ಪಠ್ಯದಲ್ಲಿ ಭಗವದ್ಗೀತೆ ಪರ-ವಿರೋಧದ ಮಧ್ಯೆ ವಿಶ್ವೇಶ್ವರ ಹೆಗಡೆ ಕಾಗೇರಿ ಎಂಟ್ರಿ, ಏನು ಹೇಳಿದ್ರು?

* ಪಠ್ಯದಲ್ಲಿ ಭಗವದ್ಗೀತೆ ಪರ-ವಿರೋಧದ ಮಧ್ಯೆ ವಿಶ್ವೇಶ್ವರ ಹೆಗಡೆ ಕಾಗೇರಿ ಎಂಟ್ರಿ
* ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಬೋಧಿಸುವ ಶಿಕ್ಷಣ ವ್ಯವಸ್ಥೆಯ ಅಗತ್ಯತೆ ಹೆಚ್ಚಾಗಿದೆ ಎಂದ ಕಾಗೇರಿ
* ಚರಣ್ ಬ್ಯಾಂಕ್ ಶಾಖೆಯ ನೂತನ ಕಟ್ಟಡವನ್ನು ಉದ್ಘಾಟನೆ ಕಾರ್ಯಕ್ರದಲ್ಲಿ ಹೇಳಿಕೆ
 

Speaker Vishweshwar Hegde Kageri Bats for Bhagavad Gita in school syllabus rbj

ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು, (ಮಾ.21):  ಕರ್ನಾಟಕ(Karnataka) ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪರ-ವಿರೋಧ ತಾರಕಕ್ಕೇರಿದೆ. ಇದರ ನಡುವೆ ಭಗವದ್ಗೀತೆಯಲ್ಲಿ  ಶ್ರೀಕೃಷ್ಣ ಪರಮಾತ್ಮ ಭೋಧಿಸಿದ ಶಿಕ್ಷಣ ವ್ಯವಸ್ಥೆಯ ಅಗತ್ಯತೆ ಹೆಚ್ಚಾಗಿದೆ ಎಂದು ವಿಧಾನಸಭಾಧ್ಯಕ್ಷ  ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯ (Speaker Vishweshwar Hegde Kageri) ವ್ಯಕ್ತಪಡಿಸಿದ್ದಾರೆ.

 ಇಂದು(ಸೋಮವಾರ) ಬೆಂಗಳೂರಿನ ಜಯನಗರದಲ್ಲಿರುವ ಶ್ರೀ ಚರಣ್ ಬ್ಯಾಂಕ್ ಶಾಖೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಕಾಗೇರಿ ಅವರು ಮಾತನಾಡಿದ ಕಾಗೇರಿ, ಹಣ ಗಳಿಸುವ ಉದ್ದೇಶವನ್ನು ಕಲಿಸುವ ಬ್ರಿಟೀಷ್‌ ಶಿಕ್ಷಣ ವ್ಯವಸ್ಥೆ ಹೊರತಾಗಿ, ನಮ್ಮ ಜೀವನದ ದೃಷ್ಟಿಕೋನವನ್ನು ಸ್ಪಷ್ಟಗೊಳಿಸುವ, ಜೀವನಕ್ಕೆ ಸಾರ್ಥಕತೆಯನ್ನು ನೀಡುವಂತಹ ಶಕ್ತಿಯನ್ನು ಹೊಂದಿರುವ ಶಿಕ್ಣ ವ್ಯವಸ್ಥೆ ಬೇಕಿದೆ ಎಂದರು. 

Bhagavad Gita in Syllabus ನಾವು ಸಹ ಹಿಂದೂಗಳೇ, ಶ್ಲೋಕ ವಾಚಿಸುತ್ತ ಬಿಜೆಪಿಗೆ ಟಾಂಗ್ ಕೊಟ್ಟ ಡಿಕೆಶಿ

ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆಯನ್ನು (Bhagavad Gita) ಅಳವಡಿಸಬೇಕು ಎನ್ನುವಂತಹ ವಿಷಯದ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಿದೆ. ಇಂದಿನ ಶಿಕ್ಷಣ ವ್ಯವಸ್ಥೆ ಹಣವನ್ನು ಗಳಿಸುವ ಉದ್ದೇಶದ ಬ್ರಿಟೀಷ್‌ ಪದ್ಧತಿಯಾಗಿದೆ. ನನ್ನದೊಂದು ನಂಬಿಕೆ ಇದೆ ಅದನ್ನು ಹೇಳಿದರೆ ತಪ್ಪಾಗಲಾರದು, ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಬೋಧಿಸುವ ಶಿಕ್ಷಣ ವ್ಯವಸ್ಥೆಯ ಅಗತ್ಯತೆ ಇದೆ ಎಂದು ಅನಿಸುತ್ತದೆ. ಏಕೆಂದರೆ ಅದರಲ್ಲಿ ಯಾವ ಜಾತಿ, ಉಪಜಾತಿ, ಆ ರಾಜ್ಯ, ಈ ಭಾಷೆ ಆ ಗಡಿ, ಈ ಗಡಿ ಎನ್ನುವ ತಾರತಮ್ಯ ಇರಲಿಲ್ಲ. ಯಾವ ಭೇದಬಾವ ಕೂಡ ಇಲ್ಲ ಎಂದು ಹೇಳಿದರು.

  ಸೃಷ್ಟಿಯ ಸತ್ಯ ಏನಿದೆಯೋ ಅದು ಭಗವದ್ಗೀತೆಯಲ್ಲಿ ತಿಳಿಸಲಾಗಿದೆ. ಸೃಷ್ಟಿಯ ಸತ್ಯವನ್ನು ಎಲ್ಲರೂ ತಿಳಿದುಕೊಳ್ಳಬೇಕು, ಹಾಗಾಗಿ ಅದನ್ನು ತಿಳಿದುಕೊಳ್ಳುವ ಶಿಕ್ಷಣ ಭಗವದ್ಗೀತೆಯಲ್ಲಿದೆ. ಹಾಗಾಗಿ ಭಗವದ್ಗೀತೆಯ ಶಿಕ್ಷಣವನ್ನು ನಾವು ಕಲಿಸಿದರೆ ತಪ್ಪಾಗಲಾರದು ಎನ್ನುವುದು ನನ್ನ ನಂಬಿಕೆ. ಹಾಗೂ ಅದನ್ನು ಕಲಿಸಬೇಕೆಂಬ ಆಗ್ರಹ ನನ್ನದಾಗಿದೆ ಎಂದು ತಿಳಿಸಿದರು. 

ಶಿಕ್ಷಣ ಮಂತ್ರಿಯಾಗಿದ್ದಾಗ ಭಗವದ್ಗೀತಾ ಅಭಿಯಾನ ನಡೆಯಿತು. ಸ್ವರ್ಣವಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದಂತಹ ಅಭಿಯಾನದಲ್ಲಿ ರಾಜ್ಯದ 20 ಲಕ್ಷ ವಿದ್ಯಾರ್ಥಿಗಳು ಭಗವದ್ಗೀತೆ ಕಲಿಯುವ ಅವಕಾಶವನ್ನು ನಾನು ಶಿಕ್ಷಣ ಮಂತ್ರಿಯಾಗಿ ಮಾಡಿಕೊಟ್ಟಿದ್ದೇನೆ.  ಇಂದು ಅದು ಕಡ್ಡಾಯವಾಗಿ ಶಿಕ್ಷಣದಲ್ಲಿ ಅಳವಡಿಕೆ ಆಗಬೇಕು ಎನ್ನುವ ಚರ್ಚೆ ನಡೆಯುತ್ತಿದೆ. ಅದು ಬರಲಿ ಎಂದು ಆಶಿಸೋಣ ಭಗವದ್ಗೀತೆ ಶಿಕ್ಷಣದ ಭಾಗ ಆಗಬೇಕು, ಏಕೆಂದರೆ ಅದರಿಂದಾಗಿ ನಮ್ಮ ಜೀವನದ ದೃಷ್ಟಿಕೋನವನ್ನು ಸ್ಪಷ್ಟಗೊಳ್ಳುತ್ತದೆ. ಸುತ್ತದೆ. ಜೀವನದ ಸಾರ್ಥಕತೆಯನ್ನು ಅದು ನೀಡುತ್ತದೆ. ಹಣಗಳಿಸುವ ಶಿಕ್ಷಣ ವ್ಯವಸ್ಥೆಯಿಂದ, ನಮ್ಮ ಜೀವನ ಸಾರ್ಥಕಗೊಳಿಸುವ ಶಿಕ್ಷಣ ವ್ಯವಸ್ಥೆಯ ಕಡೆಗೆ ಹೋಗಲು ಭಗವದ್ಗೀತೆಯಂತಹ ಶಿಕ್ಷಣ ಬೇಕು ಎಂದು ಹೇಳಿದರು. 

ನಾವು ಹಣಗಳಿಸುವ ವ್ಯವಸ್ಥೆಯಿಂದ ಪರಿವರ್ತನೆ ತರಬೇಕು ಎನ್ನುವುದಾದರೆ ಆಧ್ಯಾತ್ಮಿಕ ತಳಹದಿಯ ಶಿಕ್ಷಣ ನಮಗೆ ಅಗತ್ಯ ಇದೆ ಆಧ್ಯಾತ್ಮಿಕ ತಳಹದಿಯ ಶಿಕ್ಷಣ ಭಗವದ್ಗೀತೆಯಂತಹ ಶಿಕ್ಷಣದಲ್ಲಿ ಸಿಗುತ್ತದೆ ಎನ್ನುವುದು ನಮ್ಮ ನಂಬಿಕೆಯಾಗಿದೆ ಎಂದರು.

ಹಣ ಮುಖ್ಯ ಆದರೆ ಹಣವನ್ನು ಹೇಗಾದರೂ ಗಳಿಸಲೇಬೇಕು ಎನ್ನುವಂತಹ ಹಪಾಹಪಿತನ ದುರಾಸೆಯನ್ನು ಸಮಾಜದಲ್ಲಿ ಕಾಣುತ್ತಿದ್ದೇವೆ. ಯಾವ ಮಾರ್ಗದಿಂದಲಾದರೂ ಹಣ ಗಳಿಸಬೇಕು ಎನ್ನುವ ದುರಾಸೆ ಹೆಚ್ಚಾಗಿದೆ. ಆಸೆ ಇರಬೇಕು ನಿಜ ಆದರೆ ದುರಾಸೆ ಶುರುವಾದರೆ ವ್ಯವಸ್ಥೆಯಲ್ಲಿನ ಶಿಥಿಲತೆ ಶುರುವಾಗುತ್ತದೆ. ನಮಗೆ ಬೇಕಾಗಿರುವುದು ಧರ್ಮಮಾರ್ಗದಿಂದ ಗಳಿಸಿದಂತ ಹಣ ಮಾತ್ರ. ಈ ಹಿನ್ನಲೆಯಲ್ಲಿ ನಾವು ಆಧ್ಯಾತಿಕ ತಳಹದಿಯ ಶಿಕ್ಷಣವನ್ನು ಅಳವಡಿಸಿಕೊಳ್ಳುವದತ್ತ ಹೆಚ್ಚಿನ ಗಮನ ನೀಡಬೇಕಾಗಿದೆ ಕಿವಿ ಮಾತು ಹೇಳಿದರು.

Latest Videos
Follow Us:
Download App:
  • android
  • ios