ಬೇಸಿಗೆ ರಜೆ ಅಂತ್ಯ: ಕರ್ನಾಟಕದಲ್ಲಿ ನಾಳೆಯಿಂದ ಶಾಲೆ ಶುರು

*  ತೋರಣ ಕಟ್ಟಿ, ರಂಗೋಲಿ ಬಿಡಿಸಿ ಮಕ್ಕಳನ್ನು ಸ್ವಾಗತಿಸಲು ಶಾಲೆಗಳು ಸಜ್ಜು
*  ಹಬ್ಬದ ರೀತಿ ಸಂಭ್ರಮಕ್ಕೆ ಶಿಕ್ಷಣ ಇಲಾಖೆ ಸೂಚನೆ
*  ತುಮಕೂರಿನಲ್ಲಿ ‘ಶಾಲಾರಂಭ’ಕ್ಕೆ ಇಂದು ಬೊಮ್ಮಾಯಿ ಚಾಲನೆ
 

Schools Starts From May 16th in Karnataka grg

ಬೆಂಗಳೂರು(ಮೇ.15):  ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ(Academic Year) ಸೋಮವಾರದಿಂದ (ಮೇ.16) ಆರಂಭವಾಗಲಿದ್ದು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆಯು(Department of Education) ಅಧಿಕಾರಿಗಳಿಗೆ ಸೂಚನೆ ನೀಡಿದೆ. ಮತ್ತೊಂದೆಡೆ, ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲು ಶಾಲೆಗಳು ಸಜ್ಜಾಗಿವೆ.

ಶಾಲೆಗಳ(Schools) ಪ್ರಾರಂಭೋತ್ಸವವನ್ನು ಹಬ್ಬದ ರೀತಿ ಮಾಡಬೇಕು. ಇದಕ್ಕಾಗಿ ಸ್ಥಳೀಯ ಜನಪ್ರತಿನಿಧಿಗಳು, ನಾಗರಿಕರು, ಪೋಷಕರು, ಹಿರಿಯ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಮಕ್ಕಳಲ್ಲಿ ಸ್ಥೈರ್ಯ ತುಂಬಲು ನಿರ್ಧರಿಸಲಾಗಿದೆ. ಶಾಲೆಗಳಲ್ಲಿ ತೋರಣ ಕಟ್ಟಿ, ರಂಗೋಲಿ ಬಿಡಿಸಿ ಮಕ್ಕಳನ್ನು(Children) ಸ್ವಾಗತಿಸಬೇಕು. ಹಾಜರಾತಿ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು. ತರಗತಿ ಮತ್ತು ಶಿಕ್ಷಕರ ವೇಳಾಪಟ್ಟಿತಯಾರು ಮಾಡಿಟ್ಟುಕೊಳ್ಳಬೇಕು. ಇದಕ್ಕಾಗಿ ಶಿಕ್ಷಕರು(Teachers) ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.

Bijapur Sainik School ಹೆಣ್ಮಕ್ಕಳಿಗೂ ಪ್ರವೇಶ ಅವಕಾಶ

ಮಕ್ಕಳು ನಿರಾಳ:

ಶಾಲಾ ಆರಂಭಕ್ಕೂ ಮುನ್ನ ಶಾಲೆಯ ಆವರಣ, ಆಟದ ಮೈದಾನ, ಅಡುಗೆ ಮನೆ, ಶೌಚಾಲಯ, ಕೊಠಡಿಗಳನ್ನು ಮುಂಚಿತವಾಗಿಯೇ ಸ್ವಚ್ಛಗೊಳಿಸಬೇಕು ಎಂದು ಈಗಾಗಲೇ ಸೂಚಿಸಿದ್ದು, ಕೊರೋನಾ ನಾಲ್ಕನೇ ಅಲೆಯ ಆತಂಕ ಸದ್ಯಕ್ಕೆ ಇಲ್ಲದಿರುವುದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರೂ ಉತ್ಸುಕರಾಗಿದ್ದಾರೆ. ಆದ್ದರಿಂದ ಅಕ್ಷರ ದಾಸೋಹ, ಹಾಜರಾತಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ‘ಮಿಂಚಿನ ಸಂಚಾರ’ ಯೋಜನೆಯಡಿ ಸಂಬಂಧಪಟ್ಟವರು ಮೇ 30ರವರೆಗೆ ನಿರಂತರವಾಗಿ ಪರಿಶೀಲನೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಬೇಕು. ಬಳಿಕ ಆಯುಕ್ತಾಲಯಗಳಿಗೆ ವರದಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ತುಮಕೂರಿನಲ್ಲಿ ‘ಶಾಲಾರಂಭ’ಕ್ಕೆ ಇಂದು ಬೊಮ್ಮಾಯಿ ಚಾಲನೆ

2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ, ಉಚಿತ ಪಠ್ಯಪುಸ್ತಕ ವಿತರಣೆ ಹಾಗೂ ‘ಕಲಿಕಾ ಚೇತರಿಕೆ’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಮೇ 16ರಂದು ಮಧ್ಯಾಹ್ನ 12.30ಕ್ಕೆ ತುಮಕೂರಿನ ಎಂಪ್ರೆಸ್‌ ಪಬ್ಲಿಕ್‌ ಶಾಲೆಯಲ್ಲಿ ಚಾಲನೆ ನೀಡಲಿದ್ದಾರೆ. 

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಚಿವರಾದ ಆರಗ ಜ್ಞಾನೇಂದ್ರ, ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್‌ ಉಪಸ್ಥಿತರಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ವಹಿಸುವರು. ಮುಖ್ಯ ಅತಿಥಿಗಳಾಗಿ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ಸಂಸದರಾದ ಜಿ.ಎಸ್‌.ಬಸವರಾಜು, ಡಿ.ಕೆ. ಸುರೇಶ್‌ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
 

Latest Videos
Follow Us:
Download App:
  • android
  • ios