Asianet Suvarna News Asianet Suvarna News

ಜಸ್ಟ್‌ ಬುಕ್- ಇಲ್ಲಿ ಪುಸ್ತಕ ಬಾಡಿಗೆಗೆ ದೊರೆಯುತ್ತದೆ!

ಇಷ್ಟದ ಪುಸ್ತಕ ಓದಲು ಒಂದೊಳ್ಳೆ ಪ್ಲಾಟ್‌ಫಾರ್ಮ್ ಜಸ್‌ಟ್ ಬುಕ್. ಇಲ್ಲಿ 15 ಲಕ್ಷಕ್ಕೂ ಅಧಿಕ ಪುಸ್ತಕಗಳು ಬಾಡಿಗೆಗೆ ದೊರಕುತ್ತವೆ. ಕೊರೋನಾ ಕಾಲದಲ್ಲಿ ಓದುವ ಪ್ರೀತಿ ಹೆಚ್ಚಿಸುವ ಇಂಥದ್ದೊಂದು ಪ್ರಯತ್ನದ ಹಿಂದಿರುವುದು ಸುರೇಶ್ ನರಸಿಂಹ ಹಾಗೂ ಅವರ ಪುಸ್ತಕ ಪ್ರೀತಿ.

Read 60 books in 30 days Just book Suresh Narasimha journey vcs
Author
Bangalore, First Published Jul 5, 2021, 10:55 AM IST
  • Facebook
  • Twitter
  • Whatsapp

ಸುರೇಶ್ ನರಸಿಂಹ ಅವರ ಪುಸ್ತಕ ಜರ್ನಿ

ಬೆಂಗಳೂರಿನ ಬಸವನಗುಡಿಯಲ್ಲಿ ಗೋಖಲೆ ಇನ್‌ಸ್ಟಿಟ್ಯೂಟ್ ಪಕ್ಕ ಹಾಯುವಾಗ ‘ಜಸ್‌ಟ್ ಬುಕ್’ ಅನ್ನೋ ಬೋರ್ಡ್ ಕಂಡರೆ ಪುಸ್ತಕಪ್ರಿಯರ ವಾಹನಕ್ಕೆ ಬ್ರೇಕ್ ಬೀಳುತ್ತದೆ. ಒಂದೆರಡು ಪುಸ್ತಕದೊಂದಿಗೆ ವಾಪಾಸ್ ಗಾಡಿ ಏರುತ್ತಾರೆ. ಈಗ ಇಂಥಾ ಕಷ್ಟವೂ ಇಲ್ಲ. ಪ್ಲೇ ಸ್ಟೋರ್‌ನಲ್ಲಿ ಜಸ್‌ಟ್ ಬುಕ್ ಆ್ಯಪ್ ಡೌನ್ ಲೋಡ್ ಮಾಡಬಹುದು ಅಥವಾ ಅವರ ವೆಬ್‌ಸೈಟ್‌ಗೆ ಹೋಗಿ ಸಬ್‌ಸ್ಕ್ರೈಬ್ ಮಾಡಿ ಇಷ್ಟದ ಪುಸ್ತಕದ ಹೆಸರು ಸೂಚಿಸಿದರೆ ಅವರೇ ಮನೆಬಾಗಿಲಿಗೆ ಪುಸ್ತಕ ತಂದುಕೊಡುತ್ತಾರೆ. ಎಷ್ಟು ದಿನವಾದರೂ ಇಟ್ಟು ಓದಬಹುದು, ಆಮೇಲೆ ಮರಳಿಸಿದರಾಯ್ತು. ಒಂದು ಸಲಕ್ಕೆ ಎರಡು ಪುಸ್ತಕ ಪಡೆಯಲು ಅವಕಾಶ. ನೀವು ದಿನದಲ್ಲಿ ಅಥವಾ ಅರ್ಧ ದಿನದಲ್ಲಿ ಆ ಪುಸ್ತಕ ಓದಿ ಮುಗಿಸಿ ಮತ್ತೆ ಎರಡು ಪುಸ್ತಕ ಪಡೆಯಬಹುದು. ತಿಂಗಳ ಮೂವತ್ತು ದಿನದಲ್ಲಿ ಅರವತ್ತು ಪುಸ್ತಕ ಓದಿ ಮುಗಿಸಿದರೂ ಅವರಿಗೆ ಸಂತೋಷವೇ. ಇದಕ್ಕೆ ತೆರಬೇಕಾದ ಹಣ ತಿಂಗಳಿಗೆ ಮುನ್ನೂರು ಚಿಲ್ಲರೆ ರುಪಾಯಿ ಅಷ್ಟೇ.

2020ರಲ್ಲಿ ಓದುಗರು ಮೆಚ್ಚಿದ 30 ಪುಸ್ತಕಗಳು 

ಕಳೆದ ನಾಲ್ಕು ವರ್ಷಗಳಿಂದ ಸುರೇಶ್ ನರಸಿಂಹ ಅವರು ‘ಜಸ್‌ಟ್ ಬುಕ್’ ಮೂಲಕ ಸಾವಿರಾರು ಜನರಿಗೆ ಪುಸ್ತಕ ಹಂಚಿದ್ದಾರೆ. ಅವರ ಬಳಿ ಈಗ 15 ಲಕ್ಷಕ್ಕೂ ಅಧಿಕ ಪುಸ್ತಕಗಳಿವೆ. ಕನ್ನಡ, ಇಂಗ್ಲೀಷ್, ಹಿಂದಿ ಜೊತೆಗೆ ಬೇರೆ ಬೇರೆ ಭಾಷೆಗಳು ಪುಸ್ತಕಗಳೂ ಇವೆ. ಮತ್ತೊಂದು ವಿಶೇಷ ಅಂದರೆ ಇವರು ಹೊಸ ಲೇಖಕರನ್ನು ಓದುಗರಿಗೆ ಪರಿಚಯಿಸುವ ಪ್ರಯತ್ನ ಮಾಡುತ್ತಾರೆ. ನಿಮ್ಮ ವಯಸ್ಸು, ಆಸಕ್ತಿಯ ವಿಷಯ ತಿಳಿಸಿದರೆ ಹೊಸ ಪುಸ್ತಕಗಳ ಬಗ್ಗೆ ಅಪ್‌ಡೇಟ್ ಮಾಡುತ್ತಾರೆ. ಮುದ್ದಣದ ಕೃತಿಗಳಿಂದ ಹಿಡಿದು ಇತ್ತೀಚಿನವರ ಬರವಣಿಗೆಗಳ ತನಕ ಇಲ್ಲಿ ಹೆಚ್ಚಿನೆಲ್ಲ ಕೃತಿಗಳೂ ಇಲ್ಲಿವೆ. ಮಕ್ಕಳಿಗೆ, ಹಿರಿಯರಿಗೆ ಉಚಿತವಾಗಿ ಕತೆ ಓದಿ ಹೇಳೋ ಕೆಲಸವನ್ನೂ ಈ ಸಂಸ್ಥೆಯವರು ಮಾಡುತ್ತಾರೆ.

ನಾನು ಪುಸ್ತಕ ಪ್ರಿಯ. ನನ್ನಂತೆ ಪುಸ್ತಕ ಪ್ರೀತಿ ಇರುವವರಿಗೆ ಬುಕ್‌ಸ್ ತಲುಪಿಸೋಕೆ ಖುಷಿ ಇದೆ. ಜನರಲ್ಲಿ ಓದುವ ಅಭಿರುಚಿ ಬೆಳೆಸೋದರಲ್ಲಿ ಜಸ್‌ಟ್ ಬುಕ್‌ನ ಸಾರ್ಥಕ್ಯ ಅಡಗಿದೆ.- ಸುರೇಶ್ ನರಸಿಂಹ, ಜಸ್‌ಟ್ ಬುಕ್ ಮುಖ್ಯಸ್ಥ

ಬೆಂಗಳೂರು, ಮೈಸೂರು, ಚೆನ್ನೈ ಮೊದಲಾದೆಡೆ ಜಸ್‌ಟ್ ಕನ್ನಡ ಪುಸ್ತಕಗಳನ್ನು ಹೀಗೆ ಬಾಡಿಗೆಗೆ ಪಡೆಯಬಹುದು. ಜಿಲ್ಲಾ ಕೇಂದ್ರಗಳಲ್ಲಿ ಪುಸ್ತಕ ಇದ್ದವರ ಬಳಿ ಪಡೆದು ಅಗತ್ಯ ಇದ್ದವರಿಗೆ ತಲುಪಿಸುವ ಯೋಜನೆಯೂ ಇದೆ.

ಜಸ್‌ಟ್ ಕನ್ನಡ ವ್ಯಾಲೆಟ್‌ನಲ್ಲಿ ಗ್ರಾಹಕರು ಹಾಕುವ 500 ರು.ವೇ ಶ್ಯೂರಿಟಿ ಆಗಿರುತ್ತದೆ. ಇಷ್ಟು ಹಣ ಇಟ್ಟು ಸಾವಿರಾರು ರು. ಪುಸ್ತಕ ತೆಗೆದುಕೊಂಡರೂ ಖುಷಿಯಿಂದಲೇ ನೀಡುತ್ತಾರೆ. ‘ಪುಸ್ತಕ ಪ್ರೀತಿ ಇರುವವರು ವಂಚನೆ ಮಾಡೋದಿಲ್ಲ ಅನ್ನೋದು ನನ್ನ ವಿಶ್ವಾಸ’ ಅನ್ನೋದು ಸುರೇಶ್ ಮಾತು.

Follow Us:
Download App:
  • android
  • ios