ನವದೆಹಲಿ(ನ.04): ಅಸ್ಸಾಂ, ಆಂಧ್ರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳು ಶಾಲಾ ಕಾಲೇಜುಗಳು ಪುನಾರಂಭಿಸದ ಬೆನ್ನಲ್ಲೇ, ಇದೀಗ ಮತ್ತೆ ಮೂರು ರಾಜ್ಯಗಳು ಶಾಲೆಗಳನ್ನು ತೆರೆಯುವುದಕ್ಕೆ ತೀರ್ಮಾನ ಮಾಡಿವೆ.

"

ಹರ್ಯಾಣ, ಒಡಿಶಾ ಹಾಗೂ ತಮಿಳುನಾಡು ರಾಜ್ಯಗಳು ನ.16ರ ಬಳಿಕ ಶಾಲಾ ಕಾಲೇಜುಗಳನ್ನು ಆರಂಭಿಸುವುದಾಗಿ ಹೇಳಿವೆ. ದೇಶದಲ್ಲಿ ದೈನಂದಿನ ಸೋಂಕಿನ ಪ್ರಮಾಣ ಭಾರೀ ಮಟ್ಟದಲ್ಲಿ ಇಳಿಕೆಯಾಗುತ್ತಿರುವುದರಿಂದ ರಾಜ್ಯಗಳು ಈ ನಿರ್ಧಾರ ಕೈಗೊಂಡಿವೆ.

ಮಕ್ಕಳೆ, ಪೋಷಕರೇ ಸಿದ್ಧರಾಗಿ : ಸಚಿವರ ಸಭೆಯಲ್ಲಿ ಶಾಲೆ ಆರಂಭಕ್ಕೆ ಮುಹೂರ್ತ ಫಿಕ್ಸ್

ಒಡಿಶಾದಲ್ಲಿ 9-12ನೇ ತರಗತಿಗಳು, ತಮಿಳುನಾಡಲ್ಲಿ 10-12ನೇ ತರಗತಿಗಳು ಆರಂಭಿಸುವುದಾಗಿ ಹೇಳಿವೆ. ಹರ್ಯಾಣದಲ್ಲಿ ಈ ಬಗ್ಗೆ ಯಾವುದೇ ಸ್ಪಷ್ಟತೆಗಳಿಲ್ಲ. ಮೂರೂ ರಾಜ್ಯಗಳಲ್ಲೂ ಬಿಗಿ ಕೋವಿಡ್‌ ನಿಯಮಾವಳಿಗಳು ಅನ್ವಯವಾಗಲಿದೆ.

ರಾಜ್ಯದಲ್ಲಿ ಶಾಲೆ ಯಾವಾಗ ಆರಂಭ?: ಸಚಿವ ಸುರೇಶ್‌ ಕುಮಾರ್‌ ನೇತೃತ್ವದಲ್ಲಿ ಉನ್ನತ ಸಭೆ!

ತಮಿಳುನಾಡಿನಲ್ಲಿ ಪಿಯುಸಿ ತರಗತಿಗಳು ನವೆಂಬರ್ 16ಕ್ಕೆ ಆರಂಭವಾಗಲಿದೆ. ಈ ಮೊದಲು ತಮಿಳುನಾಡು ಸರ್ಕಾರ ಭಾಗಶಃ ಶಾಲೆಗಳನ್ನು ಅ.01ರಿಂದ ತೆರೆಯುವ ನಿರ್ಧಾರ ಮಾಡಿತ್ತು. ಆದರೆ ನಂತರದಲ್ಲಿ ನಿರ್ಧಾರ ಬದಲಾಯಿಸಿತ್ತು. ಈಗಾಗಲೇ ಉತ್ತರಾಖಂಡದಲ್ಲಿ ಶಾಲೆ ಆರಂಭವಾಗಿ ವಿದ್ಯಾರ್ಥಿಗಳಲ್ಲಿ ಕೊರೋನಾ ಪಾಟಿಸಿವ್ ದೃಢಪಟ್ಟಿದೆ.