SSLC Exam 2023 Time Table: ಕರ್ನಾಟಕ ಎಸ್‌ಎಸ್‌ಎಲ್‌ ಸಿ ಅಂತಿಮ ವೇಳಾಪಟ್ಟಿ ಬಿಡುಗಡೆ

ಕರ್ನಾಟಕ ಫ್ರೌಢ ಶಿಕ್ಷಣ ಮಂಡಳಿ 2023ನೇ ಸಾಲಿನ ಎಸ್‌ಎಸ್‌ಎಲ್‌ ಸಿ  ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.  ಮಾರ್ಚ್​ 31ರಿಂದ ಏಪ್ರಿಲ್ 15ರವರೆಗೆ ಹತ್ತನೇ ತರಗತಿಯ  ಪರೀಕ್ಷೆಗಳು ನಡೆಯಲಿದೆ.

SSLC Exam 2023 Time Table released check in official website gow

ಬೆಂಗಳೂರು (ಡಿ.5): ಕರ್ನಾಟಕ ಫ್ರೌಢ ಶಿಕ್ಷಣ ಮಂಡಳಿ 2023ರ ಮಾರ್ಚ್-ಏಪ್ರಿಲ್‌ನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ ಸಿ  ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.  ಮಾರ್ಚ್​ 31ರಿಂದ ಏಪ್ರಿಲ್ 15ರವರೆಗೆ ಹತ್ತನೇ ತರಗತಿಯ  ಪರೀಕ್ಷೆಗಳು ನಡೆಯಲಿದ್ದು, ಅಂತಿಮ ವೇಳಾಪಟ್ಟಿಯನ್ನು ಮಂಡಳಿಯ ಅಧಿಕೃತ ವೆಬ್‌ತಾಣದಲ್ಲಿ ಕೂಡಪರಿಶೀಲಿಸಬಹುದು. ಮಾರ್ಚ್​ 31 ಮೊದಲ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ ಪರೀಕ್ಷೆಗಳು ನಡೆಸಲಿದೆ.
ಏಪ್ರಿಲ್ 4 ಗಣಿತ, ಸಮಾಜ ಶಾಸ್ತ್ರ
ಏಪ್ರಿಲ್ 6-ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ
ಏಪ್ರಿಲ್ 8ರಂದು ಅರ್ಥಶಾಸ್ತ್ರ
ಏಪ್ರಿಲ್ 10- ವಿಜ್ಞಾನ, ರಾಜ್ಯಶಾಸ್ತ್ರ
ಏ.12- ತೃತೀಯ ಭಾಷೆ ಹಿಂದಿ, ಕನ್ನಡ, ಇಂಗ್ಲಿಷ್
ಏಪ್ರಿಲ್ 15ರಂದು ಸಮಾಜ ವಿಜ್ಞಾನ

ಶಾಲಾ ಮಕ್ಕಳಿಗೆ ವಿಶೇಷ ಬಸ್‌ ಸೌಲಭ್ಯ: ಸಿಎಂ ಬೊಮ್ಮಾಯಿ 

ಕಳೆದ ಅಕ್ಟೋಬರ್‌ನಲ್ಲಿ ಪ್ರಕಟಿಸಿದ್ದ ತಾತ್ಕಾಲಿಕ ವೇಳಾಪಟ್ಟಿಯಲ್ಲಿ (ಏ.1ರಿಂದ 15) ಕೊಂಚ ಮಾರ್ಪಾಡು ಮಾಡಿ ಮಾ.31ರಿಂದ ಪರೀಕ್ಷೆ ಆರಂಭಿಸಿ ಏ.15ಕ್ಕೆ ಮುಕ್ತಾಯಗೊಳಿಸಲು ಮಂಡಳಿ ನಿರ್ಧರಿಸಿದೆ. ಬಹುತೇಕ ಎಲ್ಲ ಪ್ರಮುಖ ವಿಷಯಗಳ ಪರೀಕ್ಷೆಗಳು ನಿತ್ಯ ಬೆಳಿಗ್ಗೆ 10.30ರಿಂದ ಆರಂಭಗೊಳ್ಳಲಿವೆ. ಸಂಗೀತ ವಿಷಯದ ಪರೀಕ್ಷೆಗಳು ಮಾತ್ರ ಮಧ್ಯಾಹ್ನ 2 ಗಂಟೆಯಿಂದ ಪ್ರಾರಂಭವಾಗಲಿವೆ ಎಂದು ಮಂಡಳಿಯ ಅಧ್ಯಕ್ಷ ನಲಿನ್‌ ಅತುಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಗಳನ್ನು ನಡೆಸಲು ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ’ ಎಂಬ ಹೊಸ ಸಂಸ್ಥೆಯನ್ನು ರಚಿಸಿರುವ ಸರ್ಕಾರ ಈ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುತ್ತಿದ್ದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ಹೊಸ ಮಂಡಳಿಯಲ್ಲಿ ವಿಲೀನಗೊಳಿಸಿದೆ. ನೂತನ ಮಂಡಳಿ ನಡೆಸುತ್ತಿರುವ ಮೊದಲ ಎಸ್ಸೆಸ್ಸೆಲ್ಸಿ ಪರೀಕ್ಷೆ ಇದಾಗಿದೆ.

ಹೊಸ ವೇಳಾಪಟ್ಟಿ ಬಗ್ಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. 

 

Latest Videos
Follow Us:
Download App:
  • android
  • ios