CBSE ಯಲ್ಲಿ 99.6% ಅಂಕ ಪಡೆದು ವೈರಲ್, ಈಗ UPSC ಪರಿಕ್ಷೇಯಲ್ಲಿ ಟಾಪರ್!
-CBSEಯಲ್ಲಿ 99.6% ಅಂಕ ಪಡೆದಿದ್ದವ ಈಗ UPSC ಟಾಪರ್
-2014 ರಲ್ಲಿ ಮೀಮ್ಸ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್
-ಮತ್ತೆ ಜೀವ ಪಡೆದ ಟಾಪರ್ ಸಾರ್ಥಕ್ ಅಗರವಾಲ್ ಮೀಮ್ಸ್
ದೆಹಲಿ (ಅ. 14) : ಸಾಮಾಜಿಕ ಜಾಲತಾಣಗಳಲ್ಲಿ ಈಗ ಟ್ರೆಂಡಿಗ್‌ನಲ್ಲಿರುವ ವಿಷಯವೆಂದರೆ ಮೀಮ್ಸ್(Memes). ಸೋಷಿಯಲ್ ಮೀಡಿಯಾ ಮೀಮ್ಸ್ ಮೂಲಕ ಇಂದಿನ ದಿನಗಳಲ್ಲಿ ಅಲ್ಪಾವಧಿಯಲ್ಲಿ ಯಾರು ಬೇಕಾದರೂ ಪ್ರಸಿದ್ಧಿ ಪಡೆಯಬಹುದು. ಸಾಮಾಜಿಕ ಜಾಲತಾಣಗಳನ್ನು ತೆರೆದರೆ ಸಾಕು, ಅಲ್ಲಿ ಮೀಮ್ಸ್‌ಗಳದ್ದೇ ದರ್ಬಾರ್. ಆದರೆ ಕೆಲವು ವರ್ಷಗಳ ಹಿಂದೆ ಬೇರೆಯದ್ದೇ ಸನ್ನಿವೇಶವಿತ್ತು. ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೆಸ್‌ಬುಕ್ (Facebook) ಮತ್ತು ಇನ್ಸ್ಟಾಗ್ರಾಮ (Instagram) ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿದ್ದವು . ಆಗ ಕೇವಲ ಕೆಲವು ಆಯ್ದ ವ್ಯಕ್ತಿ ಮತ್ತು ವಿಷಯಗಳನ್ನು ಹಾಸ್ಯ ರೂಪದಲ್ಲಿ ಬಳಸಿಕೊಂಡು ಮೀಮ್ಸ್ ಮಾಡಲಾಗುತಿತ್ತು. ಹೀಗೆ 2014 ರ ಸಿಬಿಎಸ್‌ಸಿ(CBSE) ಪರೀಕ್ಷೆಯಲ್ಲಿ 99.6% ಅಂಕ ಗಳಿಸಿ ಮೀಮ್ ಪೇಜ್‌ಗಳಿಗೆ ಆಹಾರವಾಗಿದ್ದ ಹುಡುಗ ಇಂದು ಕೇಂದ್ರ ಲೋಕ ಸೇವಾ ಆಯೋಗ (Union Public Service Commission) ನಡೆಸುವ ಸಿವಿಲ್ ಸರ್ವಿಸಸ್ ಪರಿಕ್ಷೇಯಲ್ಲಿ (Civil Services Examination) 17ನೇ ರ‍್ಯಾಂಕ್ ಪಡೆದು ಮತ್ತೆ ಸುದ್ದಿಯಲ್ಲಿದ್ದಾನೆ.
ಸಾರ್ಥಕ್ ಅಗರವಾಲ್ 2014ರ ಸಿಬಿಎಸ್‌ಸಿ ಪರೀಕ್ಷೆಯಲ್ಲಿ 99.6% ಅಂಕ ಗಳಿಸಿದ್ದ. ಆಗ ಸಾರ್ಥಕ್‌ಗೆ ಸಂಬಂಧಪಟ್ಟ ಮೀಮ್ಸ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. 99.66% ಗಳಿಸಿದ ಸಾರ್ಥಕ್‌ಗೆ ಉಳಿದ 0.4% ಅಂಕಗಳು ಎಲ್ಲಿಗೆ ಹೋದವು ಎಂದು ಹಲವರು ಗೇಲಿ ಮಾಡಿದ್ದರು. ಸಾರ್ಥಕ್‌ನ ಅಂಕಗಳ ವಿಚಾರವಾಗಿ ಹಲವಾರು ಮೀಮ್ಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.
ದೆಹಲಿಯ ನಿವಾಸಿಯಾಗಿರುವ ಸಾರ್ಥಕ್, ದೆಹಲಿಯ ಶ್ರೀರಾಮ್ ಕಾಲೇಜ್ ನಲ್ಲಿ ಬಿ.ಎ (ಆನರ್ಸ್) ಎಕೊನೊಮಿಕ್ಸ (BA(H)Economics) ಪದವಿ ಪಡೆದು ನಂತರ ಪ್ರತಿಷ್ಠಿತ ಆಕ್ಸಫರ್ಢ್ ವಿಶ್ವ ವಿದ್ಯಾಲಯದಲ್ಲಿ(Oxford Uiniversity) ಎಮ್‌ಫಿಲ್(MPhil) ಪದವಿ ಪಡೆಯಲು ತೆರಳಿದ್ದ. ಎಮ್‌ಫಿಲ್ ಪದವಿಯಲ್ಲಿ ಕೂಡ ಇತ ಟಾಪರ್ ಆಗಿ ಹೊರಹೊಮ್ಮಿದ್ದ. ನಂತರ ಲಂಡನ್‌ನ ಇನ್ಸ್ಟಿಟ್ಯೂಟ್ ಫೋರ್ ಫಿಸ್ಕಲ್ ಸ್ಟಡೀಸ್‌ನಲ್ಲಿ ( Institute for Fiscal Studies) ಅರ್ಥಶಾಸ್ತ್ರಜ್ಞನಾಗಿ (Economist) ಕಾರ್ಯ ನಿರ್ವಹಿಸುತ್ತಿದ್ದ. ಸರ್ಕಾರದ ಯೋಜನೆಯೊಂದರ ಸಲುವಾಗಿ ಸಾರ್ಥಕ್ ದೆಹಲಿಗೆ ಮರಳಿದ್ದ. ಇದೇ ಸಂದರ್ಭದಲ್ಲಿ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಸಿವಿಲ್ ಸರ್ವಿಸ್ ಪರಿಕ್ಷೇಯನ್ನು ಕೂಡ ಬರೆದ. ಈಗ ಈ ಪರಿಕ್ಷೇಯಲ್ಲಿ ಸಾರ್ಥಕ್ 17ನೇ ರ‍್ಯಾಂಕ್ ಪಡೆದುಕೊಂಡಿದ್ದು, ಈ ಹಿಂದೆ ಸಾರ್ಥಕ್ ಬಗ್ಗೆ ಹರಿದಾಡಿದ ಮೀಮ್ ಗಳು ಮತ್ತೆ ಜೀವ ಪಡೆದುಕೊಂಡಿವೆ. ಈ ಎಲ್ಲ ಮೀಮ್ಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿವೆ.
ಕ್ಲಾಸ್ 1 ಉದ್ಯೋಗ ತೊರೆದು ಕನಸಿನ ಬೆನ್ನತ್ತಿದ ಜಾಗೃತಿ, UPSCಯಲ್ಲಿ 2ನೇ ರ‍್ಯಾಂಕ್
ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಯಾರು ಬೇಕಾದರೂ ಅಲ್ಪಾವಧಿಯಲ್ಲಿ ಪ್ರಸಿದ್ಧಿಯನ್ನು ಪಡೆಯಬಹುದು. ಸಾಮಾಜಿಕ ಜಾಲತಾಣಗಳು ಯಾವ ಮಟ್ಟಿಗೆ ವ್ಯಾಪಿಸಿವೆ ಎಂದರೆ ಕೆಲವೇ ನಿಮಿಷಗಳಲ್ಲಿ ಗೊತ್ತುಗುರುತು ಇಲ್ಲದ ವ್ಯಕ್ತಿ ವಿಶ್ವವಿಖ್ಯಾತ ವ್ಯಕ್ತಿಯಾಗಬಲ್ಲ. ಇದಕ್ಕೆ ಉತ್ತಮ ಉದಾಹಾರಣೆ ಎಂದರೆ ತನ್ನ ಫನ್ನಿ ಟಿಕಟಾಕ್ ವಿಡಿಯೋಗಳ ಮೂಲಕ ವಿಶ್ವವಿಖ್ಯಾತನಾಗಿರುವ ಇಟಲಿಯ ಖಬಾನೆ ಲಾಮೆ (Khabane Lame). ಕೋರೊನ ಲಾಕ್ಡೌನ್ ಸಮಯದಲ್ಲಿ ತನ್ನ ಕೆಲಸ ಕಳೆದುಕೊಂಡ ಈತ ಟಿಕ್‌ಟಾಕ್ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೀಮ್‌ಗಳು ಎಂಥವರನ್ನು ಬೇಕಾದರೂ ವಿಶ್ವ ವಿಖ್ಯಾತನನ್ನಾಗಿಸಬಲ್ಲವು. ಹೀಗೆಯೆ 2014 ರಲ್ಲಿ ಮೀಮ್ಸ್ ಮೂಲಕ ವೈರಲ್ ಆಗಿದ್ದ ಸಾರ್ಥಕ್ ಅಗರವಾಲ್ ಮತ್ತೆ ಈಗ ಯುಪಿಎಸ್‌ಸಿ ಪರಿಕ್ಷೇಯಲ್ಲಿ 17ನೇ ರ‍್ಯಾಂಕ್ ಪಡೆಯುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾನೆ.
ದೇಶಸೇವೆಗಾಗಿ ಮೂರು ವರ್ಷ ಸೋಶಿಯಲ್ ಮೀಡಿಯಾದಿಂದ ದೂರ ಉಳಿದ ಅಂಜಲಿ!