Asianet Suvarna News Asianet Suvarna News

ಪಠ್ಯಕ್ರಮ ಮುಗಿಸಲು ಭಾನುವಾರವೂ ನಡೆಯಲಿದೆ ಶಾಲೆ ?

  • ಪ್ರಾಥಮಿಕ ಶಾಲೆ ಆರಂಭ ಕುರಿತು ಚರ್ಚಿಸಲು ಮುಖ್ಯಮಂತ್ರಿಯವರ ಸಮಯ ಕೋರಿಕೆ
  • ಎರಡು ಮೂರು ದಿನದಲ್ಲಿ ಅವರು ಸಮಯ ನೀಡುವ ನಿರೀಕ್ಷೆ
school  will be held on Sunday to complete the syllabus  snr
Author
Bengaluru, First Published Oct 17, 2021, 7:59 AM IST
  • Facebook
  • Twitter
  • Whatsapp

ಬೆಂಗಳೂರು (ಅ.17):  ಪ್ರಾಥಮಿಕ ಶಾಲೆ (Primary school) ಆರಂಭ ಕುರಿತು ಚರ್ಚಿಸಲು ಮುಖ್ಯಮಂತ್ರಿಯವರ (CM) ಸಮಯ ಕೋರಿದ್ದು, ಎರಡು ಮೂರು ದಿನದಲ್ಲಿ ಅವರು ಸಮಯ ನೀಡುವ ನಿರೀಕ್ಷೆಯಿದೆ. ಈ ವೇಳೆ ಶಾಲಾ ಆರಂಭ (School Reopen) ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ (BC Nagesh) ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯವರೊಂದಿಗೆ ಚರ್ಚೆಗೆ ಸಮಯ ನಿಗದಿಯಾದ ಕೂಡಲೇ ತಾಂತ್ರಿಕ ಸಮಿತಿಯ (Technical Committee) ಅಭಿಪ್ರಾಯ ಪಡೆಯಲಾಗುವುದು ಎಂದೂ ತಿಳಿಸಿದರು.

1 ರಿಂದ 5ನೇ ತರಗತಿ ಪ್ರಾರಂಭಕ್ಕೆ ಕೂಡಿಬಂತು ಕಾಲ

ಶಾಲೆ ಆರಂಭವಾದರೂ ಯಾವುದೇ ಪಠ್ಯಕ್ರಮ ಕಡಿಮೆ ಮಾಡುವ ಯಾವುದೇ ಯೋಚನೆ ಇಲ್ಲ. ಶನಿವಾರ ಪೂರ್ಣ ದಿನ ಹಾಗೂ ಭಾನುವಾರವೂ (Sunday) ತರಗತಿ ನಡೆಸಿ ಪಠ್ಯಕ್ರಮ ಪೂರ್ಣಗೊಳಿಸುವ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ಹಂತಹಂತವಾಗಿ ಶಾಲೆ ಆರಂಭಿಸಿ ಎಂದರೂ ವಿಳಂಬ ಮಾಡುವುದಿಲ್ಲ. 10 ದಿನದಲ್ಲಿ ಉಳಿಕೆ ತರಗತಿಗಳನ್ನೂ ಪ್ರಾರಂಭಿಸಲಾಗುವುದು. ಸದ್ಯಕ್ಕೆ ಪಠ್ಯಕಡಿತ (Syllabus) ಪ್ರಸ್ತಾಪವಿಲ್ಲ. ಪರೀಕ್ಷೆಗೆ ಅಗತ್ಯವಿದ್ದಲ್ಲಿ ಮಾತ್ರ ಪಠ್ಯಕ್ರಮವನ್ನು ಕಡಿಮೆ ಮಾಡುವ ಬಗ್ಗೆ ಜನವರಿ-ಫೆಬ್ರವರಿಯಲ್ಲಿ ನಿರ್ಧರಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರದಿಂದ ಗುಡ್ ನ್ಯೂಸ್

1 ರಿಂದ 5 ನೇ ತರಗತಿ ಭೌತಿಕವಾಗಿ ಪ್ರಾರಂಭಿಸಲು ಶಿಕ್ಷಣ ಇಲಾಖೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿದರೆ ಎರಡ್ಮೂರು ದಿನದಲ್ಲಿ ಶಾಲೆ ಆರಂಭ ಮಾಡುವ ಉದ್ದೇಶವಿದೆ. ಬಿಇಓಗಳು (BEO), ಡಿಡಿಪಿಐಗಳ (DDPI) ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. 1 ರಿಂದ 5ರ ವರೆಗೆ ಆರಂಭಕ್ಕೆ ತೀರ್ಮಾನ ಮಾಡಲಾಗಿದೆ. ಆದರೆ ತಾಂತ್ರಿಕ ಸಲಹಾ ಸಮಿತಿ ನೀಡುವ ತೀರ್ಮಾನದ ಆಧಾರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಒಂದು ವೇಳೆ ಹಂತ ಹಂತವಾಗಿ ಶಾಲೆ ಆರಂಭಿಸಿ ಎಂದರೆ, ಮೊದಲು 3 ರಿಂದ 5ನೇ ತರಗತಿ, ನಂತರ 1 ರಿಂದ 3 ನೇ ತರಗತಿ ಆರಂಭಿಸುವ ನಿರ್ಧಾರ ಮಾಡಲಾಗುವುದು ಎಂದು ವಿವರಿಸಿದರು.

Follow Us:
Download App:
  • android
  • ios