ಈ ಜನ್ಮದಲ್ಲಿ ಉದ್ಧಾರ ಆಗಲ್ಲ ಎಂದಿದ್ದ ಶಿಕ್ಷಕಿಗೆ ಫಲಿತಾಂಶ ಬೆನ್ನಲ್ಲೇ ವಿದ್ಯಾರ್ಥಿನಿಯ ಕ್ಲಾಸ್!

ನೀನು ಪಾಸ್ ಆಗಲ್ಲ ಬರೆದಿಟ್ಟುಕೋ, ನಿನ್ನಿಂದ ಸಾಧ್ಯಾನೇ ಇಲ್ಲ ನೆನಪಿಟ್ಟುಕೋ..ಹೀಗೆ ಹೆಜ್ಜೆ ಹೆಜ್ಜೆಗೂ ಶಿಕ್ಷಕಿಯ ಮಾತುಗಳಿಂದ ನೊಂದಿದ್ದ ವಿದ್ಯಾರ್ಥಿನಿ, ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾಳೆ. ಹೀಯಾಳಿಸಿದ, ಅವಮಾನಿಸಿದ ಶಿಕ್ಷಕಿಗೆ ಸಂದೇಶ ರವಾನಿಸಿದ್ದಾಳೆ. ಈ ಸಂದೇಶ ಇದೀಗ ವೈರಲ್ ಆಗಿದೆ. 
 

Student confronts teacher who said wouldnt pass in school she reminded teacher to be kind ckm

ನವದೆಹಲಿ(ಜು.26):  ಈ ಜನ್ಮದಲ್ಲಿ ನೀನು ಉದ್ಧಾರ ಆಗಲ್ಲ ಅನ್ನೋ ಟೀಚರ್ಸ್ ಮಾತು ಹಿಂದೆ ಸಾಮಾನ್ಯವಾಗಿತ್ತು. ಈ ಮಾತಿನ ಹಿಂದೆ ಒಂದು ಒಳ್ಳಯ ಉದ್ದೇಶ ಕೂಡ ಇತ್ತು. ಆದರೆ ಈಗ ಹಾಗಲ್ಲ, ಟೀಚರ್ ಅದ್ಯಾವ ಉದ್ದೇಶ ಇಟ್ಟುಕೊಂಡು ಈ ಮಾತು ಹೇಳುತ್ತಾರೋ ಗೊತ್ತಾಗಲ್ಲ, ಇತ್ತ ವಿದ್ಯಾರ್ಥಿಗಳು ಈ ಮಾತನ್ನು ಹೇಗೆ ಸ್ವೀಕರಿಸುತ್ತಾರೋ ಅನ್ನೋದು ಅತ್ಯಂತ ಗೊಂದಲದ ವಿಚಾರ. ಹೀಗೆ ವಿದ್ಯಾರ್ಥಿನಿಗೆ ನೀನು ಪಾಸ್ ಆಗಲ್ಲ. ನಿನ್ನಿಂದ ಸಾಧ್ಯಾನೇ ಇಲ್ಲ ಎಂದು ಪದೇ ಪದೇ ಆತ್ಮವಿಶ್ವಾಸ ಕುಗ್ಗಿಸುವ ಯತ್ನ ಮಾಡಿದ್ದರು. ಆದರೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಶಿಕ್ಷಕಿಯ ಚುಚ್ಚು ಮಾತಿಗೆ ತಿರುಗೇಟು ನೀಡಿದ್ದಾಳೆ. ನೀವು ಸಾಧ್ಯಾನೇ ಇಲ್ಲ ಎಂದಿದ್ದೀರಿ,  ನಾನು 12ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಪಾಸ್ ಆಗಿದ್ದೇನೆ.  ನನಗೆ ಆಡಿದ ಮಾತುಗಳನ್ನು ಬೇರೆ ವಿದ್ಯಾರ್ಥಿಗಳಿಗೆ ಹೇಳಬೇಡಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾಳೆ.

ವಿದ್ಯಾರ್ಥಿನಿ ತನ್ನ ಟೀಚರ್‌ಗೆ ಕಳುಹಿಸಿದ ಸಂದೇಶ ವೈರಲ್ ಆಗಿದೆ. ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ತನ್ನ ಮನಸ್ಸಿನಲ್ಲಿ ಹುದುಗಿಟ್ಟಿದ್ದ ಸಿಟ್ಟನ್ನು ವ್ಯಾಟ್ಸ್ಆ್ಯಪ್ ಮೂಲಕ ಸಂದೇಶ ರವಾನಿಸಿ ಹೊರಹಾಕಿದ್ದಾಳೆ. ಈ ಮೆಸೇಜ್ ಇದೀಗ ವೈರಲ್ ಆಗಿದೆ.  ವಿದ್ಯಾರ್ಥಿನಿಯ ಮೆಸೇಜ್ ಸಾರಾಂಶ ಇಲ್ಲಿದೆ.

ಫುಲ್ ಟೈಟಾಗಿ ತೂರಾಡುತ್ತಾ ಶಾಲೆಗೆ ಬಂದ ಶಿಕ್ಷಕಿ, ಹೊಸ ಅವತಾರಕ್ಕೆ ದಂಗಾದ ಅಧಿಕಾರಿಗಳು!

ನಾನು 2019-20ರ ಸಾಲಿನಲ್ಲಿದ್ದ 10ನೇ ವಿದ್ಯಾರ್ಥಿನಿ.  ನಿಮ್ಮ ವಿದ್ಯಾರ್ಥಿನಿಯಾಗಿದ್ದೆ. ನಾನು ಸಂದೇಶವನ್ನು ಯಾಕೆ ಕಳುಹಿಸುತ್ತಿದ್ದೇನೆ ಎಂದರೆ, ನೀವು ಆಡಿದ ಮಾತುಗಳಿಗಾಗಿ. ನಿನ್ನಿಂದ ಸಾಧ್ಯವೇ ಇಲ್ಲ, ನೀನು ಪಾಸ್ ಆಗಲ್ಲ. ನೀನು ಏನು ಆಗಬೇಕು ಅಂದುಕೊಡ್ಡಿದಿಯೋ ಅದು ನಿನ್ನಿಂದ ಸಾಧ್ಯವಿಲ್ಲ ಎಂದು ಪದೇ ಪದೆ ಚುಚ್ಚು ಮಾತುಗಳಿಂದ ನನ್ನ ಆತ್ಮವಿಶ್ವಾಸ ಕುಗ್ಗಿಸಿದ್ದೀರಿ. ನನ್ನನ್ನು ಹೀಯಾಳಿಸಿದ್ದೀರಿ. ಪ್ರತಿ ಹೆಜ್ಜೆಗೂ ನನ್ನನ್ನ ಕೆಳಮಟ್ಟಕ್ಕೆ ತಳ್ಳೀದ್ದೀರಿ. ಆದರೆ ಇವತ್ತು ನಾನು 12ನ ತರಗತಿ ಪರೀಕ್ಷೆಯನ್ನು ಉತ್ತಮ ಅಂಕಗಳೊಂದಿಗೆ ಪಾಸ್ ಆಗಿದ್ದೇನೆ. ಇದೀಗ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದಿದ್ದೇನೆ. ನಾನು ಏನು ಓದಬೇಕು, ಏನು ಆಗಬೇಕು ಅಂದುಕೊಂಡಿದ್ದೇನೋ ಅದೆ ವಿಷಯವನ್ನು ಆರಿಸಿಕೊಂಡಿದ್ದೇನೆ. ಇದು ನಿಮಗೆ ಧನ್ಯವಾದ ಹೇಳುವ ಸಂದೇಶವಲ್ಲ. ನಾನು ಏನು ಅನ್ನೋದನ್ನು ತೋರಿಸಿಕೊಟ್ಟಿದ್ದೇನೆ. ಮುಂದಿನ ಬಾರಿ ವಿದ್ಯಾರ್ಥಿಗಳ ಮೇಲೆ ದಯೆ ತೋರಿಸಿದೆ. ನಿಮ್ಮ ಸಹಕಾರ ಕೇಳುವ ವಿದ್ಯಾರ್ಥಿಗಳಿಗೆ ನೆರವು ನೀಡಿ ಎಂದು ವಿದ್ಯಾರ್ಥಿನಿ ಶಿಕ್ಷಕಿಗೆ ಸಂದೇಶ ಕಳುಹಿಸಿದ್ದಾಳೆ.

ಹಸ್ಮತಾಯ್‌ಶಾ ಅನ್ನೋ ಟ್ವಿಟರ್ ಖಾತೆಯಲ್ಲಿ ಈ ಪೋಸ್ಟ್ ಹಾಕಲಾಗಿದೆ. ಇಷ್ಟೇ ಅಲ್ಲ ಇದು 2 ವರ್ಷಗಳ ಹಿಂದೆ ನಾನು ಮತ್ತು ನನ್ನ ಗೆಳತಿ ಶಿಕ್ಷಕಿಗೆ ಸಂದೇಶ ಕಳುಹಿಸಿದ್ದೇನೆ. ನಮ್ಮ ಫಲಿತಾಂಶ ಪ್ರಕಟವಾದ ದಿನದಂದೆ ಈ ಸಂದೇಶ ಕಳುಹಿಸಿದ್ದೇವು ಎಂದು ಬರೆದುಕೊಂಡಿದ್ದಾರೆ. ವ್ಯಾಟ್ಸ್‌ಆ್ಯಪ್ ಸ್ಕ್ರೀನ್ ಶಾಟ್ ಹಂಚಿಕೊಳ್ಳಲಾಗಿದೆ. ಇಷ್ಟಕ್ಕೆ ಈ ಟಾಕ್ ವಾರ್ ಮುಗಿದಿಲ್ಲ.

ಶಿಕ್ಷಕಿ, ಪ್ರಾಂಶುಪಾಲರ ಮಧ್ಯೆ ಹೊಡೆದಾಟ : ವಿಡಿಯೋ ವೈರಲ್

ವಿದ್ಯಾರ್ಥಿನಿಯ ಸಂದೇಶಕ್ಕೆ ಟೀಚರ್ ಪ್ರತಿಕ್ರಿಯೆ ನೀಡಿದ್ದಾರೆ. ಆದರೂ ನೀನು ಪಾಸ್ ಆಗಿರುವ ಶ್ರೇಯಸ್ಸನ್ನು ನಾನು ತೆಗೆದುಕೊಳ್ಳುತ್ತೇನೆ  ಎಂದು ಟೀಚರ್ ಉತ್ತರಿಸಿದ್ದಾರೆ. ಇದೀಗ ಈ ಪೋಸ್ಟ್ ಕುರಿತು ಪರ ವಿರೋಧಗಳು ವ್ಯಕ್ತವಾಗಿದೆ. 
 

Latest Videos
Follow Us:
Download App:
  • android
  • ios