ಶಿಕ್ಷಕಿ, ಪ್ರಾಂಶುಪಾಲರ ಮಧ್ಯೆ ಹೊಡೆದಾಟ : ವಿಡಿಯೋ ವೈರಲ್

ಉತ್ತರ ಪ್ರದೇಶ: ಮಕ್ಕಳಿಗೆ ಬುದ್ಧಿ ಹೇಳಿ ಸರಿ ದಾರಿಗೆ ತರಬೇಕಾದ ಶಿಕ್ಷಕರೇ ಪರಸ್ಪರ ಹೊಡೆದಾಡಿಕೊಂಡ ಘಟನೆ ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿ ನಡೆದಿದೆ. ಶಾಲೆಗೆ ಶಿಕ್ಷಕಿಯೊಬ್ಬರು ತಡವಾಗಿ ಬಂದರೆಂದು ಸಿಟ್ಟುಗೊಂಡ ಸರ್ಕಾರಿ ಶಾಲೆಯ ಪ್ರಾಂಶುಪಾಲರು ಟೀಚರ್‌ಗೆ ಶೂವಿನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. 

principal beats female teacher with shoes Govt school principal and teacher fighting video goes viral akb

ಉತ್ತರ ಪ್ರದೇಶ: ಮಕ್ಕಳಿಗೆ ಬುದ್ಧಿ ಹೇಳಿ ಸರಿ ದಾರಿಗೆ ತರಬೇಕಾದ ಶಿಕ್ಷಕರೇ ಪರಸ್ಪರ ಹೊಡೆದಾಡಿಕೊಂಡ ಘಟನೆ ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿ ನಡೆದಿದೆ. ಶಾಲೆಗೆ ಶಿಕ್ಷಕಿಯೊಬ್ಬರು ತಡವಾಗಿ ಬಂದರೆಂದು ಸಿಟ್ಟುಗೊಂಡ ಸರ್ಕಾರಿ ಶಾಲೆಯ ಪ್ರಾಂಶುಪಾಲರು ಟೀಚರ್‌ಗೆ ಶೂವಿನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಆಘಾತಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿಗಳಿಗೆ ಬುದ್ಧಿ ಹೇಳಿ ಸರಿದಾರಿಗೆ ತರಬೇಕಾದ ಶಿಕ್ಷಕರೇ ಹೀಗೆ ಪರಸ್ಪರ ಹೊಡೆದಾಡಿಕೊಂಡಿರುವುದಕ್ಕೆ ನೋಡುಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಖೇರಿ ಪೊಲೀಸ್‌ ಠಾಣಾ (Kheri police station) ವ್ಯಾಪ್ತಿಯ ಮಹಂಗು ಖೇರಾದಲ್ಲಿ (Mahngu Khera) ಈ ಘಟನೆ ನಡೆದಿದೆ. ವಿಡಿಯೋದಲ್ಲಿರುವ ದೃಶ್ಯಗಳನ್ನು ಗಮನಿಸಿ ಹೀಗೆ ಮಹಿಳಾ ಶಿಕ್ಷಕಿ ಮೇಲೆ ಹಲ್ಲೆ ಮಾಡಿದ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಮೂಲ ಶಿಕ್ಷಣ ಅಧಿಕಾರಿ (Basic Shiksha Adhikari) ಲಕ್ಷ್ಮಿಕಾಂತ್ ಪಾಂಡೆ (Laxmikant Pandey) ಹೇಳಿದ್ದಾರೆ. 

ಕ್ಲಾಸ್ ರೂಮ್ ನಲ್ಲೇ ಟೀಚರ್ ನಿದ್ರೆ, ಗಾಳಿ ಬೀಸಿದ ಮಕ್ಕಳು ವೀಡಿಯೋ ವೈರಲ್!

ಸುದ್ದಿಸಂಸ್ಥೆ ಎಎನ್‌ಐ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ. ವಿಡಿಯೋದಲ್ಲಿ ಪ್ರಾಂಶುಪಾಲ ಅಜಿತ್ ವರ್ಮಾ (Ajit Verma) ಮಹಿಳಾ ಶಿಕ್ಷಕಿ (ಶಿಕ್ಷಾಮಿತ್ರ)ಗೆ 10 ನಿಮಿಷ ತಡವಾಗಿ ಶಾಲೆಗೆ ಬಂದಿದ್ದಕ್ಕೆ ಹಲ್ಲೆ ಮಾಡುತ್ತಿರುವುದು ಕಾಣಿಸುತ್ತಿದೆ. 

 

ಹಿಂದಿ ಭಾಷೆಯ ನ್ಯೂಸ್ ಪೋರ್ಟಲ್‌ ಪ್ರಭಾ ಸಾಕ್ಷಿಯ ವರದಿಯಂತೆ ಮಹಿಳಾ ಶಿಕ್ಷಕಿ ಈ ಬಗ್ಗೆ ಖೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ರಿಜಿಸ್ಟಾರ್ ಪುಸ್ತಕದಲ್ಲಿ ನಾನು ಹಾಜರಾತಿ ಹಾಕುವ ವೇಳೆ ದಿನವೂ ಪ್ರಾಂಶುಪಾಲ ಅಜಿತ್ ವರ್ಮಾ  ತನಗೆ ಕಿರುಕುಳ ನೀಡುತ್ತಾರೆ. ಶುಕ್ರವಾರವೂ (ಜೂನ್‌ 24) ಕೂಡ ಇದೇ ವಿಚಾರಕ್ಕೆ ವಾಗ್ವಾದ ನಡೆದಿತ್ತು. ಹಾಜರಾತಿ ಪುಸ್ತಕದಲ್ಲಿ ಕ್ರಾಸ್ ಮಾರ್ಕ್ ಮಾಡಿದ್ದು ಜಗಳಕ್ಕೆ ಕಾರಣವಾಯಿತು ಎಂದು ದೂರಿದ್ದಾರೆ. 

ಯಾವ ಸ್ಪೋರ್ಟ್ಸ್‌ ಕಾರಿಗೂ ಕಡಿಮೆ ಇಲ್ಲ ಮ್ಯಾಥ್ಸ್‌ ಟೀಚರ್‌ ನಿರ್ಮಿಸಿದ ಈ ಸೋಲಾರ್ ಕಾರು

ಆದರೆ ಪ್ರಾಂಶುಪಾಲ ಅಜಿತ್ ವರ್ಮಾ ಹೇಳುವ ಪ್ರಕಾರ ಮಹಿಳಾ ಶಿಕ್ಷಕಿ ನನ್ನ ಮೇಲೆ ಹಲ್ಲೆ ನಡೆಸಲು ಮೊದಲು ಕೈ ಎತ್ತಿದರು ಎಂದು ಆರೋಪಿಸಿದ್ದಾರೆ. ಇವರಿಬ್ಬರು ಜಗಳ ಮಾಡುತ್ತಿದ್ದರೆ ಇತರ ಶಿಕ್ಷಕರು ಇವರಿಬ್ಬರನ್ನು ಬಿಡಿಸಲು ಪ್ರಯತ್ನಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ಕೆಲ ದಿನಗಳ ಹಿಂದೆ ಮಧ್ಯಪ್ರದೇಶ ಸಾತ್ನಾ ಜಿಲ್ಲೆಯ ಚಿತ್ರಕೂಟದ ಶಾಲೆಯೊಂದರಲ್ಲಿ ಇಬ್ಬರು ಮಹಿಳಾ ಶಿಕ್ಷಕರು ಪರಸ್ಪರ ಹೊಡೆದಾಡಿಕೊಂಡ ವಿಡಿಯೋವೊಂದು ವೈರಲ್ ಆಗಿತ್ತು. ಮಹಿಳಾ ಶಿಕ್ಷಕರಿಬ್ಬರು ಮಕ್ಕಳ ಮುಂದೆಯೇ ಒಂದು ಕುರ್ಚಿಗಾಗಿ ಹೊಡೆದಾಡಿದ್ದಾರೆ. ಇದರ ವಿಡಿಯೋ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಕ್ಕಳಿಗೆ ಬುದ್ದಿ ಹೇಳಬೇಕಾದ ಶಿಕ್ಷಕರೇ ಹೀಗೆ ಮಕ್ಕಳಿಗಿಂತ ಕಡೆಯಾಗಿ ಒಂದು ಕುರ್ಚಿಗಾಗಿ ಕಿತ್ತಾಡಿದ್ದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. 
 

Latest Videos
Follow Us:
Download App:
  • android
  • ios