ದಾಖಲೆಯ 22 ಲಕ್ಷದ ವೇತನ ಪಡೆದು ಇತಿಹಾಸ ನಿರ್ಮಿಸಿದ ಎಂಎಂಎಂಯುಟಿ ಮೂವರು ವಿದ್ಯಾರ್ಥಿನಿಯರು!

ಮದನ್ ಮೋಹನ್ ಮಾಳವೀಯ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ವಂಶಿತಾ ತಿವಾರಿ ಮತ್ತು ಇತರ ಮೂವರು ವಿದ್ಯಾರ್ಥಿಗಳು ಕ್ಯಾಂಪಸ್ ಸೆಲೆಕ್ಷನ್‌ ನಲ್ಲಿ ಬರೋಬ್ಬರಿ 22 ಲಕ್ಷ ರೂಪಾಯಿ ವೇತನ ಪಡೆದುಕೊಂಡಿದ್ದಾರೆ.

Meet Vanshita Tiwari, Anupriya Sharma, Anushree Tiwari  hired for record-breaking salary gow

ಮದನ್ ಮೋಹನ್ ಮಾಳವೀಯ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ (MMMUT) ವಂಶಿತಾ ತಿವಾರಿ ಮತ್ತು ಇತರ ಮೂವರು ವಿದ್ಯಾರ್ಥಿಗಳು ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಯುಎಸ್ ಮೂಲದ ಸಂಸ್ಥೆಯಾದ ಬಿಎನ್‌ವೈ ಮೆಲನ್‌ನಿಂದ ದಾಖಲೆ ಮಟ್ಟದ ವೇತನ ಪಡೆಯುವ ಮೂಲಕ ೀಗ ಸುದ್ದಿಯಲ್ಲಿದ್ದಾರೆ.

ವಂಶಿತಾ ತಿವಾರಿ, ಅನುಶ್ರೀ ತಿವಾರಿ ಮತ್ತು ಅನುಪ್ರಿಯಾ ಶರ್ಮಾ ಯುಎಸ್ ಟೆಕ್ ದೈತ್ಯ ಕಂಪೆನಿಯಿಂದ ತಲಾ 22 ಲಕ್ಷ ರೂಪಾಯಿ ಮೌಲ್ಯದ ಪ್ಯಾಕೇಜ್ ಪಡೆದಿದ್ದರೆ, ಶ್ರೇಯಾ ಪಾಂಡೆ ಎಂಬ ಇನ್ನೊಬ್ಬ ವಿದ್ಯಾರ್ಥಿನಿ 18.5 ಲಕ್ಷ ರೂಪಾಯಿ ಮೌಲ್ಯದ ಉದ್ಯೋಗದ ಆಫರ್ ಗಿಟ್ಟಿಸಿಕೊಂಡಿದ್ದಾಳೆ. ವಂಶಿತಾ ತಿವರ್ತಿ ಸಾಫ್ಟ್‌ವೇರ್ ಡೆವಲಪರ್ ಇಂಜಿನಿಯರ್ ಆಗಿ ಕೆಲಸ ಮಾಡಲು ನೇಮಕಗೊಂಡಿದ್ದಾರೆ. ಜೊತೆಗೆ ಈಕೆ ಕಳೆದ ನಾಲ್ಕು ತಿಂಗಳುಗಳಿಂದ ಬಿಎನ್‌ವೈ ಮೆಲನ್‌ನ ಪುಣೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ದಾಖಲೆಯ ವೇತನದ ಮೂಲಕ ಆಕ್ಸಿಸ್ ಬ್ಯಾಂಕ್ ಡೆಪ್ಯುಟಿ ಮ್ಯಾನೇಜರ್‌ ಆದ ಹೈದರಾಬಾದ್‌ NMIMS ವಿದ್ಯಾರ್ಥಿನಿ!

ವಿವಿಧ ತಂತ್ರಜ್ಞಾನಗಳನ್ನು ಕಲಿಯಲು ಮತ್ತು ಕೆಲಸ ಮಾಡಲು ತುಂಬಾ ಉತ್ಸುಕನಾಗಿದ್ದೇನೆ. ನನ್ನ ತಾಂತ್ರಿಕ ಜ್ಞಾನ ಮತ್ತು ಸಾಫ್ಟ್ ಸ್ಕಿಲ್‌ಗಳನ್ನು ಅಳವಡಿಸಿಕೊಳ್ಳುವ ಮೂಲಕ ಪ್ರೋಗ್ರಾಮಿಂಗ್ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು, ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳಲು ನಾನು ಸಿದ್ಧನಿದ್ದೇನೆ. MERN ಸ್ಟಾಕ್ ಡೆವಲಪ್‌ಮೆಂಟ್ ಮತ್ತು ಕ್ರಾಸ್ ಪ್ಲಾಟ್‌ಫಾರ್ಮ್ ಅಪ್ಲಿಕೇಶನ್ ಡೆವಲಪ್‌ಮೆಂಟ್‌ನಂತಹ ವಿವಿಧ ಕ್ಷೇತ್ರಗಳಲ್ಲಿ ಬಹು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ ಎಂದು ವಂಶಿತಾ ತಿವಾರಿ ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಉಲ್ಲೇಖಿಸಿದ್ದಾರೆ. 

ವಂಶಿತಾ ತಿವಾರಿ ಅವರು 2023 ರಲ್ಲಿ ಗೋರಖ್‌ಪುರದ ಮದನ್ ಮೋಹನ್ ಮಾಳವೀಯ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯಲ್ಲಿ 8.75 CGPA ಯೊಂದಿಗೆ ಮಾಹಿತಿ ತಂತ್ರಜ್ಞಾನದಲ್ಲಿ ತಮ್ಮ ಬ್ಯಾಚುಲರ್ ಆಫ್ ಟೆಕ್ನಾಲಜಿಯನ್ನು ಪೂರ್ಣಗೊಳಿಸಿದ್ದಾರೆ. ಅವರು 2018 ರಲ್ಲಿ ಸೇಂಟ್ ಜೂಡ್ಸ್ ಶಾಲೆ ಗೋರಖ್‌ಪುರದಿಂದ 94.2% ಅಂಕ ಪಡೆಯುವ ಮೂಲಕ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ವಂಶಿತಾ ತಿವಾರಿ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು ಜಾವಾ, ಜಾವಾಸ್ಕ್ರಿಪ್ಟ್ ಮುಂತಾದ ಪ್ರೋಗ್ರಾಮಿಂಗ್ ಸ್ಕ್ರಿಪ್ಟ್ ಗಳನ್ನು ಬಲ್ಲವರಾಗಿದ್ದಾರೆ.

ವಿಶ್ವದ ನಂ.1 ಕಂಪೆನಿ ಹೊಂದಿರುವ ಭಾರತೀಯ ಉದ್ಯಮಿ ಬಳಿ ಅತ್ಯಂತ ದುಬಾರಿ ಮನೆ, ಇದು ಅಂಬಾನಿ ಮನೆ ಸಮೀಪದಲ್ಲಿದೆ

ಕೆಲವು ತಿಂಗಳುಗಳ ಹಿಂದೆ, MMMUT ವಿದ್ಯಾರ್ಥಿ ಆರಾಧ್ಯ ತ್ರಿಪಾಠಿ ಅವರು ಗೂಗಲ್‌ನಿಂದ ದಾಖಲೆಯ  ಉದ್ಯೋಗದ ಆಫರ್ ಅನ್ನು ಗಳಿಸಿ ಸುದ್ದಿಯಲ್ಲಿದ್ದರು. ಆರಾಧ್ಯ ತ್ರಿಪಾಠಿ US ಟೆಕ್ ದೈತ್ಯರಿಂದ 52 ಲಕ್ಷ ರೂಪಾಯಿಗಳ ಪ್ಯಾಕೇಜ್ ಅನ್ನು ಪಡೆದುಕೊಂಡಿದ್ದಾರೆ. ಆರಾಧ್ಯ ತ್ರಿಪಾಠಿ ಎಂಎಂಎಂಯುಟಿಯಿಂದ ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಮಾಡಿದ್ದಾರೆ.  ಮತ್ತು ಇವರು ಪಡೆದುಕೊಂಡಿರುವ  ಪ್ಯಾಕೇಜ್ MMMUT ನಲ್ಲಿ ವಿದ್ಯಾರ್ಥಿ ಗಳಿಸಿದ ಅತ್ಯಧಿಕ ಪ್ಯಾಕೇಜ್ ಆಗಿದೆ. ಆರಾಧ್ಯ ತ್ರಿಪಾಠಿ ಅವರು ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇಂಜಿನಿಯರ್ ಆಗಿ ಗೂಗಲ್‌ನಲ್ಲಿ ಉದ್ಯೋಗದಲ್ಲಿದ್ದಾರೆ.

Latest Videos
Follow Us:
Download App:
  • android
  • ios