ಕನ್ನಡದಲ್ಲಿ ಎಂಜಿನಿಯರಿಂಗ್‌ ಪಠ್ಯಕ್ರಮ ಬಿಡುಗಡೆ

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು (ಎಐಸಿಟಿಇ) ಕನ್ನಡ ಸೇರಿದಂತೆ ಒಂಬತ್ತು ಭಾರತೀಯ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣದ ಪಠ್ಯಕ್ರಮ ಬಿಡುಗಡೆ ಮಾಡಿದ್ದು, ಪ್ರಾದೇಶಿಕ ಭಾಷೆಗಳಲ್ಲಿ ಮಾತನಾಡುವವರಿಗೂ ಎಂಜಿನಿಯರಿಂಗ್‌ ಪ್ರವೇಶ ಸುಲಭವಾಗಿಸುವುದು ನಮ್ಮ ಗುರಿ ಎಂದು ಎಐಸಿಟಿಇ ಅಧ್ಯಕ್ಷ ಪ್ರೊ.ಅನಿಲ್‌ ಡಿ.ಸಹಸ್ರಬುದ್ಧೆ ಹೇಳಿದ್ದಾರೆ.

Released of Engineering Syllabus in Kannada gvd

ಬೆಂಗಳೂರು (ಜು.18): ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು (ಎಐಸಿಟಿಇ) ಕನ್ನಡ ಸೇರಿದಂತೆ ಒಂಬತ್ತು ಭಾರತೀಯ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣದ ಪಠ್ಯಕ್ರಮ ಬಿಡುಗಡೆ ಮಾಡಿದ್ದು, ಪ್ರಾದೇಶಿಕ ಭಾಷೆಗಳಲ್ಲಿ ಮಾತನಾಡುವವರಿಗೂ ಎಂಜಿನಿಯರಿಂಗ್‌ ಪ್ರವೇಶ ಸುಲಭವಾಗಿಸುವುದು ನಮ್ಮ ಗುರಿ ಎಂದು ಎಐಸಿಟಿಇ ಅಧ್ಯಕ್ಷ ಪ್ರೊ.ಅನಿಲ್‌ ಡಿ.ಸಹಸ್ರಬುದ್ಧೆ ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಅನುಷ್ಠಾನ ಹಾಗೂ ಭಾರತೀಯ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣದ ಬಗ್ಗೆ ಅರಿವು ಮೂಡಿಸಲು ದೇಶದ ಎಲ್ಲ ತಾಂತ್ರಿಕ ವಿಶ್ವವಿದ್ಯಾಲಯಗಳ ಕುಲಪತಿಗಳು, ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಂಸ್ಥೆಗಳ (ಎನ್‌ಐಟಿ) ನಿರ್ದೇಶಕರು ಮತ್ತು ಇಂಡಿಯನ್‌ ನ್ಯಾಷನಲ್‌ ಅಕಾಡೆಮಿ ಆಫ್‌ ಇಂಜಿನಿಯರಿಂಗ್‌ನ ಶಿಕ್ಷಣ ತಜ್ಞರು ಸಹಯೋಗದಲ್ಲಿ ಎಐಸಿಟಿಇಯು ದೆಹಲಿಯಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಒಂಬತ್ತು ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣದ ಪಠ್ಯಗಳನ್ನು ಬಿಡುಗಡೆಯಾಯಿತು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಹಸ್ರಬುದ್ಧೆ ಅವರು, ಇಂಗ್ಲೀಷ್‌ ಮಾಧ್ಯಮದಲ್ಲಿ ಓದಿಕೊಂಡು ಬಂದವರು ಅಥವಾ ಆಂಗ್ಲ ಭಾಷೆ ಬಲ್ಲವರು ಮಾತ್ರ ಎಂಜಿನಿಯರಿಂಗ್‌ನಂತಹ ತಾಂತ್ರಿಕ ಶಿಕ್ಷಣ ಪಡೆಯಬಹುದು ಎಂಬ ಮನೋಭಾವ ಹೋಗಬೇಕು. ದೇಶದ ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ತಾಂತ್ರಿಕ ಶಿಕ್ಷಣದ ಪಠ್ಯ ಲಭ್ಯವಾಗುವ ಮೂಲಕ ಎಲ್ಲರಿಗೂ ಎಂಜಿನಿಯರಿಂಗ್‌ ಪ್ರವೇಶ ದೊರೆಯವಂತಾಗಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದರು.

Bengaluru: ಬಿಬಿಎಂಪಿ ಕಾಲೇಜು ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ತರಬೇತಿ

ಎಐಸಿಟಿಯ ಉಪಾಧ್ಯಕ್ಷ ಪ್ರೊ. ಎಂ.ಪಿ.ಪೂನಿಯಾ ಮಾತನಾಡಿ, ಎನ್‌ಇಪಿ ಅಡಿ ಮಾತೃಭಾಷಾ ಕಲಿಕೆಗೆ ಒತ್ತು ನೀಡಲಾಗಿದೆ. ಮಾತೃಭಾಷೆಯಲ್ಲಿ ಕಲಿಕೆಯನ್ನು ಸಕ್ರಿಯಗೊಳಿಸುವುದರಿಂದ ಮಗುವಿಗೆ ಕಲಿಕೆ ಸುಲಭವಾಗುತ್ತದೆ. ಭಾಷೆ ಮತ್ತು ಶಿಕ್ಷಣವು ನಿಕಟವಾದ ಸಂಬಂಧ ಹೊಂದಿದೆ. ಎನ್‌ಇಪಿ 2020 ಭಾರತೀಯ ಭಾಷೆಗಳಲ್ಲಿ ಶಿಕ್ಷಣದ ಬಗ್ಗೆ ಅರಿವು ಮೂಡಿಸುತ್ತದೆ ಎಂದರು.

ಎಐಸಿಟಿಇ 2021-22 ರಲ್ಲಿಯೇ ಭಾರತೀಯ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಅನುಮತಿ ನೀಡಿದ್ದರೂ ಅಧ್ಯಯನ ಸಾಮಗ್ರಿ ಇಂಗ್ಲಿಷ್‌ನಲ್ಲಿ ಲಭ್ಯವಿತ್ತು. ಪ್ರಸ್ತುತ ಸುಮಾರು 20 ಸಂಸ್ಥೆಗಳು ಪದವಿಪೂರ್ವ ಮತ್ತು ಡಿಪ್ಲೊಮಾ ಹಂತಗಳಲ್ಲಿ ಕನ್ನಡ ಸೇರಿ ಆರು ಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿವೆ. ಹತ್ತು ರಾಜ್ಯಗಳಲ್ಲಿ 255 ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದು ಅವರು ವಿವರಿಸಿದರು.

ಈ ವೇಳೆ ಭಾರತೀಯ ಭಾಷೆಗಳಲ್ಲಿ ಎಂಜಿನಿಯರಿಂಗ್‌ ಪುಸ್ತಕಗಳನ್ನು ಭಾಷಾಂತರಿಸಲು ಎಐಸಿಟಿಇಗೆ ನೆರವಾಗುತ್ತಿರುವ ವಿವಿಧ ರಾಜ್ಯಗಳ ಪ್ರಮುಖ ವ್ಯಕ್ತಿಗಳನ್ನು ಸಹ ಸಮಾವೇಶದಲ್ಲಿ ಗೌರವಿಸಲಾಯಿತು. ಕಾರ್ಯಕ್ರಮದ ಸಮಯದಲ್ಲಿ, ಮರಾಠಿ, ಕನ್ನಡ, ತೆಲುಗು ಮತ್ತು ಹಿಂದಿ ಮುಂತಾದ ಭಾರತೀಯ ಭಾಷೆಗಳಲ್ಲಿ ಎಂಜಿನಿಯರಿಂಗ್‌ ಕೋರ್ಸ್‌ಗಳನ್ನು (ಕಂಪ್ಯೂಟರ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌) ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು.

ಕನ್ನಡದಲ್ಲಿ ಪಿಯು ವಿಜ್ಞಾನಕ್ಕೆ ಅವಕಾಶ: ದ್ವಿತೀಯ ಪಿಯುಸಿಯಲ್ಲಿ ಕನ್ನಡ ಮಾಧ್ಯಮದಲ್ಲೇ ವಿಜ್ಞಾನ ವಿಭಾಗದ ಕೋರ್ಸುಗಳನ್ನು ವ್ಯಾಸಂಗ ಮಾಡಿ ಕನ್ನಡದಲ್ಲೇ ಪರೀಕ್ಷೆ ಬರೆಯಲು ಕಳೆದ ವರ್ಷದಿಂದ ಸರ್ಕಾರ ಅವಕಾಶ ನೀಡಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯು ವಿಜ್ಞಾನ ವಿಷಯದ ಪಠ್ಯಪುಸ್ತಕಗಳನ್ನು ಕನ್ನಡಕ್ಕೆ ಅನುವಾದವನ್ನೂ ಮಾಡಿಸಿದೆ. ಆದರೆ, ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆದವರು ಕನ್ನಡ ಮಾಧ್ಯಮ ಆಯ್ಕೆ ಮಾಡಿಕೊಳ್ಳುವುದು ಬಹಳ ಅಪರೂಪ. ಸದ್ಯಕ್ಕೆ ಅಂತಹ ವಿದ್ಯಾರ್ಥಿಗಳ ಯಾವುದೇ ಮಾಹಿತಿ ಇಲ್ಲ ಎನ್ನುತ್ತಾರೆ ಅಧಿಕಾರಿಗಳು.

1500 ಮಾದರಿ ಸರ್ಕಾರಿ ಶಾಲೆಗಳ ಅಭಿವೃದ್ಧಿ: ಸಚಿವ ನಾಗೇಶ್‌

ಅದೇ ರೀತಿ ಕಳೆದ ವರ್ಷದಿಂದ ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲೇ ಎಂಜಿನಿಯರಿಂಗ್‌ ವ್ಯಾಸಂಗಕ್ಕೆ ಎಐಸಿಟಿಇ ಅವಕಾಶ ನೀಡಿದೆ. ಆದರೆ, ಪಠ್ಯಪುಸ್ತಕಗಳು ಕನ್ನಡದಲ್ಲಿ ಇರಲಿಲ್ಲ. ಅಲ್ಲದೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಮೂಲಗಳ ಪ್ರಕಾರ ಯಾವುದೇ ವಿದ್ಯಾರ್ಥಿ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್‌ಗೆ ಪ್ರವೇಶ ಪಡೆದಿರಲಿಲ್ಲ ಎನ್ನಲಾಗಿದೆ.

Latest Videos
Follow Us:
Download App:
  • android
  • ios