CSITSS 2022: ಆರ್‌ವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೂರು ದಿನಗಳ ಕಾಲ 6ನೇ CSITSS ಅಂತರಾಷ್ಟ್ರೀಯ ಸಮ್ಮೇಳನ

ಇಂದು ರಾ.ವಿ.ತಾಂತ್ರಿಕ ಮಹಾವಿದ್ಯಾಲಯದಲ್ಲಿ 6ನೇ CSITSS ಅಂತರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭ ನೆರವೇರಿತು. ಫ್ಲೋರಿಡಾ ಅಂತರಾಷ್ಟ್ರೀಯ ವಿದ್ಯಾಲಯ ಹಾಗೂ IEEE ಬೆಂಗಳೂರು ವಿಭಾಗದ ಸಹಯೋಗದಲ್ಲಿ ಮೂರು ದಿನಗಳ ಕಾಲ ಸಮ್ಮೇಳನ ರಾ.ವಿ.ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿದೆ. 

RV College Of Engineering Organized 6th International Conference gow

ಬೆಂಗಳೂರು (ಡಿ.22): ಇಂದು ರಾ.ವಿ.ತಾಂತ್ರಿಕ ಮಹಾವಿದ್ಯಾಲಯದಲ್ಲಿ 6ನೇ CSITSS ಅಂತರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭ ನೆರವೇರಿತು. ಫ್ಲೋರಿಡಾ ಅಂತರಾಷ್ಟ್ರೀಯ ವಿದ್ಯಾಲಯ ಹಾಗೂ IEEE ಬೆಂಗಳೂರು ವಿಭಾಗದ ಸಹಯೋಗದಲ್ಲಿ ಮೂರು ದಿನಗಳ ಕಾಲ ಸಮ್ಮೇಳನ ರಾ.ವಿ.ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಪ್ರಾಂಶುಪಾಲರಾದ ಡಾ.ಕೆ.ಎನ್. ಸುಬ್ರಮಣ್ಯರವರು ಎಲ್ಲರನ್ನೂ ಸ್ವಾಗತಿಸಿ, ಮುಖ್ಯ ಅತಿಥಿಗಳ ಸ್ಥೂಲ ಪರಿಚಯ ನೀಡಿ, ಇಂದಿನ ಜಗತ್ತಿನಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಗಣಕೀಕೃತ ವ್ಯವಸ್ಥೆಯ ಮೂಲಕ ಸುಸ್ಥಿರ ಪರಿಹಾರಗಳನ್ನು ಪಡೆಯುವುದರ ಪ್ರಾಮುಖ್ಯತೆಯನ್ನು ತಿಳಿಸಿದರು. ನಂತರ ಮಾತನಾಡಿದ ಮುಖ್ಯ ಅತಿಥಿಗಳಾದ, ಗ್ಲೋಬಲ್ ಫೌಂಡ್ರೀಸ್ ಸಂಸ್ಥೆಯ ಭಾರತ ವಿಭಾಗ ಮುಖ್ಯಸ್ಥರಾದ ಡಾ.ದೇವೇಶ್ ದ್ವಿವೇದಿ ಅವರು 'ಈಗಿನ ಪರಿಸ್ಥಿತಿಯಲ್ಲಿ ಕೇವಲ ಸ್ನಾತಕೋತ್ತರ ವಿದ್ಯಾರ್ಥಿಗಳಷ್ಟೇ ಅಲ್ಲ, ಪದವಿ ವಿದ್ಯಾರ್ಥಿಗಳೂ ಸಂಶೋಧನಾ ಲೇಖನಗಳನ್ನು ಹೆಚ್ಚು ಹೆಚ್ಚು ಪ್ರಕಟಿಸಬೇಕು' ಎಂದು ತಮ್ಮ ಅನಿಸಿಕೆ ತಿಳಿಸಿದರು.

ಸಮ್ಮೇಳನದ ಆಯೋಜಕ ಮುಖ್ಯಸ್ಥರು ಹಾಗೂ ಉಪಪ್ರಾಂಶುಪಾಲರಾದ ಡಾ. ಗೀತಾ ಕೆ ಎಸ್ ಅವರು ಸಮ್ಮೇಳನದ ರೂಪುರೇಶೆಯನ್ನು ಪ್ರಸ್ತುತಪಡಿಸಿದರು. ಫ್ಲೋರಿಡಾ ಅಂತರಾಷ್ಟ್ರೀಯ ವಿದ್ಯಾಲಯದ ಉನ್ನತ ಅಧ್ಯಾಪಕರಾದ ಪ್ರೊ. ಎಸ್.ಎಸ್ ಐಯ್ಯಂಗಾರ್ ಅವರು 'ಒಂದು ವಿಶ್ವವಿದ್ಯಾಲಯವು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕಾದರೆ ಅದರ ವಿದ್ಯಾರ್ಥಿ ವರ್ಗ ಹಾಗೂ ಅಧ್ಯಾಪಕ ವರ್ಗ ಮುಖ್ಯಪಾತ್ರ ವಹಿಸುತ್ತದೆ. ರಾ.ವಿ. ಮಹಾವಿದ್ಯಾಲಯವು ಇವೆರಡರಲ್ಲೂ ಉತ್ಕೃಷ್ಟ ಗುಣಮಟ್ಟ ಹೊಂದಿದ್ದು, ವಿಶ್ವಮಟ್ಟದಲ್ಲಿ ಗುರುತಿಸಲ್ಪಟ್ಟಿದೆ' ಎಂದು ಹೇಳಿದರು.

ನಂತರ ಮಾತನಾಡಿದ IBM ಭಾರತ ವಿಭಾಗದ ಸಂಶೋಧನಾ ಮುಖ್ಯಸ್ಥರಾದ ಡಾ.ವೆಂಕಟ ಸುಬ್ರಮಣಿಯನ್ ಅವರು ಸಮ್ಮೇಳನವನ್ನು ಶ್ಲಾಘಿಸಿ, ಶುಭಹಾರೈಸಿದರು. IEEE ಬೆಂಗಳೂರು ವಿಭಾಗದ ಅಧ್ಯಕ್ಷರಾದ ಡಾ. ದೀಪಾ ಶೆಣೈರವರು ಈ ರೀತಿಯ ಸಮ್ಮೇಳನವು ಜರುಗಲು ಇರುವ ನಿಯಮಾವಳಿಗಳು ಹಾಗೂ ಕ್ಲಿಷ್ಟತೆಗಳ ಬಗ್ಗೆ ಪ್ರಚುರಪಡಿಸಿದರು. ಸಭಾಧ್ಯಕ್ಷರಾದ ಡಾ.ಎಮ್.ಪಿ. ಶ್ಯಾಮ್, ಅಧ್ಯಕ್ಷರು, ಆರ್.ಎಸ್.ಎಸ್.ಟಿ , ಮಾತನಾಡಿ ಮಹಾವಿದ್ಯಾಲಯದ ಪ್ರಚಲಿತ ಸಾಧನೆಗಳ ಬಗ್ಗೆ ತಿಳಿಸಿಕೊಟ್ಟು, ಶುಭಹಾರೈಸಿದರು.

ಗೂಗಲ್‌ನಿಂದ ಐಐಟಿ ಮದ್ರಾಸ್ ಎಐ ಕೇಂದ್ರಕ್ಕೆ 10 ಲಕ್ಷ ಡಾಲರ್ ನೆರವು!

ಸಮ್ಮೇಳನದ ಕಾರ್ಯದರ್ಶಿಗಳಾದ ಡಾ.ಶುಶ್ರುಥಾ ಕೆ ಎಸ್ ಅವರು ಹಿಂದಿನ ದಿನ ನಡೆದ ಸಮ್ಮೇಳನಾಪೂರ್ವ ಕಾರ್ಯಾಗಾರದಲ್ಲಿ ವಿವಿಧ ಉದ್ಯಮ ಪರಿಣಿತರು, IISc ಹಾಗೂ ಇತರ ಪ್ರತಿಷ್ಠಿತ ವಿದ್ಯಾಲಯಗಳ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಪ್ರಚಲಿತ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡಿ, ಉತ್ತಮ ಸಂಭಾಷಣೆ ಮಾಡಿದರು ಎಂದು ನಮ್ಮೊಡನೆ ಮಾಹಿತಿ ಹಂಚಿಕೊಂಡರು. ಇನ್ನೊಬ್ಬ ಕಾರ್ಯದರ್ಶಿಗಳಾದ ಡಾ.ಶೈಲಶ್ರೀ ಎನ್ ಅವರು, ಈ ಸಮ್ಮೇಳನವು ಹೇಗೆ ಉದ್ದಿಮೆದಾರರು, ಸಂಶೋಧನಾ ಪರಿಣಿತರು ಹಾಗೂ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ, ಜ್ಞಾನಾರ್ಜನೆಗೆ ಪೂರಕವಾಗಿದೆ ಹಾಗೂ ಹೆಚ್ಚಿನವರನ್ನು ಸಂಶೋಧನಾ ವಲಯದತ್ತ ಆಕರ್ಷಿಸುತ್ತಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

IIM CAT RESULT 2022: ಕ್ಯಾಟ್ 2022 ಫಲಿತಾಂಶ ಬಿಡುಗಡೆ, 11 ಮಂದಿಗೆ ಶೇ.100 ಅಂಕ

ಕೊನೆಯಲ್ಲಿ ಸಮ್ಮೇಳನ ಆಯೋಜಿಸಿದ ವಿದ್ಯುನ್ಮಾನ ಹಾಗೂ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ರವೀಶ್ ಆರಾಧ್ಯರವರು ವಂದನಾರ್ಪಣೆ ನೆರವೇರಿಸಿದರು. ಡಾ. ಶ್ವೇತಾ ಬಾಳಿಗಾ ಅವರು ನಿರ್ವಹಿಸಿದರು.

Latest Videos
Follow Us:
Download App:
  • android
  • ios