ನಾಳೆ (ಜೂನ್ 18) ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ
* ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ
* ನಾಳೆ (ಜೂನ್ 18) ರಂದು ಪ್ರಕಟವಾಗಲಿರುವ ದ್ವಿತೀಯ ಪಿಯುಸಿ ರಿಸಲ್ಟ್
* ರಾಜ್ಯಾದಂತ ಒಟ್ಟು 1076 ಪರೀಕ್ಷಾ ಕೇಂದ್ರಗಳಲ್ಲಿ ಈ ಬಾರಿ ಪರೀಕ್ಷೆ ನಡೆಸಲಾಗಿತ್ತು
ಬೆಂಗಳೂರು, (ಜೂನ್.17): 2021-22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ನಾಳೆ (ಜೂನ್.18) ಪ್ರಕಟಿವಾಗಲಿದೆ. ಈ ಬಗ್ಗೆ ಸ್ವತಃ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಮಾಹಿತಿ ನೀಡಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ನಾಳೆ (ಜೂನ್.18) ಪ್ರಕಟಿಸಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಫಲಿತಾಂಶದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆ (Department Of Pre-University Education) ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಬಹುದಾಗಿದೆ.karresults.nic.in ನಲ್ಲೂ ಸಹ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಸಬಹುದಾಗಿದೆ.ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯು ಏಪ್ರಿಲ್ 22ರಿಂದ ಮೇ 18ರವರೆಗೆ ನಡೆದಿತ್ತು.
ಸೆಕೆಂಡ್ ಪಿಯು ಮುಗಿದ್ಮೇಲೆ ಯಾವ ಕೋರ್ಸ್ ಮಾಡಬೇಕು?
ಶನಿವಾರ ಬೆಳಗ್ಗೆ 11 ಗಂಟೆಗೆ ಪಿಯುಸಿ ಬೋಡ್೯ನಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಫಲಿತಾಂಶ ಘೋಷಣೆ ಪ್ರಕಟಿಸಲಿದ್ದಾರೆ. ಬಳಿಕ ಆನ್‌ಲೈನ್‌ಲ್ಲಿ ಫಲಿತಾಂಶ ವಿದ್ಯಾರ್ಥಿಗಳ ಮೊಬೈಲ್ ಗೆ ನೇರವಾಗಿ ಮೆಸೇಜ್ ಮೂಲಕ ರವಾನೆ ಆಗಲಿದೆ.
2021-22ನೇ ಸಾಲಿನಲ್ಲಿ, ರಾಜ್ಯಾದಂತ ಒಟ್ಟು 1076 ಪರೀಕ್ಷಾ ಕೇಂದ್ರಗಳಲ್ಲಿ ಈ ಬಾರಿ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿ ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಇದರಲ್ಲಿ 3,46,936 ಬಾಲಕರು ಹಾಗೂ 3,37,319 ಬಾಲಕಿಯರು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ 6,00,519 ರೆಗ್ಯುಲರ್ ವಿದ್ಯಾರ್ಥಿಗಳಿದ್ದರೆ, 61,808 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ.
ವಿದ್ಯಾರ್ಥಿಗಳ ಮೊಬೈಲ್ ನಂಬರ್‌ಗಳಿಗೆ ಫಲಿತಾಂಶವು ಬರಲಿದೆ. ಜೊತೆಗೆ ಕಾಲೇಜುಗಳಿಗೂ ರಿಸಲ್ಟ್ ಪ್ರತಿಯನ್ನು ಲಗತ್ತಿಸಲಾಗುತ್ತದೆ. ಫಲಿತಾಂಶವನ್ನು ಆನ್‌ಲೈನ್‌ಲ್ಲಿ ವೀಕ್ಷಿಸಬೇಕಾದರೆ ಪದವಿ ಪುರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ kseeb.kar.nic.in, pue.kar.nic.in ಅಥವಾ karresults.nic.in ವೆಬ್ ಸೈಟ್‌ಗಳಿಗೆ ಭೇಟಿ ನೀಡಿ.
ಫಲಿತಾಂಶ ಚೆಕ್ ಮಾಡುವ ವಿಧಾನ ಹೀಗೆ
1. ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ kseeb.kar.nic.in, pue.kar.nic.in ಅಥವಾ karresults.nic.in ಗೆ ಭೇಟಿ ನೀಡಿ.
2. ಓಪನ್ ಆದ ಪೇಜ್‌ನಲ್ಲಿ ಪಿಯುಸಿ ಫಲಿತಾಂಶಕ್ಕೆ ಸಂಬಂಧಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ. ಆಗ ನಿಮಗೆ ಇನ್ನೊಂದು ಪೇಜ್ ಓಪನ್ ಆಗುತ್ತದೆ.
3. ಆ ಓಪನ್ ಆದ ಪೇಜ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಟೈಪ್ ಮಾಡಿ. ನಂತರ 'Submit' ಎಂಬಲ್ಲಿ ಕ್ಲಿಕ್ ಮಾಡಿ.
4. ಆಗ ನಿಮಗೆ ನಿಮ್ಮ ಫಲಿತಾಂಶ ಪ್ರದರ್ಶನವಾಗುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟ್ ತೆಗೆದುಕೊಳ್ಳಬಹುದು.