Asianet Suvarna News Asianet Suvarna News

ಗೂಗಲ್‌ನಿಂದ ಐಐಟಿ ಮದ್ರಾಸ್ ಎಐ ಕೇಂದ್ರಕ್ಕೆ 10 ಲಕ್ಷ ಡಾಲರ್ ನೆರವು!

*ಭಾರತೀಯ ನೆಲೆಯ ಕೃತಕ ಬುದ್ಧಿಮತ್ತೆ ಬಳಸಿಕೊಳ್ಳುವ ಬಗ್ಗೆ ಗೂಗಲ್ ನೆರವು ಉಪಯೋಗಿಸಲಾಗುತ್ತಿದೆ
*ಐಐಟಿ ಮದ್ರಾಸ್‌ನಲ್ಲಿರುವ ಕೃತಕ ಬುದ್ಧಿಮತ್ತೆ ಕೇಂದ್ರ ಈ ನೆರವಿನಿಂದ ಸಾಕಷ್ಟು ಅಧ್ಯಯನ ಕೈಗೊಳ್ಳಲಿದೆ
*ಐಐಟಿ ಮದ್ರಾಸ್ ಮಾತ್ರವಲ್ಲದೇ ವಾಧ್ವಾನಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ಗೂ ನೆರವು ನೀಡಿದ ಗೂಗಲ್

Google is providing 1 million dollar to AI Center of IIT Madras
Author
First Published Dec 22, 2022, 12:47 PM IST

ಟೆಕ್ ದೈತ್ಯ ದಿಗ್ಗಜ ಗೂಗಲ್ (Google) ಸಂಸ್ಥೆ, ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(IIT Madras)ಗೆ ಬರೋಬ್ಬರಿ 1 ಮಿಲಿಯನ್ ಡಾಲರ್‌, ಅಂದರೆ 10 ಲಕ್ಷ ಡಾಲರ್ ಅನುದಾನ ನೀಡುವುದಾಗಿ ಘೋಷಿಸಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವುದಕ್ಕಾಗಿ ಈ ದೊಡ್ಡ ಮೊತ್ತದ ಅನುದಾನ ನೀಡಲು ನಿರ್ಧರಿಸಿದೆ. ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಸ್ವತಂತ್ರ ಲಾಭರಹಿತ ವಾಧ್ವಾನಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ಗೂ ಕೂಡ ಗೂಗಲ್‌ ಕಂಪನಿ, ಇದೇ ಮೊತ್ತವನ್ನು ನೀಡಲಿದೆ. ಬೆಳೆ ರೋಗ ಮೇಲ್ವಿಚಾರಣೆ, ಇಳುವರಿ ಫಲಿತಾಂಶಗಳನ್ನು ಊಹಿಸಲು ಮತ್ತು ಕಿಸಾನ್ ಕಾಲ್ ಸೆಂಟರ್‌ಗಳಿಗೆ ದಕ್ಷತೆಯನ್ನು ತರಲು ಸಹಾಯ ಮಾಡುವ ಎಐ (AI) ಮಾದರಿಗಳನ್ನು ನಿಯೋಜಿಸುವ ಪ್ರಯತ್ನಗಳನ್ನು ಅಭಿವೃದ್ಧಿಪಡಿಸಲು ಅನುದಾನ ಬಳಕೆಯಾಗಲಿದೆ. ಗಡಿಗಳು, ಜಮೀನುಗಳ ಸ್ಥಳಗಳು ಮತ್ತು ಇತರರನ್ನು ಗುರುತಿಸಲು ಗೂಗಲ್‌ ಉಪಗ್ರಹ ಚಿತ್ರಗಳ ಮೇಲೆ ಆರ್ಟಿಫಿಶಿಯಲ್‌ ಮಾದರಿಗಳನ್ನು ಅನ್ವಯಿಸುತ್ತದೆ  ಎಂದು ಗೂಗಲ್ ರಿಸರ್ಚ್ ಇಂಡಿಯಾದ ನಿರ್ದೇಶಕ ಮನೀಶ್ ಗುಪ್ತಾ ತಿಳಿಸಿದ್ದಾರೆ.

ಭಾರತದಲ್ಲಿನ ವಿವಿಧ ಭಾಷೆಗಳು, ಉಪಭಾಷೆಗಳು ಮತ್ತು ಉಚ್ಚಾರಣೆಗಳನ್ನು ಅರ್ಥಮಾಡಿಕೊಳ್ಳಲು ಗೂಗಲ್ ಈಗಾಗಲೇ ವಾಣಿ ಎಂಬ ಯೋಜನೆಯನ್ನು ಪ್ರಾರಂಭಿಸಿದೆ. ನಮ್ಮ ಪಾಲುದಾರರಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನೊಂದಿಗೆ, ನಾವು ಭಾರತದ ಪ್ರತಿಯೊಂದು ಜಿಲ್ಲೆಯಿಂದ ಭಾಷಣ ಡೇಟಾವನ್ನು ಸಂಗ್ರಹಿಸುತ್ತಿದ್ದೇವೆ. ಭಾಷೆಯನ್ನು ಆಧರಿಸಿದ ಬದಲಿಗೆ ಪ್ರದೇಶವಾರು ರೀತಿಯಲ್ಲಿ ಡೇಟಾವನ್ನು ಸಂಗ್ರಹಿಸುವ ಮೂಲಕ, ನಾವು ಮೂಲತಃ ಭಾರತದ ಸಂಪೂರ್ಣ ಭಾಷಾ ವೈವಿಧ್ಯತೆಯನ್ನು ಒಳಗೊಳ್ಳಲು ಆಶಿಸುತ್ತೇವೆ ಎಂದು ಮನೀಶ್ ಗುಪ್ತಾ ತಿಳಿಸಿದರು. 

YouTube Courses ಇದು ಯುಟ್ಯೂಬ್‌ನ ಹೊಸ ಹಣ ಗಳಿಕೆಯ ದಾರಿ, ಏನು ಲಾಭ?
 
ಇದಲ್ಲದೆ, ಗೂಗಲ್ ರಿಸರ್ಚ್ ಕೈಬರಹದ ವೈದ್ಯಕೀಯ ಪ್ರಿಸ್ಕ್ರಿಪ್ಷನ್‌ಗಳನ್ನು ಡಿಜಿಟೈಜ್ ಮಾಡಲು ಸಹ ಕೆಲಸ ಮಾಡುತ್ತಿದೆ. ಈ ಕುರಿತು ಮಾತನಾಡಿದ ಗುಪ್ತಾ, ಔಷಧಿಕಾರರು ಪ್ರಿಸ್ಕ್ರಿಪ್ಷನ್ ಅನ್ನು ಅರ್ಥೈಸಿಕೊಳ್ಳುವಾಗ ಹಲವು ಅಂಶಗಳಿವೆ. ನಿಮ್ಮ ಕೈಬರಹ ಗುರುತಿಸುವುದು ಅಥವಾ ಒಸಿಆರ್‌ ಮಾದರಿಗಳ ನಿಖರತೆಯನ್ನು ಸುಧಾರಿಸಲು ಎಐ ಆ ರೀತಿಯ ಮಾಹಿತಿಯನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಪತ್ತೆ ಮಾಡುತ್ತೇವೆ ಎಂದು ಮನೀಶ್ ಗುಪ್ತಾ ಹೇಳಿದ್ದಾರೆ. 

ಇನ್ನು ಗೂಗಲ್‌ನಿಂದ ಬರುವ ಒಂದು ಮಿಲಿಯನ್ ಡಾಲರ್‌ನ ಹೊಸ ಅನುದಾನವನ್ನ ಸದ್ಬಳಕೆ ಮಾಡಿಕೊಳ್ಳಲು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT Madras) ಮದ್ರಾಸ್ ಮುಂದಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತು ಹಲವಾರು ಯೋಜನೆಗಳನ್ನು ಪ್ರಾರಂಭಿಸಲು ಯೋಜಿಸಿರುವುದಾಗಿ AI ಸೆಂಟರ್, ರಾಬರ್ಟ್ ಬಾಷ್ ಸೆಂಟರ್ ಫಾರ್ ಡಾಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (RBCDSAI) ಮುಖ್ಯಸ್ಥ ಬಿ ರವೀಂದ್ರನ್‌ ತಿಳಿಸಿದ್ದಾರೆ. ನಾವು ಯಾವುದೇ ಎಐ ಆಧಾರಿತ ವ್ಯವಸ್ಥೆಯ ನಿಖರತೆಯ ದರವನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದೇವೆ  ಎಂದು ರವೀಂದ್ರನ್ ವಿವರಿಸಿದ್ದಾರೆ.
 
ಐಐಟಿ ಮದ್ರಾಸ್‌ನಲ್ಲಿರುವ ಎಐ ಕೇಂದ್ರವು ಬಹು ಪಾಲುದಾರರೊಂದಿಗೆ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತದೆ. ಗೂಗಲ್ ನಮ್ಮ ಮಧ್ಯಸ್ಥಗಾರರಲ್ಲಿ ಒಬ್ಬರು. ಮುಂದಿನ ಆರ್ಥಿಕ ವರ್ಷದಲ್ಲಿ, ಕಾನೂನು, ಹಣಕಾಸು ಮತ್ತು ಶಿಕ್ಷಣ ಸೇರಿದಂತೆ ವಿವಿಧ ವಿಭಾಗಗಳ ಇತರ ಉದ್ಯಮದ ವ್ಯಕ್ತಿಗಳೊಂದಿಗೆ ಪಾಲುದಾರರಾಗಲು ನಾವು ಯೋಜಿಸಿದ್ದೇವೆ ಎಂದು ರವೀಂದ್ರನ್ ತಿಳಿಸಿದ್ದಾರೆ. ಎಐ ಕೇಂದ್ರವು ಬ್ಯಾಂಕಿಂಗ್ ಮತ್ತು ಹಣಕಾಸು, ರಾಷ್ಟ್ರೀಯ ನೀತಿ ರಚನೆ, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಸೇರಿಸುವ ಗುರಿಯನ್ನು ಹೊಂದಿದೆ. ಭಾರತದಾದ್ಯಂತ ಎಲ್ಲಾ ಕ್ಷೇತ್ರಗಳಲ್ಲಿ ಎಐ ಒಳಗೊಳ್ಳಲು ನಾವು ಕಾರ್ಯಾಗಾರಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಸಹ ನಡೆಸುತ್ತೇವೆ ಎಂದು ರವೀಂದ್ರನ್ ಹೇಳಿದರು.

ಭಾರತದಲ್ಲಿ ಇನ್ಫಿನಿಕ್ಸ್ ಜೀರೋ ಅಲ್ಟ್ರಾ, ಇನ್ಫಿನಿಕ್ಸ್ ಜೀರೋ 20 ಫೋನ್ ಲಾಂಚ್, ಬೆಲೆ ಎಷ್ಟು?

ಸಂಬಂಧಿತ ಕ್ಷೇತ್ರಗಳ ತಜ್ಞರ ಪಾಲ್ಗೊಳ್ಳುವಿಕೆಯೊಂದಿಗೆ ಬಹು ಸಂಶೋಧನಾ ಯೋಜನೆಗಳ ಮೂಲಕ ಉದ್ದೇಶಗಳನ್ನು ರೂಪಿಸಲಾಗುವುದು. ಸಂಶೋಧನಾ ಪಠ್ಯಕ್ರಮದ ಅಡಿಯಲ್ಲಿ ಕೋರ್ಸ್‌ವರ್ಕ್ ವಸ್ತುಗಳನ್ನು ಸಹ ಸಂಗ್ರಹಿಸಲಾಗುತ್ತದೆ. ಐಐಟಿ ಮದ್ರಾಸ್‌ನಲ್ಲಿರುವ ಜವಾಬ್ದಾರಿಯುತ ಎಐ ಕೇಂದ್ರವು ಫೆಬ್ರವರಿ, 2023ರಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.

Follow Us:
Download App:
  • android
  • ios