರಾಮಕ್ಕೆ ಭೇಟಿ ನೀಡಿದರು. ಪೋಷಕರ ಸಭೆಗಳನ್ನು ಆಯೋಜಿಸಿದರು, ಗ್ರಾಮ ಪಂಚಾಯಿತಿ ಮಟ್ಟದಿಂದ ಚುನಾಯಿತ ಪ್ರತಿನಿಧಿಗಳನ್ನು ಭೇಟಿಯಾಗಿ ಜಿಲ್ಲಾ ಪರಿಷತ್ ಶಾಲೆಗಳನ್ನು ನವೀಕರಿಸಲು 40.78 ಲಕ್ಷ ರೂ.ವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ ಅಂತಾರೆ ರಾವುತ್.
ವಾಗ್ನಲವಾಡಿ ಗ್ರಾಮದಲ್ಲಿ ಒಂದು ಸಭೆಯಲ್ಲಿ 75,000 ರೂ.ಗಳ ದೇಣಿಗೆ ಸಂಗ್ರಹಿಸಿ, ತತ್ ಕ್ಷಣವೇ ಬಾಕ್ಸ್ ಗೆ ಹಾಕಲಾಗಿತ್ತು. ತಹಸಿಲ್‌ನಲ್ಲಿ 54 ಹಳ್ಳಿಗಳು ಮತ್ತು 45 ಗ್ರಾಮ ಪಂಚಾಯಿತಿಗಳಿವೆ, ಇದರಲ್ಲಿ 65 ಝೆಡ್ ಪಿ ಶಾಲೆಗಳಿದ್ದು, ಅವುಗಳನ್ನು 60 ನವೀಕರಣ ಮಾಡಲಾಗುತ್ತಿದೆ ಎಂದು ರಾವುತ್ ತಿಳಿಸಿದರು. ಇನ್ನು ಸಂಗ್ರಹವಾಗಿರುವ 40 ಲಕ್ಷದಲ್ಲಿ 23 ಲಕ್ಷ ಹಣವನ್ನು ಗ್ರಾಮಸ್ಥರು ಕಲೆಕ್ಟ್ ಮಾಡಿದ್ರೆ, ಉಳಿದ ಹಣವನ್ನು ಹಣವನ್ನು ಶಿಕ್ಷಕರು ಸಂಗ್ರಹಿಸಿದ್ದಾರೆ ಅಂತ ರಾವುತ್ ಮಾಹಿತಿ ನೀಡಿದರು
ಕೊರೋನಾ: ಶೇ.37ರಷ್ಟು ಗ್ರಾಮೀಣ ವಿದ್ಯಾರ್ಥಿಗಳು ಕಲಿಕೆಯಿಂದ ದೂರ
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿನವ್ ಗೋಯಲ್ ಅವರ 'ಬಾಲಾ' ಯೋಜನೆಯ ಭಾಗವಾಗಿ ಶಾಲೆಗಳ ನವೀಕರಣವನ್ನು ಕೈಗೊಳ್ಳಲಾಗುತ್ತಿದೆ. ನವೀಕರಣದ ನಂತರ ಜಿಲ್ಲಾ ಪಂಚಾಯ್ತಿ ಶಾಲೆಗಳು ಹೆಚ್ಚಿನ ವಿದ್ಯಾರ್ಥಿಗಳನ್ನು ಆಕರ್ಷಿಸಿವೆ. ಹಲವು ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮ ಶಾಲೆಗಳನ್ನು ಬಿಟ್ಟು ಹೋಗಿದ್ದಾರೆ ಎಂದು ಪಂಚಾಯತ್ ಸಮಿತಿಯ ಉಪ ಅಧ್ಯಕ್ಷ ಶಂಕರರಾವ್ ಪಾಟೀಲ್ ತಳೆಗೌಕರ್ ತಿಳಿಸಿದ್ದಾರೆ.
ಜಿಪಂ ಶಾಲೆಗಳಲ್ಲಿ ಶೇ .5.80 ರಷ್ಟು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ತಳೇಗಕರ್ ಹೇಳಿದ್ದಾರೆ. ಪಂಡರಾಪುರ ಗ್ರಾಮದ ಝೆಡ್‌ಪಿ ಶಿಕ್ಷಕ ಬಾಳಾಸಾಹೇಬ್ ಕಾಂಬಳೆ, ರಾವುತ್ ಮತ್ತು ಇತರ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು. ಸ್ಥಳೀಯ ಶಾಲೆಗಳನ್ನು ನವೀಕರಿಸಲು ಹಣವನ್ನು ಸಂಗ್ರಹಿಸಲು ಹಾಗೂ ಅನೇಕ ಜನರು ಒಟ್ಟುಗೂಡಲು ಇದು ಸಹಕಾರಿಯಾಗಿತ್ತು.
ಒಗ್ಗಟ್ಟಿನಿಂದ ಏನು ಬೇಕಾದ್ರೂ ಸಾಧಿಸಬಹುದು ಅನ್ನೋದಕ್ಕೆ ಇದೊಂದು ಉತ್ತಮ ನಿದರ್ಶನ. ಅದೆಷ್ಟೋ ಗ್ರಾಮಗಳಲ್ಲಿ ಗ್ರಾಮಸ್ಥರು ಹಾಗೂ ಶಿಕ್ಷಕರ ನಡುವೆ ಸಮನ್ವಯತೆ ಇರೋದಿಲ್ಲ. ಕಲಿಕೆಯ ವಿಚಾರ ಕುಂಠಿತವಾಗ್ತಿದ್ರೂ ಪ್ರತಿಷ್ಟೆಗಾಗಿ ಸಂಘರ್ಷ ನಡೆಸುತ್ತಾರೆ. ಅಲ್ಲಿ ಅಭಿವೃದ್ದಿ ಮಾತೆಲ್ಲಿ ಬರುತ್ತೆ?. ಆದ್ರೆ ಡಿಯೋನಿ ತಹಸಿಲ್‌ನ ಜಿಲ್ಲಾ ಪರಿಷತ್ ಶಿಕ್ಷಕರು ಮತ್ತು ಗ್ರಾಮಸ್ಥರು ಹಾಗಲ್ಲ. ಕೊಡುಗೈ ದಾನಿಗಳಿಂದ ಹಣ ಸಂಗ್ರಹಿಸಿ ಜಿಪಂ ಶಾಲೆಗಳನ್ನು ನವೀಕರಿಸಲು ಹೊರಟಿದ್ದಾರೆ. ದೇಶದ ಎಲ್ಲ ಶಿಕ್ಷಕರು ಹಾಗೂ ನಾಗರಿಕರಿಗೆ ಇವ್ರು ಮಾದರಿ ಅಂದ್ರೆ ತಪ್ಪಾಗಲ್ಲ.
ಪ್ರವಾಹದಲ್ಲೇ ಮಕ್ಕಳಿಗೆ ಪಾಠ, ದೋಣಿಯೇ ಶಾಲೆ