ಬೆಂಗಳೂರು(ಜ. 28) ನಿರಂತರವಾಗಿ ಶಾಲೆಗಳನ್ನ ನಡೆಸುವಂತೆ ಪೋಷಕರು ಹಾಗೂ ಎಸ್.ಡಿ.ಎಂ.ಸಿ ಸದಸ್ಯರ ಒಲವು ತೋರಿಸಿದ್ದಾರೆ. 8 ನೇ ತರಗತಿ ಮೇಲಿನ ತರಗತಿಗಳು ನಿರಂತರವಾಗಿ ‌ನಡೆಯದ ಕಾರಣ ಪೋಷಕರ ಜೊತೆ ಮಕ್ಕಳು ಕೂಲಿ‌ ಕೆಲಸಕ್ಕೆ ಹೋಗ್ತಾ ಇದ್ದಾರೆ. ಎಸ್.ಒಪಿ ಆಧರಿಸಿ ಫೆ 1 ರಿಂದ 9 ನೇ ತರಗತಿ ಹಾಗೂ 11 ನೇ ತರಗತಿ ಪ್ರಾರಂಭ ಮಾಡಲು ಚರ್ಚೆ ನಡೆಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

1 ರಿಂದ 5 ನೇ ತರಗತಿ ವರೆಗೆ ವಿದ್ಯಾಗಮ ವಿಸ್ತರಿಸುವ ಬಗ್ಗೆ ಚರ್ಚೆ ಮಾಡಲಾಗಿದೆ. ತಾಂತ್ರಿಕ ಸಲಹಾ ಸಮಿತಿಯಿಂದ  ಸೂಚನೆ ಸಿಕ್ಕಿದೆ. ಫೆ 1 ರಿಂದ 9,‌10,11,12 ನೇ ತರಗತಿ ಪೂರ್ತಿ ದಿನ ತರಗತಿ ನಡೆಸಲು ಯೋಚನೆ ಮಾಡಲಾಗಿದೆ ಎಂದರು.

ಶಾಲೆ ಶುರುವಾಗಿ ಒಂದೇ  ತಿಂಗಳು; SSLC ವೇಳಾಪಟ್ಟಿ ಪ್ರಕಟ

6 ರಿಂದ 8 ನೇ ತರಗತಿ ವರೆಗೆ ವಿದ್ಯಾಗಮ ಮುಂದುವರಿಸಲಾಗುವುದು. ಫೆಬ್ರವರಿ ಎರಡನೇ ವಾರದಲ್ಲಿ ‌ಮತ್ತೊಂದು ಸಭೆ ನಡೆಸುತ್ತೇವೆ ಉಳಿದ ತರಗತಿಗಳನ್ನ ಪ್ರಾರಂಭಿಸುವ ಆಲೋಚನೆಯೂ ನಮ್ಮ ಮುಂದೆ ಇದ್ದು ಹಂತಹಂತವಾಗಿ ತೀರ್ಮಾನ ಮಾಡುತ್ತೇವೆ ಎಂದು ತಿಳಸಿದರು.

ಆರೋಗ್ಯ ಸಚಿವರ ಜೊತೆ ಸಭೆ ನಡೆಸಿದ್ದೇನೆ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು ಸದಸ್ಯರು ಭಾಗಿಯಾಗಿದ್ದರು. ಈ ಹಿಂದೆ ನವೆಂಬರ್ ನಲ್ಲಿ ಒಂದು ಸಭೆ ಸೇರಿದ್ವಿ. ಸಭೆಯಲ್ಲಿ ನಿಶ್ಚಿಯವಾದಂತೆ ಜನವರಿ 1 ರಿಂದ ಶಾಲಾ ಪುನಾರಂಭ ಮಾಡಿದ್ವಿ. 10 ಹಾಗೂ 12 ನೇ ತರಗತಿಗಳ ಪ್ರಾರಂಭ  ಮಾಡಲಾಯಿತು. 6 ರಿಂದ 9 ನೇ ತರಗತಿವರೆಗೆ ಪರಿಷ್ಕೃತ ವಿದ್ಯಾಗಮ ಪ್ರಾರಂಭ ಮಾಡಲಾಯಿತು. ಹಾಜರಾತಿ 12 ನೇ ತರಗತಿ ಶೇ.75 10 ನೇ ತರಗತಿ ಶೇ. ‌70  ವಿದ್ಯಾಗಮ ಹಾಜರಾತಿ ಶೇ.45  ಇದೆ ಎಂದು ಮಾಹಿತಿ ನೀಡಿದರು.

ತಾಂತ್ರಿಕ ಸಲಹಾ ಸಮಿತಿ ಎಸ್ ಒಪಿ ಪ್ರಕಾರ ಶಾಲೆ ಆರಂಭಿಸಿದ್ವಿ.  ಇದುವರೆಗೂ ಯಾವುದೇ ರೀತಿ ದೊಡ್ಡ ಮಟ್ಟದಲ್ಲಿ ಯಾವುದೇ ಸೋಂಕು ಹರಡುವಿಕೆ ಬಗ್ಗೆ ವರದಿಯಾಗಿಲ್ಲ. ಈಗ ಭೌತಿಕವಾಗಿ ಶಾಲೆಗಳು ಪ್ರಾರಂಭವಾಗಿದೆ. ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಾಗಿದೆ. ಆನ್ ಲೈನ್ ಗಿಂತ ಆಫ್ ಲೈನ್ ಕ್ಲಾಸ್ ಗೆ ಹೋಗಲು ವಿದ್ಯಾರ್ಥಿಗಳು ಒಲವು ತೋರಿಸುತ್ತಿದ್ದಾರೆ. ವಿದ್ಯಾಗಮ ಕೂಡ ನಿಲ್ಲಿಸಬೇಡಿ ಅಂತ ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ ಮಕ್ಕಳಲ್ಲಿ ಬೋಧನಾ ಕಲಿಕೆ ಕೂಡ ಹೆಚ್ಚಾಗುತ್ತಿದೆ ಎಂದು ಸುರೇಶ್ ಕುಮಾರ್  ಹೇಳಿದರು.