ಬೆಂಗಳೂರಿನ ಸಪ್ತಗಿರಿ ಎನ್ಪಿಎಸ್ ವಿಶ್ವವಿದ್ಯಾಲಯವು ಅತ್ಯುತ್ತಮ ಗುಣಮಟ್ಟದ ಶಿಕ್ಷಣ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ವಿದ್ಯಾರ್ಥಿಗಳಿಗೆ ಕೈಗಾರಿಕಾ ಬೇಡಿಕೆಗೆ ಅನುಗುಣವಾಗಿ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ವಿವಿಧ ಕಾರ್ಯಕ್ರಮಗಳನ್ನು ಹೊಂದಿದೆ.
ಭಾರತದ ಪ್ರಮುಖ ಶೈಕ್ಷಣಿಕ ಸಂಸ್ಥೆಯಲ್ಲಿ ಒಂದಾಗಿರುವ ಬೆಂಗಳೂರಿನ ಸಪ್ತಗಿರಿ ಎನ್ಪಿಎಸ್ ವಿಶ್ವವಿದ್ಯಾಲಯ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಅತ್ಯಾಧುನಿಕ ಕಲಿಕಾ ವಿಧಾನ ಮೂಲಕ ಹೊಸ ಶೈಕ್ಷಣಿಕ ಪರಂಪರೆಯನ್ನು ಹುಟ್ಟುಹಾಕಿದೆ. ಶ್ರೇಷ್ಠತೆಗೆ, ಶ್ರಮಿಸುತ್ತಿರುವ ಈ ವಿಶ್ವವಿದ್ಯಾಲಯ ಗುಣಮಟ್ಟದ ಶಿಕ್ಷಣದ ಮೂಲಕ ಭವಿಷ್ಯದ ನಾಯಕರನ್ನು ರೂಪಿಸುವ ಸಂಕಲ್ಪ ಹೊಂದಿದೆ.
ಎಸ್ಎನ್ಪಿಎಸ್ ವಿಶ್ವವಿದ್ಯಾಲಯದಲ್ಲಿ ಅತ್ಯಾಧುನಿಕ ಹಾಗೂ ಅತ್ಯುತ್ತಮ ದರ್ಜೆಯ ಮೂಲಸೌಕರ್ಯ ಇದರ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ವಿದ್ಯಾಪೀಠವು ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ವಿನ್ಯಾಸಗೊಳಿಸಲಾದ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಸಂಶೋಧನಾ ಪ್ರಯೋಗಾಲಯಗಳು, ಉಪನ್ಯಾಸ ಹಾಲ್ಗಳು, ಡಿಜಿಟಲ್ ಸಂಪನ್ಮೂಲಗಳು, ಜರ್ನಲ್ಗಳು ಮತ್ತು ಕಂಪ್ಯೂಟರ್ ನೆಟ್ವರ್ಕಿಂಗ್ ಸೌಲಭ್ಯಗಳಿರುವ ಗ್ರಂಥಾಲಯಗಳು ಪ್ರಮುಖವಾಗಿದೆ.
ಎಸ್-ಎನ್‌ಪಿಎಸ್ ವಿಶ್ವವಿದ್ಯಾಲಯ ಪ್ರಯೋಜನ
- ಪ್ರಮುಖ ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಶೈಕ್ಷಣಿಕ ಸಹಕಾರ
- ಉನ್ನತ ಮಟ್ಟದ ಅನುಭವವುಳ್ಳ ಉಪನ್ಯಾಸಕ ತಂಡ
- ಉತ್ತಮ ಭವಿಷ್ಯಕ್ಕಾಗಿ ಐಬಿಎಂ ಸಹಕಾರ
- ಕಲಿಕಾ ಪೂರಕ ಕ್ಯಾಂಪಸ್ ವಾತಾವರಣ
- ಸಂಶೋಧನೆ ಮತ್ತು ಪ್ರಾಜೆಕ್ಟ್ ಅನುಭವಾಧಾರಿತ ಕಲಿಕೆ
ಸಪ್ತಗಿರಿ ಎನ್ಪಿಎಸ್ ವಿಶ್ವವಿದ್ಯಾಲಯವುವಿದ್ಯಾರ್ಥಿಗಳ ಕೈಗಾರಿಕಾ ಬೇಡಿಕೆ, ಉದ್ಯೋಗ ಗಿಟ್ಟಿಸಿಕೊಳ್ಳಬೇಕಾದ ಕೌಶಲ್ಯ ಹಾಗೂ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಹಲವು ಶಾಲೆ ಹಾಗೂ ಕಾರ್ಯಕ್ರಮಗಳನ್ನು ಹೊಂದಿದೆ. ಪ್ಲೇಸ್ಮೆಂಟ್ ತರಬೇತಿ ವ್ಯವಸ್ಥೆಗಳು ಇಲ್ಲಿವೆ.
ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ
- ಬಿ.ಇ. - ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್
- CSE (AI & ML ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮತ್ತು ಮಶಿನ್ ಲರ್ನಿಂಗ್, AI & DS (ಎಐ ಡೇಟಾ ಸೈನ್ಸ್ )
- ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ (ENC)
- ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ (EEE)
ಸ್ಕೂಲ್ ಆಫ್ ಅಪ್ಲೈಡ್ ಸೈನ್ಸ್
- ಬಿ.ಸಿ.ಎ - ಡೇಟಾ ಸೈನ್ಸ್, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಅಧ್ಯಯನ (AI & ML), ಕ್ಲೌಡ್ ಕಂಪ್ಯೂಟಿಂಗ್ ಮತ್ತು ಸೈಬರ್ ಸೆಕ್ಯೂರಿಟಿ
- ಎಂ.ಸಿ.ಎ - AI & ML, AI & DS, ಸೈಬರ್ ಭದ್ರತೆ ಮತ್ತು ಫೊರೆನ್ಸಿಕ್ಸ್
ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್
- ಎಂ.ಬಿ.ಎ - ಹಣಕಾಸು, ಮಾನವ ಸಂಪನ್ಮೂಲ ನಿರ್ವಹಣೆ (HRM), ಮಾರುಕಟ್ಟೆ, ವ್ಯವಹಾರ ವಿಶ್ಲೇಷಣೆ, ಕಾರ್ಯಾಚರಣೆ ಮತ್ತು ಸರಪಳಿ ನಿರ್ವಹಣೆ, ಆರೋಗ್ಯ ಮತ್ತು ಆಸ್ಪತ್ರೆಗೆ ಸಂಬಂಧಿಸಿದ ನಿರ್ವಹಣೆ
ವೈದ್ಯಕೀಯ
- ಪದವಿ ಪೂರ್ವ ಕೋರ್ಸ್ – ಎಂ.ಬಿ.ಬಿ.ಎಸ್
- ಸ್ನಾತಕೋತ್ತರ ಕೋರ್ಸ್ಗಳು – (ಎಂ.ಡಿ ಮತ್ತು ಎಂ.ಎಸ್)
ಡಾ. ಕೆ.ಪಿ. ಗೋಪಾಲಕೃಷ್ಣ, ಸಪ್ತಗಿರಿ ಎನ್ಪಿಎಸ್ ವಿಶ್ವವಿದ್ಯಾಲಯದ ಅಧ್ಯಕ್ಷರಾಗಿದ್ದಾರೆ. ಇವರು ವಿದ್ಯಾರ್ಥಿ ಕೇಂದ್ರಿತ ಕಲಿಕೆಯ ವಾತಾವರಣವನ್ನು ಒದಗಿಸುವ ದೃಷ್ಟಿಕೋನ ಹೊಂದಿದ್ದಾರೆ. ಈ ವಾತಾವರಣವು ಆಳವಾದ ವಿಷಯಾತ್ಮಕ ಜ್ಞಾನ, ಸಮಸ್ಯೆ ಪರಿಹಾರ, ನಾಯಕತ್ವ, ಸಂವಹನ ಹಾಗೂ ಅಂತರವ್ಯಕ್ತಿತ್ವ ಕೌಶಲ್ಯಗಳನ್ನು ಅತ್ಯಾಧುನಿಕ ಪಠ್ಯಮೌಲ್ಯಗಳು ಮತ್ತು ಶೈಕ್ಷಣಿಕ ಸುಧಾರಣೆಗಳ ಮೂಲಕ ರೂಪಿಸಲು ಉದ್ದೇಶಿತವಾಗಿದೆ. ವಿಶ್ವವಿದ್ಯಾಲಯದ ಅಧ್ಯಾಪಕರು ಆರ್ಟಿಫೀಶಿಯಲ್ ಇಂಟಲಿಜೆನ್ಸ್ (AI) ಕ್ಷೇತ್ರದಲ್ಲಿ ಸಕ್ರಿಯ ಸಂಶೋಧಕರಾಗಿದ್ದು, ವಿದ್ಯಾರ್ಥಿಗಳು ತಮ್ಮ ವೃತ್ತಿಪರ ಜೀವನವನ್ನು ಪ್ರಾರಂಭಿಸಲು ಅವಶ್ಯಕವಾದ ಬಲವಾದ ಬೆಂಬಲ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿದ್ಯಾರ್ಥಿವೇತನ
ಸಪ್ತಗಿರಿ ಎನ್ಪಿಎಸ್ ವಿಶ್ವವಿದ್ಯಾಲಯವು ಶೈಕ್ಷಣಿಕ ಮೆಚ್ಚುಗೆಯನ್ನು ಉತ್ತೇಜಿಸಿ, ಅರ್ಹವಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಯೋಜನೆಯ ಮೂಲಕ ಹಣಕಾಸು ಸಹಾಯ ಒದಗಿಸಲು ಬದ್ಧವಾಗಿದೆ.
ಪ್ಲೇಸ್‌ಮೆಂಟ್
ಕೈಗಾರಿಕಾ ಸಂಪರ್ಕಗಳಿಂದ ಬೆಂಬಲಿತವಾದ ಉತ್ತಮ ಪ್ಲೇಸ್ಮೆಂಟ್ ಸೇವೆಗಳು ವಿದ್ಯಾರ್ಥಿಗಳಿಗೆ ಲಾಭದಾಯಕ ಉದ್ಯೋಗ ಅವಕಾಶಗಳನ್ನು ಲಭಿಸುವಂತೆ ಮಾಡುತ್ತದೆ. ವಿಶ್ವವಿದ್ಯಾಲಯವು ವಿವಿಧ ಶಾಖೆಗಳಲ್ಲಿ ನಿರ್ದಿಷ್ಟಗೊಂಡ ಇಂಟರ್ನ್ಶಿಪ್ ಕಾರ್ಯಕ್ರಮಗಳ ಮೂಲಕ ಪ್ರಾಯೋಗಿಕ ಅನುಭವವನ್ನು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ.
ಪ್ರಮುಖ ಕ್ಯಾಂಪಸ್ ನೇಮಕಾತಿ ಸಂಸ್ಥೆ: ವಿಪ್ರೋ, ಇನ್ಫೋಸಿಸ್, ಕಾಗ್ನಿಜಂಟ್, ಬೋಷ್, ಐಬಿಎಂ, ಓಲಾ, ಜಸ್ಪೇ, ಭಾರತೀಯ ನೌಕಾ ಸೇನೆ, JSW, ಟೆಕ್ ಮಹೀಂದ್ರ, ಅಮೆಜಾನ್ ಸೇರಿದಂತೆ ಹಲವು ಕಂಪನಿಗಳು ಕ್ಯಾಂಪಸ್ ನೇಮಮಕಾತಿ ನಡೆಸುತ್ತದೆ.
ಸಪ್ತಗಿರಿ ಎನ್ಪಿಎಸ್ ವಿಶ್ವವಿದ್ಯಾಲಯದ ಕ್ಯಾಂಪಸ್ ಲೈಫ್
ಸಪ್ತಗಿರಿ ಎನ್ಪಿಎಸ್ ವಿಶ್ವವಿದ್ಯಾಲಯದಲ್ಲಿ ಜೀವನವು ಕೇವಲ ಶೈಕ್ಷಣಿಕೆ, ಪಠ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳು, ಕ್ಲಬ್ ಕಾರ್ಯಕ್ರಮ ಮತ್ತು ಸಂಘಟನೆಗಳು ನಡೆಯುತ್ತವೆ. ವಿದ್ಯಾರ್ಥಿಗಳ ಆಸಕ್ತಿಗಳಿಗೆ ಅನುಗುಣವಾಗಿ ಅತ್ಯುತ್ತಮ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತದೆ. ಉದಾಹರಣೆಗೆ, ಕೋಡಿಂಗ್ ಹ್ಯಾಕಾಥಾನ್ಸ್, ಮ್ಯೂಸಿಕ್ ಫೆಸ್ಟಿವಲ್, ನವೋದ್ಯಮ ಸವಾಲುಗಳು ಕುರಿತು ಕಾರ್ಯಕ್ರಮಗಳು ನಡೆಯುತ್ತದೆ.
ಸಪ್ತಗಿರಿ ಎನ್ಪಿಎಸ್ ವಿಶ್ವವಿದ್ಯಾಲಯವು ಸ್ಮಾರ್ಟರ್ ಹಾಗೂ ಹೆಚ್ಚು ಸಂಪರ್ಕಿತ ಭವಿಷ್ಯವನ್ನು ನಿರ್ಮಿಸಲು ಮಾರ್ಗಸೂಚಿ ನೀಡುತ್ತಿದೆ.
ಅಡ್ಮಿಷನ್ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
