ಕೊಪ್ಪಳ: ಸಮವಸ್ತ್ರ ಬಟ್ಟೆ ಮರಳಿಸುತ್ತಿರುವ ವಿದ್ಯಾರ್ಥಿಗಳು!

ಸರ್ಕಾರದ ಸುತ್ತೋಲೆಯಂತೆ ಶಾಲಾ ಸಮವಸ್ತ್ರಗಳನ್ನು ಸಿದ್ಧ(ಹೊಲಿಸಿ) ಉಡುಪು ಕೊಡಬೇಕೆಂಬ ನಿಯಮವಿದ್ದರೂ ಬಟ್ಟೆನೀಡುತ್ತಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಸಮವಸ್ತ್ರದ ಬಟ್ಟೆಯನ್ನು ಶಾಲೆಗೆ ಮರಳಿಸುತ್ತಿದ್ದಾರೆ.

Students returning uniforms koppal government school rav

ಕೊಪ್ಪಳ (ಫೆ.7) : ಸರ್ಕಾರದ ಸುತ್ತೋಲೆಯಂತೆ ಶಾಲಾ ಸಮವಸ್ತ್ರಗಳನ್ನು ಸಿದ್ಧ(ಹೊಲಿಸಿ) ಉಡುಪು ಕೊಡಬೇಕೆಂಬ ನಿಯಮವಿದ್ದರೂ ಬಟ್ಟೆನೀಡುತ್ತಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಸಮವಸ್ತ್ರದ ಬಟ್ಟೆಯನ್ನು ಶಾಲೆಗೆ ಮರಳಿಸುತ್ತಿದ್ದಾರೆ.

ತಾಲೂಕಿನ ಕಿನ್ನಾಳ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಮಂಜುನಾಥ ಪೂಜಾರ(Manjunath poojary) ಸೇರಿದಂತೆ ಅನೇಕರು ತಮ್ಮ ಸಮವಸ್ತ್ರದ ಬಟ್ಟೆಯನ್ನು ಶಾಲೆಗೆ ಮರಳಿಸಿದ್ದಾರೆ. ನಿಯಮಾನುಸಾರ ಸಮವಸ್ತ್ರಗಳನ್ನು ಸಿದ್ಧ ಮಾಡಿ ಕೊಡಬೇಕು. ಆದರೂ ಕೊಡುತ್ತಿಲ್ಲ. ಹೀಗಾಗಿ ಬಟ್ಟೆಯನ್ನು ಮರಳಿಸುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಲಿಖಿತವಾಗಿ ಮುಖ್ಯಶಿಕ್ಷಕರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾನೆ.

ಉತ್ತರ ಕನ್ನಡ: ಮಾರ್ಕೆಪೂನವ್‌ ಜಾತ್ರೆಯಲ್ಲಿ ಮಕ್ಕಳ ಹೊಕ್ಕಳಿಗೆ ಸೂಚಿ ಚುಚ್ಚುವ ಹರಕೆ!

ಕೂಡಲೇ ಈ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕು. ಸರ್ಕಾರ ಸಮವಸ್ತ್ರಕ್ಕಾಗಿ ನೀಡುವ ಹಣದಲ್ಲಿ ಹೊಲಿಗೆಗೆಗೂ ಪ್ರತ್ಯೇಕವಾಗಿ ಹಣ ನೀಡುತ್ತದೆ. ಆದರೂ ಸಂಬಂಧಪಟ್ಟವರು ಅವುಗಳನ್ನು ಸಿದ್ಧ ಮಾಡಿಕೊಡದೆ ಹಾಗೆ ನೀಡುತ್ತಿದ್ದಾರೆ. ಇದನ್ನು ಸರಿಪಡಿಸದಿದ್ದರೆ ನ್ಯಾಯಾಲಯದ ಮೆಟ್ಟಿಲು ಏರುವುದಾಗಿ ತಿಳಿಸಿದ್ದಾರೆ.

ಈಗಾಗಲೇ ಕಿನ್ನಾಳ ಗ್ರಾಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಮಂಜುನಾಥ ಕಿನ್ನಾಳ ಎನ್ನುವ ವಿದ್ಯಾರ್ಥಿ ಸಮವಸ್ತ್ರ ಹಂಚಿಕೆ ಮಾಡದಿರುವುದನ್ನು ಪ್ರಶ್ನಿಸಿ ಹೈಕೋರ್ಚ್‌ ಮೆಟ್ಟಿಲೇರಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಚ್‌ ನ್ಯಾಯಮೂರ್ತಿಗಳು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಈಗ ಇದೇ ಗ್ರಾಮದ ಮತ್ತಷ್ಟುವಿದ್ಯಾರ್ಥಿಗಳು ಸಿದ್ಧ ಉಡುಪು ನೀಡುವಂತೆ ಆಗ್ರಹಿಸಿ ಕೊಟ್ಟಿರುವ ಸಮವಸ್ತ್ರ ಮರಳಿಸುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ.

Latest Videos
Follow Us:
Download App:
  • android
  • ios