SSLC ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್, ಈ ಬಾರಿಯೂ 10 % ಗ್ರೇಸ್ ಮಾರ್ಕ್ಸ್! ಯಾವೆಲ್ಲ ವಿಷಯಕ್ಕೆ ಸಿಗಲಿದೆ?
ಈ ಬಾರಿಯೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಗುಡ್ ನ್ಯೂಸ್ ನೀಡಿದೆ. ಕೊರೊನಾ ಬ್ಯಾಚ್ ಎಂದು ಪರಿಗಣಿಸಿ ಶೇ.10% ರಷ್ಟು ಗ್ರೇಸ್ ಅಂಕ ನೀಡುವುದಾಗಿ ಬೋರ್ಡ್ ತಿಳಿಸಿದೆ.
ವರದಿ: ನಂದೀಶ್ ಮಲ್ಲೇನಹಳ್ಳಿ,ಏಷ್ಯಾನೆಟ್ ಸುವರ್ಣ
ಬೆಂಗಳೂರು(ಮಾ.29): ಈ ಬಾರಿಯೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಗುಡ್ ನ್ಯೂಸ್ ನೀಡಿದೆ. ಇದೇ 31 ರಿಂದ ಎಸ್‌ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾಗಲಿದ್ದು, ಪರೀಕ್ಷಾ ತಯಾರಿಗಳನ್ನ ಪೂರ್ಣಗೊಳಿಸಿರುವುದಾಗಿ SSLC ಬೋರ್ಡ್ ನಿರ್ದೇಶಕರಾದ ರಾಮಚಂದ್ರ ಹೇಳಿದ್ದಾರೆ. ಇದರ ಜೊತೆಗೆ ಈ ಬಾರಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಮಂಡಳಿ ಗುಡ್ ನ್ಯೂಸ್ ನೀಡಿದೆ. ಕೊರೊನಾ ಬ್ಯಾಚ್ ಎಂದು ಪರಿಗಣಿಸಿ ಶೇ.10% ರಷ್ಟು ಗ್ರೇಸ್ ಅಂಕ ನೀಡುವುದಾಗಿ ಬೋರ್ಡ್ ತಿಳಿಸಿದೆ.
ಮೂರು ವಿಷಯಗಳಿಗೆ ಮಾತ್ರ ಗ್ರೇಸ್ ಮಾರ್ಕ್ ಅಂಕ ನೀಡಲು ಬೋರ್ಡ್ ಮುಂದಾಗಿದೆ. ಭಾಷಾ ಹಾಗೂ ಕೋರ್ ವಿಷಯಗಳಿಗೆ ಮಾತ್ರ ಗ್ರೇಸ್ ಅಂಕ ಕೊಡಲಾಗುತ್ತೆ. ತೇರ್ಗಡೆ ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಮಾತ್ರ ಇದು ಅನ್ವಯವಾಗಲಿದೆ ಅಂತ ನಿರ್ದೇಶಕರು ತಿಳಿಸಿದ್ದಾರೆ.
ಇನ್ನೂ ಕಳೆದ ಎರಡು ವರುಷದಿಂದ ಕೊರೊನಾ ಕಾರಣಕ್ಕೆ ಶೇ.10ರಷ್ಟು ಗ್ರೇಸ್ ಮಾರ್ಕ್ಸ್ ನೀಡಲಾಗಿತ್ತು.ಅದನ್ನ ಈ ವರ್ಷವೂ ಮುಂದುವರಿಸಲಾಗಿದೆ.ಆಲ್ಲದೆ ಕಳೆದ ಎರಡು ವರ್ಷಗಳಲ್ಲಿ 8, 9ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ತೇರ್ಗಡೆ ಹೊಂದಿದ ಕಾರಣ ಈ ವರ್ಷವೂ ಶೇ.10ರಷ್ಟು ಗ್ರೇಸ್ ಮಾರ್ಕ್ಸ್ ನೀಡಲು ಬೋರ್ಡ್ ನಿರ್ಧಾರ ತೆಗೆದುಕೊಂಡಿದೆ.
ಚಿತ್ರವಿಚಿತ್ರ ಡ್ರೆಸ್ ಮೂಲಕ ಮಿಸ್ ಮ್ಯಾಚ್ ಡೇ ಆಚರಿಸಿದ ಕಾಲೇಜು ಹುಡುಗ್ರು
SSLC ಪರೀಕ್ಷಾ ಕಾರ್ಯ ಪೂರ್ಣ ಗೊಳಿಸಿದ ಬೋರ್ಡ್:
ಮಾರ್ಚ್ 31 ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾಗುತ್ತಿದೆ. ಮಾ. 31ರಿಂದ ಏ. 15ರ ವರೆಗೆ ಈ ಭಾರಿ ಪರೀಕ್ಷೆ ನಡೆಯಲಿದೆ. ಈ ಬಾರಿ ಒಟ್ಟು 8.42 ಲಕ್ಷ ವಿದ್ಯಾರ್ಥಿಗಳು ಬರೆಯಲಿದ್ದಾರೆ ಅಂತ ಎಸ್.ಎಸ್.ಎಲ್.ಸಿ ಬೋರ್ಡ್ ನಿರ್ದೇಶಕರಾದ ರಾಮಚಂದ್ರ ಹೇಳಿದ್ದಾರೆ.
5 ಮತ್ತು 8 ತರಗತಿಗಳಿಗೆ ಬೋರ್ಡ್ ಪರೀಕ್ಷೆ ಮೇಲ್ಮನವಿ ವಜಾ, ಮಧ್ಯಾಹ್ನ 2.30ರಿಂದ ಪರೀಕ್ಷೆ
ರಾಜ್ಯಾದ್ಯಂತ ಒಟ್ಟು 3305 ಪರೀಕ್ಷಾ ಕೇಂದ್ರಗಳನ್ನ ಗುರುತಿಸಲಾಗಿದೆ. ಈ ಬಾರಿ ಚುನಾವಣೆ ಇರುವುದರಿಂದ ಪೊಲೀಸ್ ಬಂದೋಬಸ್ತ್ ಮಾಡಲು ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿಗೆ ಮೊದಲೇ ಸೂಚನೆ ಕೊಡಲಾಗಿದೆ ಅಂತ ಪರೀಕ್ಷಾ ಮಂಡಳಿ ನಿರ್ದೇಶಕ ರಾಮಚಂದ್ರ ಹೇಳಿದ್ದಾರೆ. ಆಲ್ಲದೆ ಪರೀಕ್ಷಾ ಅಕ್ರಮಗಳನ್ನ ತಡೆಯಲು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲಾಗಿದ್ದು ಊಹಾ ಪೋಹಗಳಿಗೆ ಪೋಷಕರು ಹಾಗೂ ವಿದ್ಯಾರ್ಥಿಗಳು ಕಿವಿಕೊಡದಂತೆ ಬೋರ್ಡ್ ಮನವಿ ಮಾಡಿಕೊಂಡಿದೆ..