SSLC Supplementary Exam: ನಾಳೆಯಿಂದ ಜು.4ರವರೆಗೆ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯು ಜೂನ್‌ 27ರ ಸೋಮವಾರದಿಂದ ಜುಲೈ 4ರವರೆಗೆ ನಡೆಯಲಿದ್ದು, ಈ ಬಾರಿಯ ಪರೀಕ್ಷೆಗೆ ಒಟ್ಟು 94,649 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ. 

sslc supplementary exam 2022 time table exam from june 27 to july 4th gvd

ಬೆಂಗಳೂರು (ಜೂ.26): ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯು ಜೂನ್‌ 27ರ ಸೋಮವಾರದಿಂದ ಜುಲೈ 4ರವರೆಗೆ ನಡೆಯಲಿದ್ದು, ಈ ಬಾರಿಯ ಪರೀಕ್ಷೆಗೆ ಒಟ್ಟು 94,649 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ. ರಾಜ್ಯಾದ್ಯಂತ ಒಟ್ಟಾರೆ 423 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. 

ಪರೀಕ್ಷೆಗೆ ನೋಂದಾಯಿಸಿಕೊಂಡಿರುವವರ ಪೈಕಿ 63,363 ಪುರುಷ ವಿದ್ಯಾರ್ಥಿಗಳು, 31,283 ವಿದ್ಯಾರ್ಥಿನಿಯರು ಹಾಗೂ ಮೂವರು ತೃತೀಯ ಲಿಂಗಿಗಳಾಗಿದ್ದಾರೆ. ವಿದ್ಯಾರ್ಥಿಗಳಿಗೆ ಈಗಾಗಲೇ ಪರೀಕ್ಷಾ ಪ್ರವೇಶ ಪತ್ರ ವಿತರಣೆ ಮಾಡಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಲು ಕ್ರಮ ವಹಿಸಲಾಗಿದೆ. 

Revision of Text Book Row: ನಮ್ಮ ಮಕ್ಕಳಿಗೆ ಎಂತಹ ಶಿಕ್ಷಣ ನೀಡಬೇಕು?

ಕೊರೋನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆಗೆ ಅಳವಡಿಸಿಕೊಂಡಿದ್ದ ಮಾರ್ಗಸೂಚಿಯನ್ನೇ ಪೂರಕ ಪರೀಕ್ಷೆಗೂ ಅಳವಡಿಸಿಕೊಳ್ಳಲು ನಿರ್ದೇಶನ ನೀಡಲಾಗಿದೆ ಎಂದು ಮಂಡಳಿ ನಿರ್ದೇಶಕ ಎಚ್‌.ಎನ್‌. ಗೋಪಾಲಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪರೀಕ್ಷೆ ಮುಗಿದ ಬಳಿಕ ಉತ್ತರ ಪತ್ರಿಕೆಗಳನ್ನು ಜು.11ರಿಂದ ರಾಜ್ಯಾದ್ಯಂತ 5 ಜಿಲ್ಲೆಗಳ 28 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಸಲಾಗುತ್ತದೆ. ಆಗಸ್ಟ್‌ ಮೊದಲನೇ ವಾರದಲ್ಲಿ ಫಲಿತಾಂಶ ಪ್ರಕಟಿಸಲು ಮಂಡಳಿ ಗುರಿ ಹೊಂದಿದೆ ಎಂದು ಅವರು ಹೇಳಿದರು.

SSLCಯಲ್ಲಿ ಶೂನ್ಯ ಸಾಧನೆಗೈದ BBMP ಶಾಲೆಗಳ ಶಿಕ್ಷಕರ ವಜಾ: 2021 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ (SSLC Exam) ಶೇ.99.94 ರಷ್ಟು ಫಲಿತಾಂಶ ದಾಖಲಿಸಿದ ಬಳಿಕ ಈ ಸಾಲಿನಲ್ಲಿ ಬಿಬಿಎಂಪಿಯ ಶಿಕ್ಷಣ ಇಲಾಖೆಗೆ ದೊಡ್ಡ ಶಾಕ್ ಎದುರಾಗಿದ್ದು, ಪುರಸಭೆಯಿಂದ ನಿರ್ವಹಣೆಯಾಗುತ್ತಿರುವ ಶಾಲೆಗಳಲ್ಲಿ (School) ಫಲಿತಾಂಶ ತೀವ್ರ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಶೂನ್ಯ ಸಾಧನೆ ಮಾಡಿರುವ ಎರಡು ಶಾಲೆಗೆ ನೋಟಿಸ್ ನೀಡಲಾಗಿದ್ದು, ಶಿಕ್ಷಕರನ್ನು ವಜಾ ಮಾಡಲಾಗಿದೆ.

5000 ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಕ, ಗೌರವ ಧನ ಹೆಚ್ಚಳಕ್ಕೆ ಸರಕಾರ ಆದೇಶ

ಬಿಬಿಎಂಪಿ (BBMP) ಶಾಲೆಗಳು 2022ನೇ ಸಾಲಿನ ಎಸ್ಎಸ್  ಶೇ.71.27 ರಷ್ಟು ತೇರ್ಗಡೆ ಫಲಿತಾಂಶವನ್ನು ಹೊಂದಿದ್ದು, ತೀವ್ರ ಕುಸಿತ ಕಂಡಿದೆ.  ಜೊತೆಗೆ ಎರಡು ಶಿಕ್ಷಣ ಸಂಸ್ಥೆಗಳು  ಶೂನ್ಯ ಸಾಧನೆ ಮಾಡಿದ್ದು,  ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದ ಮರ್ಫಿ ಟೌನ್‌ನ 19 ವಿದ್ಯಾರ್ಥಿಗಳು ಮತ್ತು ಕೆ.ಜಿ.ನಗರದ  ಶಾಲೆಯ ಇಬ್ಬರು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. 2020 ರಲ್ಲಿ ಶೇ.50.16   2019ರಲ್ಲಿ ಶೇ.52  ಮತ್ತು 2018 ರಲ್ಲಿ ಶೇ. 51 ಫಲಿತಾಂಶವಿತ್ತು. ಆ ವರ್ಷಗಳಿಗೆ ಹೋಲಿಸಿದರೆ 2022 ರ ಉತ್ತೀರ್ಣ ಶೇಕಡಾವಾರು ಶೇಕಡಾ 71.27 ರಷ್ಟಿದೆ. ವಾಸ್ತವವಾಗಿ, ಕೆ ಜಿ ನಗರ ಶಾಲೆಯು 2020 ರ ನಂತರ ಎರಡನೇ ಬಾರಿಗೆ ಶೂನ್ಯ ಶೇಕಡಾವನ್ನು ಪಡೆದುಕೊಂಡಿದೆ. 

Latest Videos
Follow Us:
Download App:
  • android
  • ios