ಕ್ಯೂಎಸ್ ರ್‍ಯಾಂಕಿಂಗ್‌ನಲ್ಲಿ ಐಐಎಂ ಅಹಮದಾಬಾದ್ ಭಾರತದಲ್ಲಿ ನಂ.1 ಸ್ಥಾನ ಪಡೆದಿದೆ. ಜಾಗತಿಕವಾಗಿ 27ನೇ ಸ್ಥಾನದಲ್ಲಿದೆ. ಬೆಂಗಳೂರು ಐಐಎಂ 40ನೇ ಸ್ಥಾನದಲ್ಲಿದೆ.
ನವದೆಹಲಿ (ಮಾ.13): ಕ್ಯುಎಸ್ ರ್‍ಯಾಂಕಿಂಗ್ ಘೋಷಣೆ ಮಾಡಿದ ವಿಶ್ವದ ಟಾಪ್ 50 ಬಿಸಿನೆಸ್ ಹಾಗೂ ಮ್ಯಾನೇಜ್‌ಮೆಂಟ್ ಸ್ಕೂಲ್‌ಗಳ ಪಟ್ಟಿಯಲ್ಲಿ ಐಐಎಂ ಅಹಮದಾಬಾದ್ ಭಾರತದ ನಂ.1 ಹಾಗೂ ಬೆಂಗಳೂರು ಐಐಎಂ 2ನೇ ಸ್ಥಾನ ಪಡೆದಿವೆ. ಐಐಎಂ ಅಹಮದಾಬಾದ್ ವಿಶ್ವದಲ್ಲಿ 27 ಹಾಗೂ ಐಐಎಂ ಬೆಂಗಳೂರು ವಿಶ್ವದಲ್ಲಿ 40ನೇ ಸ್ಥಾನ ಪಡೆದಿವೆ. ಇದೇ ವೇಳೆ 15ನೇ ಆವೃತ್ತಿಯ ಕ್ಯುಎಸ್ ರ್‍ಯಾಂಕಿಂಗ್‌ನಲ್ಲಿ ವಿಶ್ವದ ಅತ್ಯುತ್ತಮ 50 ವಿವಿಗಳಲ್ಲಿ ಭಾರತದ 9 ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿವೆ.
ಭಾರತದಲ್ಲಿ ಖನಿಜ ಮತ್ತು ಗಣಿಗಾರಿಕೆ ಎಂಜಿನಿಯರಿಂಗ್ ಅತ್ಯುತ್ತಮ ಸಾಧನೆ ಮಾಡಿದ ಕ್ಷೇತ್ರವಾಗಿದ್ದು, ಜಾರ್ಖಂಡ್‌ನ ಧನಬಾದ್‌ನಲ್ಲಿರುವ ಇಂಡಿಯನ್ ಸ್ಕೂಲ್ ಆಫ್ ಮೈನ್ಸ್(ಐಎಸ್‌ಎಂ) ಈ ಕ್ಷೇತ್ರದಲ್ಲಿ ಜಾಗತಿಕವಾಗಿ 20ನೇ ಸ್ಥಾನದ ಪಡೆದಿದೆ. ಉಳಿದಂತೆ ಬಾಂಬೆ ಹಾಗೂ ಖಡಗಪುರ ಐಐಟಿ ಕ್ರಮವಾಗಿ 28 ಹಾಗೂ 45ನೇ ರ್‍ಯಾಂಕ್ ಪಡೆದಿವೆ.
Bengaluru: ಹೃದಯಾಘಾತದಿಂದ ಬೆಂಗಳೂರು ಐಐಎಂ ವಿದ್ಯಾರ್ಥಿ ಸಾವು!
ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಐಐಟಿ ದೆಹಲಿ ಹಾಗೂ ಬಾಂಬೆ 45ನೇ ಸ್ಥಾನವನ್ನು ಹಂಚಿಕೊಂಡಿವೆ. ವ್ಯಾಪಾರ ಮತ್ತು ನಿರ್ವಹಣೆ ಅಧ್ಯಯನದಲ್ಲಿ ಬೆಂಗಳೂರು ಐಐಎಂನ ರ್‍ಯಾಂಕಿಂಗ್ ಕಳೆದ ಬಾರಿಗೆ ಹೋಲಿಸಿದರೆ 32ನೇ ಸ್ಥಾನದಿಂದ 40ಕ್ಕೆ ಕುಸಿದಿದೆ.
ಬಾಲ್ಯವಿವಾಹಕ್ಕೆ ತುತ್ತಾಗಿ ಸ್ಲಂನಲ್ಲಿ ನರಳಿದ ಈಕೆ ಇಂದು ದೇಶದ ಮಿಲಿಯನೇರ್
