ಎಸ್‌ಎಸ್‌ಎಲ್‌ಸಿ  ವೇಳಾಪಟ್ಟಿ ಪ್ರಕಟ/ 2021ರ ಜೂನ್ 14 ರಿಂದ 25 ರವರೆಗೆ ಪರೀಕ್ಷೆ/ ಮಾಹಿತಿ ನೀಡಿದ ಸಚಿವ ಸುರೇಶ್ ಕುಮಾರ್/ ಆಕ್ಷೇಪಣೆ ಸಲ್ಲಿಸಲು ಅವಕಾಶ

ಬೆಂಗಳೂರು(ಜ. 28) ಶಾಲೆಗಳು ಆರಂಭವಾಗಿ ಸುಮಾರು ಒಂದು ತಿಂಗಳು ಕಳೆದಿದೆ. ಈ ನಡುವಿನಲ್ಲೇ ಸರ್ಕಾರ ಎಸ್‌ಎಸ್‌ಎಲ್ಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ ಮಾಡಿದೆ.

ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದು ತಾತ್ಕಾಲಿಕ ವೇಳಾಪಟ್ಟಿ ಪ್ರಕಟ ಮಾಡಿರುವುದನ್ನು ತಿಳಿಸಿದ್ದಾರೆ 2021ರ ಜೂನ್ 14 ರಿಂದ 25 ರವರೆಗೆ ಪರೀಕ್ಷಾ ವೇಳಾಪಟ್ಟಿ ನಿಗದಿ ಮಾಡಲಾಗಿದೆ.

ಚಮತ್ಕಾರದ ರೀತಿ ಹಾಜಾರಾತಿ ಹೆಚ್ಚಳ

ವೇಳಾಪಟ್ಟಿ ಹೀಗಿದೆ

ಜೂನ್ 14 - ಪ್ರಥಮ ಭಾಷೆ ಕನ್ನಡ

ಜೂನ್ 16- ಗಣಿತ

ಜೂನ್ 18- ಇಂಗ್ಲೀಷ್- ಕನ್ನಡ

ಜೂನ್ - 21 ವಿಜ್ಞಾನ

ಜೂನ್ - 23 - ಹಿಂದಿ

ಜೂನ್- 25-ಸಮಾಜ ವಿಜ್ಞಾನ

ವೇಳಾಪಟ್ಟಿ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಜನವರಿ 28 ರಿಂದ ಫೆ 26 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.