ಬಡತನದಿಂದಾಗಿ 8ನೇ ವಯಸ್ಸಿಗೆ ಬಾಲ್ಯವಿವಾಹ, ಅಮ್ಮನಾದ ನಂತರ ನೀಟ್ ಬರೆದು ಡಾಕ್ಟರ್ ಆದ ರೂಪಾ
ರೂಪಾ ಯಾದವ್ ಎಂಬ ಹುಡುಗಿ ತನ್ನ ಕಡು ಬಡತನದ ಹುಡುಗಿ 8 ವರ್ಷಕ್ಕೆ ಬಾಲ್ಯವಿವಾಹದ ಪಿಡುಗಿಗೆ ತುತ್ತಾಗಿ. ಕಷ್ಟಪಟ್ಟು ಓದಿ ಗಂಡನ ಬೆಂಬಲದಿಂದ ನೀಟ್ ಪರೀಕ್ಷೆ ಬರೆದು ವೈದ್ಯರಾಗುವ ಕನಸು ನನಸು ಮಾಡಿಕೊಂಡಿದ್ದಾರೆ.
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ಭಾರತದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಷ್ಟಕರ ಒಂದಾಗಿದೆ. ಆದರೆ ರೂಪಾ ಯಾದವ್ ಎಂಬ ಹುಡುಗಿ ತನ್ನ ಕಡು ಬಡತನ ಮತ್ತು ಅನೇಕ ಸಾಮಾಜಿಕ ಒತ್ತಡಗಳ ನಡುವೆಯೂ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ವೈದ್ಯ ವೃತ್ತಿಗೆ ಮುನ್ನುಡಿ ಬರೆದರು.
ರೂಪಾ ಯಾದವ್ ಅವರಿಗೆ ಬಾಲ್ಯದಿಂದಲೂ ಶಿಕ್ಷಣ ಪೂರ್ಣಗೊಳಿಸಿಸುವುದರ ಜೊತೆಗೆ ವೈದ್ಯೆಯಾಗುವ ಕನಸು. ಆದರೆ ಆಕೆಯ ಕುಟುಂಬವು ಅವಳಿಗಾಗಿ ವಿಭಿನ್ನ ಯೋಜನೆಯನ್ನೇ ಮಾಡಿತ್ತು. ಅದು ಮದುವೆ. ರೂಪಾ ಅತೀ ಚಿಕ್ಕ ವಯಸ್ಸಿನಲ್ಲೇ ಬಾಲ್ಯ ವಿವಾಹಕ್ಕೆ ತುತ್ತಾದರು. ಅವರಿಗೆ ಕೇವಲ ಎಂಟನೇ ವಯಸ್ಸಿನಲ್ಲಿ ಮನೆಯವರು ಬಾಲ್ಯ ವಿವಾಹ ಮಾಡಿದ್ದರು.
ಸ್ಟೋರ್ ಮ್ಯಾನೇಜರ್ ವೃತ್ತಿ ಬದುಕಿನಿಂದ ವಿದೇಶಿ ಕಂಪೆನಿ ಸಿಇಓ ಹುದ್ದೆಗೇರಿದ ಚೆನ್ನೈ ಮಹಿಳೆಯ ತಿಂಗಳ ವೇತನ 11 ಕೋಟಿ!
ರಾಜಸ್ಥಾನ ಮೂಲದ ರೂಪಾ ತನ್ನ ಎಂಟನೇ ವಯಸ್ಸಿನಲ್ಲಿ ತನ್ನ ಮನೆಯನ್ನು ತೊರೆದು ತನ್ನ ಗಂಡನ ಮನೆ ಮತ್ತು ಅವರ ಕುಟುಂಬದೊಂದಿಗೆ ವಾಸಿಸಬೇಕಾಯಿತು. ಮದುವೆಯ ಸಮಯದಲ್ಲಿ ಆಕೆಯ ಪತಿಗೆ ಕೇವಲ 12 ವರ್ಷವಾಗಿತ್ತು. ಅವನಿಗೂ ಅದು ಬಾಲ್ಯ ವಿವಾಹವೇ. ರೂಪಾ ಗಂಡನ ಮನೆಯಲ್ಲಿ ಮನೆಕೆಲಸಗಳನ್ನು ನಿರ್ವಹಿಸುತ್ತಿದ್ದಳು. ಅವಳ ಅತ್ತೆಯನ್ನು ನೋಡಿಕೊಳ್ಳುತ್ತಿದ್ದಳು. ಇದರ ಜೊತೆಗೆ ಶಾಲೆಯನ್ನು ಪೂರ್ಣಗೊಳಿಸುತ್ತಿದ್ದಳು.
NEET ಆಕಾಂಕ್ಷಿ ರೂಪಾ ಕುಟುಂಬವು ಸಾಮಾಜಿಕ ಒತ್ತಡದಿಂದಾಗಿ ಆಕೆಯನ್ನು ಎಂಟನೇ ವಯಸ್ಸಿನಲ್ಲಿ ವಿವಾಹ ಮಾಡುವುದು ಅನಿವಾರ್ಯವಾಗಿತ್ತು. ರೂಪಾ ಬಡ ರೈತನ ಮಗಳು, ಹೀಗಾಗಿ ರೈತರ ಕುಟುಂಬವನ್ನೇ ವಿವಾಹವಾದರು. ರೂಪಾ ಮತ್ತು ಸಹೋದರಿ ರುಕ್ಮಾ ಇಬ್ಬರೂ ಒಂದೇ ಕುಟುಂಬದಲ್ಲಿ ಕ್ರಮವಾಗಿ ಶಂಕರಲಾಲ್ ಮತ್ತು ಬಾಬುಲಾಲ್ ಅವರನ್ನು ವಿವಾಹವಾದರು. ಈಗ ಆಕೆಗೆ ಒಂದು ಮಗುವಿದೆ.
ದಾಖಲೆಯ 22 ಲಕ್ಷದ ವೇತನ ಪಡೆದು ಇತಿಹಾಸ ನಿರ್ಮಿಸಿದ ಎಂಎಂಎಂಯುಟಿ ಮೂವರು ವಿದ್ಯಾರ್ಥಿನಿಯರು!
ರೂಪಾ 12 ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 84 ರಷ್ಟು ಅಂಕಗಳನ್ನು ಗಳಿಸುವ ಮೂಲಕ ತನ್ನ ದೃಢತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ರೂಪಾ ಅವರಿಗೆ ಶಿಕ್ಷಣ ಮತ್ತು ಅಧ್ಯಯನದ ಬಗ್ಗೆ ಇರುವ ಪ್ರೀತಿ, ಸಮರ್ಪಣಾ ಮನೋಭಾವವನ್ನು ಕಂಡು ಅವರ ಪತಿ ಮತ್ತು ಸೋದರ ಮಾವ ಇಬ್ಬರೂ ಬೆಂಬಲಿಸಿದರು. ರೂಪಾ ಸಹೋದರನು ಆಕೆಯ ಅಧ್ಯಯನಕ್ಕೆ ಬೇಕಾದ ಹಣ ಮತ್ತು ಪುಸ್ತಕಗಳನ್ನು ಖರೀದಿಸಲು ಹೆಚ್ಚುವರಿ ದುಡಿದು ಹಣವನ್ನು ಗಳಿಸಲು ಪ್ರಯತ್ನಿಸಿದನು. ಸ್ವಲ್ಪ ಹೆಚ್ಚುವರಿ ಆದಾಯಕ್ಕಾಗಿ ಆಟೋ ರಿಕ್ಷಾವನ್ನು ಓಡಿಸಿದನು.
ಅಧ್ಯಯನಕ್ಕೆ ಬೇಕಾಗುವಷ್ಟು ಹಣವನ್ನು ಸಂಗ್ರಹಿಸುವ ಮೂಲಕ ವೈದ್ಯಕೀಯ ಪ್ರವೇಶ ಕೋಚಿಂಗ್‌ಗಾಗಿ ರೂಪಾ ಯಾದವ್ ಅವರನ್ನು ಕೋಟಾಕ್ಕೆ ಕಳುಹಿಸಲಾಯ್ತು. ಪತ್ನಿ ಕುಟುಂಬವನ್ನು ಉನ್ನತೀಕರಿಸುವ ಭರವಸೆ ಪತಿಗೆ ಬಹಳವಿತ್ತು.
ರೂಪಾ ಅವರು NEET 2017 ಪರೀಕ್ಷೆ ಬರೆದು ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಮಾತ್ರವಲ್ಲ ಅವರ ಕುಟುಂಬದ ಮೊದಲ ವೈದ್ಯರಾದರು. ಭವಿಷ್ಯ ವೈದ್ಯರಾಗಲಿರುವ ರೂಪಾ NEET 2017 ಪರೀಕ್ಷೆಯಲ್ಲಿ 720 ರಲ್ಲಿ 603 ಅಂಕಗಳನ್ನು ಗಳಿಸಿದರು ಮತ್ತು ಅಖಿಲ ಭಾರತ ಶ್ರೇಣಿ (AIR) 2,612 ಗಳಿಸಿದರು. ನೀಟ್ ಬರೆದಾಗ ಆಕೆಗೆ 20 ವರ್ಷ ವಯಸ್ಸಾಗಿತ್ತು. ಈ ಮೂಲಕ ಅನೇಕರಿಗೆ ಸ್ಪೂರ್ತಿಯಾದರು.