ಬಳ್ಳಾರಿ: NEPಗೆ ವಿರೋಧ, ಸಚಿವ ಅಶ್ವತ್ಥ್, ರಾಮುಲು ಮುತ್ತಿಗೆಗೆ ವಿದ್ಯಾರ್ಥಿಗಳ ಯತ್ನ
* ರಾಷ್ಟ್ರೀಯ ಶಿಕ್ಷಣ ನೀತಿಗೆ ವಿದ್ಯಾರ್ಥಿಗಳ ವಿರೋಧ
* ಅಶ್ವತ್ಥ್ ನಾರಾಯಣ, ಶ್ರೀರಾಮುಲುಗೆ ಮುತ್ತಿಗೆ ಹಾಕಲು ಯತ್ನ
* ಪೊಲೀಸರೊಂದಿಗೆ ವಿದ್ಯಾರ್ಥಿಗಳ ವಾಗ್ವಾದ
ಬಳ್ಳಾರಿ(ಅ.28): ರಾಷ್ಟ್ರೀಯ ಶಿಕ್ಷಣ ನೀತಿಯನ್ನ ವಿರೋಧಿಸಿದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ(CN Ashwathnarayan) ಹಾಗೂ ಸಾರಿಗೆ ಸಚಿವ ಶ್ರೀರಾಮುಲುಗೆ(B Sriramulu) ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಇಂದು(ಗುರುವಾರ) ನಗರದಲ್ಲಿ ನಡೆದಿದೆ.
ಕ್ಯಾಂಪಸ್ ಫ್ರಂಟ್(Campus Front) ನೇತೃತ್ವದಲ್ಲಿ ನಗರದ ಬಿಐಟಿಎಂ ಕಾಲೇಜು(College) ಬಳಿ ವಿದ್ಯಾರ್ಥಿಗಳು(Students) ಪ್ರತಿಭಟನೆ(Protest) ನಡೆಸಿದ್ದಾರೆ. ರಾಷ್ಟೀಯ ಶಿಕ್ಷಣ ನೀತಿ(National Education Policy) ಅನುಷ್ಠಾನ ಕುರಿತು ಕಾಲೇಜಿನಲ್ಲಿ ವಿಚಾರ ಸಂಕಿರಣ(Seminar) ನಡೆಯುತ್ತಿದೆ. ಹೀಗಾಗಿ ಈ ಸಂಕಿರಣದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಹಾಗೂ ಶ್ರೀರಾಮುಲು ಭಾಗಿಯಾಗಿದ್ದಾರೆ.
ಸರ್ಕಾರಿ ಕಾಲೇಜುಗಳಿಗೆ ಇನ್ಫೋಸಿಸ್‌ನಿಂದ 15,000 ಕಂಪ್ಯೂಟರ್ ದೇಣಿಗೆ
ರಾಷ್ಟೀಯ ಶಿಕ್ಷಣ ನೀತಿಯನ್ನ ವಿರೋಧಿಸಿದ ವಿದ್ಯಾರ್ಥಿಗಳು ಸಚಿವರಿಗೆ ಮುತ್ತಿಗೆ ಹಾಕಲು ಅವಕಾಶ ನೀಡುವಂತೆ ಪ್ರತಿಭಟನೆ ನಡೆಸಿದ್ದಾರೆ. ಸಚಿವರಿಗೆ ಮುತ್ತಿಗೆ ಹಾಕಲು ಪೊಲೀಸರು ಅವಕಾಶ ನೀಡಿಲ್ಲ. ಇದರಿಂದಾಗಿ ಪೊಲೀಸರೊಂದಿಗೆ(Police) ವಿದ್ಯಾರ್ಥಿಗಳ ವಾಗ್ವಾದಕ್ಕಿಳಿದಿದ್ದಾರೆ. ಕಾಲೇಜಿನ ಪ್ರವೇಶ ದ್ವಾರವನ್ನ ಪೊಲೀಸರು ಬಂದ್ ಮಾಡಿದ್ದಾರೆ. ಆದರೂ ಕೂಡ ಪ್ರವೇಶ ದ್ವಾರವನ್ನ ನುಗ್ಗಿ ಒಳಗೆ ಬಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ.
ಇಡೀ ದೇಶದಲ್ಲಿಯೇ ಎಲ್ಲ ರಾಜ್ಯಗಳಿಗಿಂತ ಮೊದಲು ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಜಾರಿಗೆ ತರಲಾಗಿದೆ. ಇದರೊಂದಿಗೆ ದೇಶದಲ್ಲೇ ಎಲ್ಲರಿಗಿಂತ ಮೊದಲು ಕರ್ನಾಟಕ ಶೈಕ್ಷಣಿಕ ಕ್ಷೇತ್ರದಲ್ಲಿ ಐತಿಹಾಸಿಕ ಹೆಜ್ಜೆ ಇರಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಸದಾ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ ಈ ಮೂಲಕ ಹೊಸ ಮನ್ವಂತರ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯಡಿ ಕಲಿಕೆಗೆ ಉನ್ನತ ಶಿಕ್ಷಣ ವಿಭಾಗದಲ್ಲಿ ಈ ಬಾರಿ ಮೊದಲ ವರ್ಷದ ಪದವಿಗೆ ದಾಖಲಾಗುವ ಎಲ್ಲ ವಿದ್ಯಾರ್ಥಿಗಳಿಗೂ ಕರ್ನಾಟಕ ಸರಕಾರ ಉಚಿತವಾಗಿ ಟ್ಯಾಬ್ಲೆಟ್ ಪಿಸಿಗಳನ್ನು ನೀಡಲಿದೆ.
ರಾಷ್ಟ್ರೀಯ ಶಿಕ್ಷಣ ನೀತಿಗೆ ಪ್ರತಿಪಕ್ಷಗಳು ವಿರೋಧಿಸುತ್ತಲೇ ಬಂದಿದೆ. ಆದಾಗ್ಯೂ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಜಾರಿಗೆ ತಂದಿದೆ.