ನಾಳೆ(ಜೂ.16) ದ್ವಿತೀಯ PUC ರಿಸಲ್ಟ್‌ ಪ್ರಕಟವಾಗಲ್ಲ, ಸಚಿವ ನಾಗೇಶ್ ಸ್ಪಷ್ಟನೆ

* ನಾಳೆ(ಜೂ.16) ದ್ವಿತೀಯ PUC ರಿಸಲ್ಟ್‌ ನಾ? 
* ಸ್ಪಷ್ಟನೆ ಕೊಟ್ಟ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ನಾಗೇಶ್
*  ಶಾಲಾ ವಿದ್ಯಾರ್ಥಿಗಳ ಹೊರ ರಾಜ್ಯ ಪ್ರವಾಸ ಬಗ್ಗೆಯೂ ಸ್ಪಷ್ಟನೆ

Second PUC Result Not Announce On June 16th Says Minister Nagesh rbj

ಬೆಂಗಳೂರು, (ಜೂನ್.15):  ದ್ವಿತೀಯ ಪಿಯುಸಿ ರಿಸಲ್ಟ್‌ ಬಗ್ಗೆ ಗೊಂದಲ ಎದ್ದಿದೆ. ನಾಳೆ (ಜೂನ್ 15) ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದ್ರೆ, ನಾಳೆ(ಗುರುವಾರ) ಫಲಿತಾಂಶ ಪ್ರಕಟವಾಗಲ್ಲ ಎಂದು ಸ್ವತಃ ಶಿಕ್ಷಣ ಸಚಿವ ನಾಗೇಶ್ ಅವರು ಸ್ಪಷ್ಟಪಡಿಸಿದ್ದಾರೆ.

ಹೌದು...ಈ ಬಗ್ಗೆ ಇಂದು(ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು.   ನಾಳೆ(ಗುರುವಾರ) ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವೆಂದು ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇಂದು, ನಾಳೆ ಪಿಯುಸಿ ಫಲಿತಾಂಶವೆಂಬ ಸುದ್ದಿ ಸುಳ್ಳು ಜೂನ್‌ ಕೊನೆಯ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶದ ದಿನ ನಾಳೆ ಮಾಧ್ಯಮಗಳ ಮೂಲಕ ತಿಳಿಸುತ್ತೇನೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದರು.

ಸೆಕೆಂಡ್ ಪಿಯು ಮುಗಿದ್ಮೇಲೆ ಯಾವ ಕೋರ್ಸ್ ಮಾಡಬೇಕು?

ಮೇ. 18 ಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆಗಳು ಕರ್ನಾಟಕದಲ್ಲಿ ಮುಗಿದಿದ್ದವು. ಪರೀಕ್ಷೆ ಮುಗಿದ ಕೂಡಲೇ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಮೌಲ್ಯಮಾಪನಕ್ಕೆ ಚಾಲನೆ ನೀಡಲಾಯಿತು. ನೋಂದಣಿ ಮಾಡಿದ ಪ್ರಾಧ್ಯಾಪಕರು ಪೂರ್ಣ ಪ್ರಮಾಣದಲ್ಲಿ ಮೌಲ್ಯಮಾಪನದಲ್ಲಿ ಪಾಲ್ಗೊಳ್ಳದ ಕಾರಣ ಪರೀಕ್ಷೆ ಫಲಿತಾಂಶ ಪ್ರಕಟದಲ್ಲಿ ವಿಳಂಬವಾಗಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮೊದಲೇ ಮಾಹಿತಿ ನೀಡಿದ್ದರು.

ಇನ್ನು ಇದೇ ವೇಳೆ  ಶಾಲಾ ವಿದ್ಯಾರ್ಥಿಗಳ ಹೊರ ರಾಜ್ಯ ಪ್ರವಾಸ ವಿಚಾರದಲ್ಲೂ ಹಿಂದಿಗೆ ಆದ್ಯತೆ ನೀಡಲಾಗುತ್ತಿದೆ ಎನ್ನುವ ಸುದ್ದಿಯನ್ನು ತಳ್ಳಿಹಾಕಿದ್ದು, ಟ್ವೀಟ್ ಮೂಲಕ ಸ್ಪಸ್ಟೀಕರಣ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು,  ನಾವು ಎಲ್ಲಿಯೂ ಯಾವುದೇ ಭಾಷೆ ಕಡ್ಡಾಯ ಅಂತ ಹೇಳಿಲ್ಲ, ಈ ಗೊಂದಲ ಉಂಟು ಮಾಡಿದ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕದಿಂದ ಹೊರ ರಾಜ್ಯಕ್ಕೆ ಪ್ರವಾಸಕ್ಕೆ ತೆರಳುವ ವಿದ್ಯಾರ್ಥಿಗಳಿಗೆ
ಹಿಂದಿ/ಇಂಗ್ಲೀಷ್ ಭಾಷೆ ಜ್ಞಾನ ಕಡ್ಡಾಯ ಎಂಬ ಸೂಚನೆಯನ್ನು ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ನೀಡಿಲ್ಲ. 
ಈ ಗೊಂದಲಕ್ಕೆ ಕಾರಣವಾದ ಅಧಿಕಾರಿ/ಸಿಬ್ಬಂದಿ ವಿರುದ್ಧ ಇಲಾಖೆಯಿಂದ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios