Asianet Suvarna News Asianet Suvarna News

ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಪಂಜಾಬ್ ಸಿಎಂ ಭಗವಂತ್ ಮಾನ್

 ಶಿಕ್ಷಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಶಿಕ್ಷಣಕ್ಕೆ ಮಹತ್ವ ನೀಡಿದ್ದಾರೆ.

Punjab Chief Minister Bhagwant Mann announcement baring private schools fee Hike gow
Author
Bengaluru, First Published Mar 31, 2022, 7:09 PM IST

ಬೆಂಗಳೂರು(ಮಾ.31): ಪಂಜಾಬ್‌ನ (Punjab) ನೂತನ ಮುಖ್ಯಮಂತ್ರಿ ಭಗವಂತ್ ಮಾನ್ (Punjab Chief Minister Bhagwant Mann) ಅವರು ಮಾರ್ಚ್ 30 ರಂದು ಶಿಕ್ಷಣಕ್ಕೆ (Eduction) ಸಂಬಂಧಿಸಿದಂತೆ ಎರಡು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಮುಂದಾಗಿದ್ದಾರೆ. ಇದಕ್ಕೆ ಸಂಬಂಧಿಸಿ ಮಹತ್ವದ ಆದೇಶ ಹೊರಡಿಸಿದ್ದಾರೆ.

 ಮೊದಲನೆಯದಾಗಿ ಪಂಜಾಬ್‌ನ ಎಲ್ಲಾ ಖಾಸಗಿ ಶಾಲೆಗಳು (Private schools) 2022-23ರ  ಶೈಕ್ಷಣಿಕ ಸಾಲಿನ ಪ್ರವೇಶ ಶುಲ್ಕವನ್ನು ಹೆಚ್ಚಿಸುವುದನ್ನು (Fees Hike) ನಿಷೇಧಿಸಲಾಗಿದೆ. ಎಡರನೆಯದಾಗಿ ಖಾಸಗಿ ಶಾಲೆಗಳು ತಮ್ಮ ಶಾಲಾ ಪುಸ್ತಕಗಳು ಮತ್ತು ಸಮವಸ್ತ್ರವನ್ನು (uniform) ನಿರ್ದಿಷ್ಟ ಅಂಗಡಿಯಿಂದ ಖರೀದಿಸಲು ಪೋಷಕರು ಮತ್ತು ಮಕ್ಕಳನ್ನು ಒತ್ತಾಯಿಸುವಂತಿಲ್ಲ ಎಂದಿದ್ದಾರೆ.

ಯಾವುದೇ ಖಾಸಗಿ ಶಾಲೆಯು ಸಮವಸ್ತ್ರ ಮತ್ತು ಪುಸ್ತಕಗಳನ್ನು ಖರೀದಿಸಲು ಯಾವ ಕಡೆಯೂ ಹೋಗಬೇಕಾಗಿಲ್ಲ. ಶಾಲೆಗಳು ತಮ್ಮ ಪುಸ್ತಕಗಳು ಮತ್ತು ಸಮವಸ್ತ್ರಗಳನ್ನು ಆ ಪ್ರದೇಶದ ಎಲ್ಲಾ ಅಂಗಡಿಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಪೋಷಕರು ತಮ್ಮ ಆಯ್ಕೆಯ ಯಾವುದೇ ಅಂಗಡಿಯಿಂದ ಸಮವಸ್ತ್ರ ಮತ್ತು ಪುಸ್ತಕಗಳನ್ನು ಖರೀದಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಎಂದಿದ್ದಾರೆ. 

Kalaburagi SSLC Exam ವಿದ್ಯಾರ್ಥಿಗಳಿಗೆ ಚೀಟಿ ಕೊಡಲು ಗೋಡೆ ಹತ್ತಿ ಸರ್ಕಸ್!

ನಿರ್ದಿಷ್ಟ ಪಟ್ಟಣ ಅಥವಾ ನಗರದ ಜನಸಂಖ್ಯೆಯನ್ನು ಅವಲಂಬಿಸಿ, ಖಾಸಗಿ ಶಾಲೆಗಳು ಮಕ್ಕಳು ಮತ್ತು ಅವರ ಪೋಷಕರಿಗೆ ಸಮವಸ್ತ್ರ ಮತ್ತು ಪುಸ್ತಕಗಳನ್ನು ಮಾರಾಟ ಮಾಡುವ ಎಲ್ಲಾ ಅಂಗಡಿಗಳ ವಿಳಾಸಗಳನ್ನು ಒದಗಿಸಬೇಕಾಗುತ್ತದೆ. ಪುಸ್ತಕಗಳು ಮತ್ತು ಸಮವಸ್ತ್ರವನ್ನು ಅವರು ಯಾವುದೇ ಅಂಗಡಿಯಿಂದ ಖರೀದಿಸುವ ಆಯ್ಕೆಯನ್ನು ಹೊಂದಿರುತ್ತಾರೆ ಎಂದರು.

ನಿರ್ದಿಷ್ಟ ಅಂಗಡಿಗಳಿಂದ ಪುಸ್ತಕಗಳು ಮತ್ತು ಉಡುಪುಗಳನ್ನು ಖರೀದಿಸುವಂತೆ ಪೋಷಕರ ಮೇಲೆ ಒತ್ತಡ ಹಾಕುವಂತಿಲ್ಲ ಮತ್ತು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಒಂದೇ ಒಂದು ರೂಪಾಯಿ ಶುಲ್ಕ ಹೆಚ್ಚಿಸುವಂತಿಲ್ಲ. ವಿದ್ಯಾರ್ಥಿಗಳ ಪೋಷಕರು, ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಇತರ ಸಂಬಂಧಪಟ್ಟವರೊಂದಿಗೆ ಸಮಾಲೋಚಿಸಿ ಈ ನಿಟ್ಟಿನಲ್ಲಿ ಸಮಗ್ರ ನೀತಿಯನ್ನು ರೂಪಿಸಲಾಗುವುದು ಎಂದು ವೀಡಿಯೊ ಸಂದೇಶದಲ್ಲಿ ಭಗವಂತ್ ಮಾನ್ ಹೇಳಿದ್ದಾರೆ.

KIOCL RECRUITMENT 2022: ಕುದುರೆಮುಖ ಕಬ್ಬಿಣ ಕಾರ್ಖಾನೆಯಲ್ಲಿ ಎಂಜಿನಿಯರ್ ಪದವೀಧರರ ನೇಮಕಾತಿ

ಪಂಜಾಬ್ ರಾಜ್ಯದಲ್ಲಿ ಈ ಎರಡೂ ಸಮಸ್ಯೆಗಳು ಮರುಕಳಿಸುತ್ತಿವೆ. ಪಂಜಾಬ್ ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಳ ಮತ್ತು ಶಾಲಾ ಪುಸ್ತಕಗಳು ಮತ್ತು ಸಮವಸ್ತ್ರವನ್ನು ಒಂದು ಆದ್ಯತೆಯ ಅಂಗಡಿಯಿಂದ ಖರೀದಿಸುವ ಬಗ್ಗೆ ಅನೇಕ ಪೋಷಕರು ದೂರಿದ್ದಾರೆ.

ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಬಯಸುತ್ತಾರೆ ಆದರೆ ಅನಗತ್ಯ ಶುಲ್ಕ ಹೆಚ್ಚಳದಿಂದಾಗಿ ಶಿಕ್ಷಣವು ದುಬಾರಿಯಾಗಿದೆ ಮತ್ತು ಕೈಗೆಟುಕುವಂತಿಲ್ಲ, ಇದರಿಂದಾಗಿ ಡ್ರಾಪ್ ಔಟ್‌ಗಳು ಹೆಚ್ಚಾಗುತ್ತಿವೆ. ಪರಿಣಾಮವಾಗಿ, ಪೋಷಕರು ತಮ್ಮ ವಾರ್ಡ್‌ಗಳನ್ನು ಶಾಲೆಗಳಿಂದ ಕೈಬಿಡಲು ಅಥವಾ ಭವಿಷ್ಯದಲ್ಲಿ ಜೀವನೋಪಾಯವನ್ನು ಹೆಚ್ಚಿಸುವಂತಹ ಶಿಕ್ಷಣವನ್ನು ಒದಗಿಸಬೇಕು ಎಂದರು.

2017 ರಲ್ಲಿ, ಖಾಸಗಿ ಶಾಲೆಗಳು ಮಾಡಿದ ಶುಲ್ಕ ಹೆಚ್ಚಳದ ದರವನ್ನು ಮಿತಿಗೊಳಿಸಲು ಪಂಜಾಬ್ ರಾಜ್ಯ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಶುಲ್ಕದ ನಿಯಮಾವಳಿಯನ್ನು ಜಾರಿಗೆ ತರಲಾಯಿತು ಮತ್ತು 2019 ರಲ್ಲಿ, ಶಾಲಾ ಶಿಕ್ಷಣ ಇಲಾಖೆಯು ಖಾಸಗಿ ಶಾಲೆಗಳಲ್ಲಿ ಪುಸ್ತಕಗಳು ಮತ್ತು ಸಮವಸ್ತ್ರಗಳ ಮಾರಾಟವನ್ನು ನಿಷೇಧಿಸಿತ್ತು.

ಶಿಕ್ಷಣ ಇಲಾಖೆಯು ಸಂಗ್ರಹಿಸಿದ ಇತ್ತೀಚಿನ ಮಾಹಿತಿಯ ಪ್ರಕಾರ, ಪಂಜಾಬ್ 28,568 ಶಾಲೆಗಳನ್ನು ಹೊಂದಿದೆ ಅದರಲ್ಲಿ 67% (ಸುಮಾರು 19200) ಸರ್ಕಾರಿ ಸ್ವಾಮ್ಯದಲ್ಲಿದೆ ಮತ್ತು ಉಳಿದವು ಖಾಸಗಿ (ಸಂಯೋಜಿತ), ಅನುದಾನರಹಿತ, ಸಂಬಂಧಿತ,  ಇತರ ವರ್ಗಗಳಲ್ಲಿವೆ.

ಸುಮಾರು 9,000 ಖಾಸಗಿ ಶಾಲೆಗಳಲ್ಲಿ, 6,500 ಪಂಜಾಬ್‌ನ ಖಾಸಗಿ ಶಾಲೆಗಳು ಮತ್ತು ಸಂಘಗಳ ಒಕ್ಕೂಟದ ಭಾಗವಾಗಿದೆ. ಬಹುಪಾಲು ಖಾಸಗಿ ಶಾಲೆಗಳು (ಸುಮಾರು 5,400) ಪಂಜಾಬ್ ಶಾಲಾ ಶಿಕ್ಷಣ ಮಂಡಳಿಗೆ (PSEB) ಸಂಯೋಜಿತವಾಗಿವೆ, 1,481 ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಗೆ ಸಂಯೋಜಿತವಾಗಿವೆ ಮತ್ತು ಸುಮಾರು ನೂರು ICSE ಯೊಂದಿಗೆ ಸಂಯೋಜಿತವಾಗಿವೆ.

Follow Us:
Download App:
  • android
  • ios