ಪ್ಲೀಸ್... 4G ನೆಟ್ ಕೊಡಿ ಎಂದು ವಿದ್ಯಾರ್ಥಿಗಳು ಕೇಳುತ್ತಿರುವುದು ಯಾಕೆ?
ಕೋವಿಡ್ ಎರಡನೇ ಅಲೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಈ ಬಾರಿಯೂ ಶಾಲೆಗಳು ಓಪನ್ ಬಹುತೇಕ ಕಷ್ಟವಾಗಿದೆ. ಹಾಗಾಗಿ, ಕಳೆದ ವರ್ಷದಂತೆ ಈ ವರ್ಷವೂ ಮಕ್ಕಳು ಆನ್‌ಲೈನ್ ಪಾಠ ಕೇಳಬೇಕಾಗುತ್ತದೆ. ಆದರೆ, ಲಡಾಕ್‌ನಲ್ಲಿ 4ಜಿ ನೆಟ್ವರ್ಕ್ ಇಲ್ಲ. ಹಾಗಾಗಿ, ಅಲ್ಲಿನ ಮಕ್ಕಳ 4ಜಿ ಸೇವೆ ಒದಗಿಸಬೇಕು ಎಂಬ ಮನವಿ ವೈರಲ್ ಆಗಿದೆ.
ಕೋವಿಡ್ ಮೊದಲ ಅಲೆ ಶುರುವಾದಾಗಿಂದಲೂ ಸ್ಕೂಲ್, ಪಾಠ-ಆಟ ಅನ್ನೋದನ್ನ ಮಕ್ಕಳು ಮರೆತು ಹೋಗಿದ್ದಾರೆ, ಕಳೆದೊಂದು ವರ್ಷದಿಂದ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್ ಅನ್ನೋದೇ ಲೋಕವಾಗ್ಬಿಟ್ಟಿದೆ. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಆನ್‌ಲೈನ್ ಪಾಠ ಕೇಳುವ ಮಕ್ಕಳಿಗೆ ಅದೆಷ್ಟರ ಮಟ್ಟಿಗೆ ಅರ್ಥವಾಗುತೋ ಬಿಡುತ್ತೋ ಗೊತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಆನ್‌ಲೈನ್ ಶಿಕ್ಷಣವೊಂದೇ ಮಾರ್ಗ ಎಂಬಂತಾಗಿದೆ.
ಉನ್ನತ ಶಿಕ್ಷಣಕ್ಕಾಗಿ ಪಶ್ಚಿಮ ಬಂಗಾಳದಲ್ಲಿ ಕ್ರೆಡಿಟ್ ಕಾರ್ಡ್ ಸ್ಕೀಮ್!
ಅಂದಹಾಗೇ ನಗರ ಪ್ರದೇಶಗಳಲ್ಲಿರೋ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಸುಲಭವಾಗಿ ಸಿಗುತ್ತದೆ. ಆದ್ರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಗುಡ್ಡಗಾಡು ಪ್ರದೇಶದ ಮಕ್ಕಳ ಪರಿಸ್ಥತಿ ಹಾಗಿಲ್ಲ. ಅವರಿಗೆ ಆನ್‌ಲೈನ್ ಶಿಕ್ಷಣ ಪಡೆಯುವುದು ಸುಲಭದ ಮಾತಲ್ಲ. ಕಾಲಕ್ಕೆ ತಕ್ಕಂತೆ ವೇಗ ಪಡೆಯುವ ಇಂಟರ್‌ನೆಟ್‌ನದ್ದೇ ಒಂದು ದೊಡ್ಡ ಸಮಸ್ಯೆ. ಒಮ್ಮೆ ನೆಟ್‌ವರ್ಕ್ ಸಿಕ್ಕರೆ, ಇನ್ನೊಮ್ಮೆ ಸಿಗಲ್ಲ. ಒಮ್ಮೆ ಇದ್ದಷ್ಟು ಸ್ಪೀಡ್ ಇನ್ನೊಂದ್ಸಲ ಇರೋದಿಲ್ಲ. ಇಂಥ ಇಂಟರ್‌ನೆಟ್ ನಂಬಿಕೊಂಡು ಮಕ್ಕಳು ವಿದ್ಯಾಭ್ಯಾಸ ನಡೆಸಲು ಹೇಗೆ ಸಾಧ್ಯ? ಹೇಳಿ.
ಹೀಗಾಗಿಯೇ ಲಡಾಕ್‌ನ ಚುಶುಲ್ ಕ್ಷೇತ್ರದ ವಿದ್ಯಾರ್ಥಿಗಳು ಇಂಟರ್‌ನೆಟ್ ಸೇವೆಗಾಗಿ ಸರ್ಕಾರದ ಮೊರೆ ಹೋಗಿದ್ದಾರೆ. ಆನ್‌ಲೈನ್ ಶಿಕ್ಷಣಕ್ಕಾಗಿ 4ಜಿ ಟವರ್‌ಗಳನ್ನು ಅಳವಡಿಸುವಂತೆ ಸ್ಟೂಡೆಂಟ್ಸ್ ಸರ್ಕಾರವನ್ನು ಕೋರಿದ್ದಾರೆ. ವಿದ್ಯಾರ್ಥಿಗಳಷ್ಟೇ ಅಲ್ಲ, ವಯಸ್ಕರಿಗೂ ಆನ್‌ಲೈನ್ ವ್ಯವಸ್ಥೆ ಇಲ್ಲದೇ ಸಾಕಷ್ಟು ಸಮಸ್ಯೆಗಳನ್ನ ಎದುರಿಸ್ತದ್ದಾರೆ.ಕೋವಿಡ್ ಲಸಿಕೆಗಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸಲು ಸಾಧ್ಯವಾಗುತ್ತಿಲ್ಲ ಅಂತ ಬೇಸರಗೊಂಡಿದ್ದಾರೆ.
2019 ರಲ್ಲಿ ಎಲ್ಲಾ ಪಂಚಾಯಿತಿಗಳನ್ನ ಡಿಜಿಟಲೈಸ್ ಮಾಡುವುದಕ್ಕಾಗಿ ವಿಎಸ್ಎಟಿ ನೆಟ್‌ವರ್ಕ್ ಅನ್ನು ಸ್ಥಾಪಿಸಲಾಗಿತ್ತು, ಆದರೆ ಇದನ್ನು ಕೇವಲ 8-10 ಜನರು ಮಾತ್ರ ಬಳಸಬಹುದಾಗಿತ್ತು. ಇನ್ನು ಹೆಚ್ಚಿನ ಜನರಿಗೆ ಸಂಪರ್ಕಿಸಲು ಪ್ರಯತ್ನಿಸಿದ್ರೆ, ಇಂಟರ್‌ನೆಟ್ ಸಮಸ್ಯೆ ಎದುರಾಗುತ್ತೆ ಅಂತಾರೆ ಚುಶುಲ್‌ನ ಸ್ಥಳೀಯ ಲಡಾಖ್ ಸ್ವಾಯತ್ತ ಬೆಟ್ಟ ಅಭಿವೃದ್ಧಿ ಮಂಡಳಿಯ (ಲೇಹ್) ಕೌನ್ಸಿಲರ್ ಕೊಂಚಕ್ ಸ್ಟಾಝಿನ್. ಇಲ್ಲಿ ನಿಯೋಜಿಸಲಾಗಿರುವ ಸೇನೆ ಹಾಗೂ ಐಟಿಬಿಪಿ, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಿಗೆ ವೈಫೈ ಮೂಲಕ ಇಂಟರ್‌ನೆಟ್ ಸಂಪರ್ಕ ಕಲ್ಪಿಸುತ್ತಾರೆ. ಈ ಪ್ರದೇಶದಲ್ಲಿ 4 ಜಿ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲು ನಿವಾಸಿಗಳು ನನ್ನನ್ನು ಕೇಳುತ್ತಲೇ ಇರುತ್ತಾರೆ. ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ಅಡ್ಡಿಯಾಗದಂತೆ ಇಂಟರ್‌ನೆಟ್ ಸೇವೆ ಸ್ಥಗಿಸುವಂತ ಕೋರಿದ್ದಾರೆ ಅಂತಾರೆ ಕೊಂಚಕ್. ಈ ಬಗ್ಗೆ ಇಂಡಿಯಾ ಟಿವಿ ಸೇರಿದಂತೆ ಬಹಳಷ್ಟು ಮಾಧ್ಯಮಗಳು ವರದಿ ಮಾಡಿವೆ.
ಕೋವಿಡ್ ವಿರುದ್ಧ ಹೋರಾಡಲು ರೆಡಿಯಾಗ್ತಿದೆ 50 ಲಕ್ಷ ‘ಯಂಗ್ ವಾರಿಯರ್’ ಸೇನೆ!
ಇದಿಷ್ಟೇ ಅಲ್ಲ, ಸರಿಯಾಗಿ ಇಂಟರ್‌ನೆಟ್ ಸೇವೆ ಇಲ್ಲದ ಕಾರಣ ಇದುವರೆಗೂ ಚುಶುಲ್‌ನಿವಾಸಿಗಳು ಕೋವಿಡ್ ಲಸಿಕೆ ಪಡೆಯಲು ಸಾಧ್ಯವಾಗುತಿಲ್ಲ. ಹೀಗಾಗಿ ಚುಶುಲ್‌ನ ಹಳ್ಳಿಗಳ ಗಡಿಭಾಗದಲ್ಲಿ ಮೊಬೈಲ್ ಟವರ್‌ಗಳನ್ನ ಅಳವಡಿಸಬೇಕು ಎಂದು ಕೌನ್ಸಿಲರ್ ಕೊಂಚಕ್, ಪ್ರಧಾನಿ ಮೋದಿ ಹಾಗೂ ಕೇಂದ್ರ ಮಾಹಿತಿ ತಂತ್ರಜಾನ ಸಚಿವ ರವಿಶಂಕರ್ ಪ್ರಸಾದ್‌ಗೆ ಮನವಿ ಮಾಡಿಕೊಂಡಿದ್ದಾರೆ. ಎಲ್‌ಎಸಿ ಬಳಿಯಿರೋ ಹಲವು ಹಳ್ಳಿಗಳಲ್ಲಿ ಇಂಟರ್‌ನೆಟ್ ಸಮಸ್ಯೆಯಾಗುತ್ತಿದೆ. ಫೋಬ್ರಾಂಗ್ ಯುವರ್ಗೊ, ಲುಕುಂಗ್, ಸ್ಪ್ಯಾಂಗ್ಮಿಕ್, ಮಾನ್, ಮೆರಾಕ್, ಖಕ್ಟೆಡ್, ಚುಶುಲ್, ಭರ್ಮ, ಖೇರಪುಲ್ಲು, ಸಾಟೂ ಮತ್ತು ಚಿಬ್ರಾ ಗ್ರಾಮಗಳು ಸರ್ಕಾರದ ಸಹಾಯಕ್ಕಾಗಿ ಕಾಯುತ್ತಿವೆ.
ಶಿಕ್ಷಣ ಸಾಲ ಪಡೆಯುವ ಮುನ್ನ ಈ ಸಂಗತಿಗಳ ಬಗ್ಗೆ ತಿಳಿದಿರಲಿ..!
"ನಮ್ಮ ಗ್ರಾಮದಲ್ಲಿ ನಮಗೆ 4 ಜಿ ಸೌಲಭ್ಯಗಳಿಲ್ಲ. ಆದ್ದರಿಂದ ನಾವು ವೈಫೈ ಪಡೆಯಲು ಪಂಚಾಯತ್ ಘರ್‌ಗೆ ಬರುತ್ತೇವೆ. ನಮಗೆ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ನಾವು ಆಗಾಗ್ಗೆ ಗೈರುಹಾಜರಾಗಿದ್ದೇವೆ, ಶಿಕ್ಷಕರಿಂದ ಬೈಸಿಕೊಂಡಿದ್ದೇವೆ" ಅಂತಾನೆ ೭ನೇ ತರಗತಿ ವಿದ್ಯಾರ್ಥಿ ಜಿಗ್‌ಮತ್.
"ನಾನು ಆನ್‌ಲೈನ್ ತರಗತಿಗಳಿಗೆ ಹಾಜರಾಗಲು 5-6 ಕಿ.ಮೀ ಪ್ರಯಾಣಿಸುತ್ತೇನೆ. ವೈಫೈ ಸಂಪರ್ಕ ಕಡಿತಗೊಂಡಾಗ ಇಂಟರ್ನೆಟ್ ಸೇವೆಯಲ್ಲಿ ಸಮಸ್ಯೆಗಳು ಬರುತ್ತವೆ" ಅಂತಾರೆ 8ನೇ ತರಗತಿ ವಿದ್ಯಾರ್ಥಿ ತ್ಸೆವಾಂಗ್ ನಮ್‌ಗ್ಯಾಲ್.