ಕೋವಿಡ್ ವಿರುದ್ಧ ಹೋರಾಡಲು ರೆಡಿಯಾಗ್ತಿದೆ 50 ಲಕ್ಷ ‘ಯಂಗ್ ವಾರಿಯರ್’ ಸೇನೆ!

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್(ಸಿಬಿಎಸ್ಇ) ಸಂಸ್ಥೆಯು ಕೋವಿಡ್ ವಿರುದ್ಧ ಹೋರಾಟದಲ್ಲಿ ಯುವಕರನ್ನು ತೊಡಿಸುವ ನಿಟ್ಟಿನಲ್ಲಿ 50 ಲಕ್ಷ ಯುಕವರಿಗೆ ಯಂಗ್ ವಾರಿಯರ್ ತರಬೇತಿ ನೀಡಲಿದೆ. ಆ ಮೂಲಕ ಕೋವಿಡ್ ಹೋರಾಟದಲ್ಲಿ ತರಬೇತಿ ಪಡೆದ ಯುವಕರ ಸೇವೆಯನ್ನು ಪಡೆಯಬಹುದಾಗಿದೆ.
 

Fight against Corona- CBSE to train 5 million youth as Young Warrior

ಕೊರೋನಾ ಎರಡನೇ ಅಲೆಯಿಂದ ಇಡೀ ದೇಶವೇ ಸಂಕಷ್ಟದಲ್ಲಿ ಸಿಲುಕಿದೆ. ಕೋವಿಡ್ ನಿಯಂತ್ರಣಕ್ಕೆ ಸರ್ಕಾರವು ಸೇರಿದಂತೆ ಹಲವು ಸಂಘ ಸಂಸ್ಥೆಗಳು, ಕಾರ್ಯಕರ್ತರು, ಪ್ರಭಾವಿಗಳು, ಸಿನಿಮಾ ನಟ, ನಟಿಯರು. ವಿದ್ಯಾರ್ಥಿಗಳು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಪರಿಣಾಮ ತೊಂದರೆ ಅನುಭವಿಸುತ್ತಿರುವ ಹಲವು ಜನರಿಗೆ ಇವರೆಲ್ಲರೂ ನೆರವು ನೀಡುತ್ತಿದ್ದಾರೆ. ಇದರ ಮಧ್ಯೆಯೇ ಮಂಡಳಿಯೊಂದ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದೆ.

ಹೌದು, ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜ್ಯುಕೇಷನ್‌ (ಸಿಬಿಎಸ್‌ಇ) ಕೋವಿಡ್‌ ವಿರುದ್ಧದ ಹೋರಾಟಕ್ಕೆ ಮುಂದಾಗಿದೆ. ಯಂಗ್ ವಾರಿಯರ್ ಆಂದೋಲನಕ್ಕೆ ಬರೋಬ್ಬರೀ 50 ಲಕ್ಷ ಯುವಕರಿಗೆ ತರಬೇತಿ ನೀಡುವ ಗುರಿ ಹೊಂದಿದೆ.  10 ರಿಂದ 30 ವರ್ಷದೊಳಗಿನ ಯಾವುದೇ ವಿದ್ಯಾರ್ಥಿ, ಶಿಕ್ಷಕರು ಈ ಆಂದೋಲನವನ್ನ ಸೇರಿಕೊಳ್ಳಬಹುದು. ಈ ಮೂಲಕ ಅವರು ತಮ್ಮನ್ನು, ತಮ್ಮ ಕುಟುಂಬಗಳನ್ನು, ತಮ್ಮ ಸಮುದಾಯಗಳನ್ನು ಮತ್ತು ದೇಶವನ್ನು ಕಾಪಾಡಿಕೊಳ್ಳಬಹುದಾಗಿದೆ.

ಯಂಗ್ ವಾರಿಯರ್ಸ್ಗೆ ಲಸಿಕೆ ನೋಂದಣಿ, ಆರೋಗ್ಯ ಮತ್ತು ಅಗತ್ಯ ಸೇವೆಗಳ ಪ್ರವೇಶ, ಕೋವಿಡ್ ಸೂಕ್ತ ನಡವಳಿಕೆಗಳಂತಹ ಹಲವಾರು ಗಂಭೀರ ಕಾರ್ಯಗಳನ್ನು ನಿಯೋಜನೆ ಮಾಡಲಾಗುವುದು ಎಂದು ಸಿಬಿಎಸ್ಇ ತಿಳಿಸಿದೆ. ಕೋವಿಡ್ ವಿರುದ್ಧ ಹೋರಾಡಲು ಐದು ದಶಲಕ್ಷ ಯುವಕರನ್ನು  ತೊಡಗಿಸಿಕೊಳ್ಳುತ್ತಿದ್ದು, ಈ ಯಂಗ್‌ವಾರಿಯರ್ ರಾಷ್ಟ್ರವ್ಯಾಪಿ ಚಳುವಳಿಯಾಗಿದೆ. ಜೊತೆಗೆ  50 ದಶಲಕ್ಷ ಜನರ ಮೇಲೆ ಪರಿಣಾಮ ಬೀರಲಿದೆ ಎಂದು ಸಿಬಿಎಸ್ಇ ತಿಳಿಸಿದೆ.

ಶಿಕ್ಷಣ ಸಾಲ ಪಡೆಯುವ ಮುನ್ನ ಈ ಸಂಗತಿಗಳ ಬಗ್ಗೆ ತಿಳಿದಿರಲಿ..!

ಈ ಆಂದೋಲನವು ಸಿಬಿಎಸ್‌ಇ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಯುವ-ಯುನಿಸೆಫ್ ಹಾಗೂ 950 ಕ್ಕೂ ಹೆಚ್ಚು ಪಾಲುದಾರರ ಒಕ್ಕೂಟದ ಜಂಟಿ ಕಾರ್ಯಾಚರಣೆಯಾಗಿದೆ.

Fight against Corona- CBSE to train 5 million youth as Young Warrior



ಯಂಗ್ ವಾರಿಯರ್’ಗೆ ಸೇರೋದು ಹೇಗೆ?
ಮೊದಲಿಗೆ ವಾಟ್ಸಾಪ್ನಲ್ಲಿ ವೈಡಬ್ಲ್ಯೂಎ ಎಂದು ಟೈಪ್ ಮಾಡಿ ಮತ್ತು ಅದನ್ನು +91 96504 14141 ಗೆ ಕಳುಹಿಸಿ ಅಥವಾ 080-66019225 ಗೆ ಮಿಸ್ಡ್ ಕಾಲ್ ನೀಡಿ.  ನಂತರ ಈ ಆಂದೋಲದಲ್ಲಿ ಪಾಲ್ಗೊಳ್ಳಲು ಸೇರಿದ ನಂತರ, ಅವರು 10 ಅಥವಾ ಹೆಚ್ಚಿನ ಯುವಕರನ್ನು (10 ರಿಂದ 30 ವರ್ಷದೊಳಗಿನವರು) ಚಳವಳಿಗೆ ಸೇರಲು ಪ್ರೇರೇಪಿಸಬಹುದು.

ಸೋಷಿಯಲ್ ಮೀಡಿಯಾದಲ್ಲಿ ನಾನು  '#youngwarrior'  ಎಂಬ ಸಂದೇಶವನ್ನು ಪೋಸ್ಟ್ ಮಾಡುವ ಮೂಲಕ ಕೋವಿಡ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪ್ರತಿಜ್ಞೆ ಮಾಡಬಹುದು. ಪ್ರತಿ ಪೋಸ್ಟ್‌ನಲ್ಲಿ ಕನಿಷ್ಠ 5 ಸ್ನೇಹಿತರನ್ನು ಟ್ಯಾಗ್ ಮಾಡಿ.

ಆರ್ಥಿಕ ಬಿಕ್ಕಟ್ಟು ಇದೆಯಾ? ಈ ಸ್ಕಾಲರ್‌ಶಿಪ್‌ಗಳಿಗೆ ಅಪ್ಲೈ ಮಾಡಿ

ಆಂದೋಲನದಲ್ಲಿ ಭಾಗವಹಿಸುವವರು ಮತ್ತು ನಾಗರಿಕರ ಅನುಕೂಲಕ್ಕಾಗಿ 10 ಪ್ರಾದೇಶಿಕ ಭಾಷೆಗಳಲ್ಲಿ ಟಾಸ್ಕ್‌ಗಳನ್ನು ಆಯೋಜಿಸಲಾಗುತ್ತದೆ. ಮೊದಲನೆಯದು ಯುರಿಪೋರ್ಟ್ ಎಂಬ ತಂತ್ರಜ್ಞಾನ ಆಧಾರಿತ ಚಾಟ್-ಬೋಟ್ ಪ್ಲಾಟ್‌ಫಾರ್ಮ್. ( ವಾಟ್ಸ್ ಆ್ಯಪ್ YWA ಎಂದು ಟೈಪ್ ಮಾಡಿ +91 9650414141ಕ್ಕೆ ಕಳುಹಿಸಬೇಕು).

ಎರಡನೆಯದು ವಾಟ್ಸಾಪ್ ಆ್ಯಪ್ ಅಥವಾ ಇಂಟರ್ನೆಟ್ ಹೊಂದಿಲ್ಲದ ಯುವಜನರೊಂದಿಗೆ ದೂರವಾಣಿ ಮೂಲಕವೇ ಪ್ರತಿಕ್ರಿಯಿಸುವ ಐವಿಆರ್ ಆಧಾರಿತ ಪಾಟ್ಫಾರ್ಮ್.(08066019225 ಗೆ ಮಿಸ್ಡ್ ಕಾಲ್ ನೀಡಿ). ಮೂರನೆಯದು ಫೋನ್‌ಗಳು ಅಥವಾ ಇಂಟರ್‌ನೆಟ್‌ ಹೊಂದಿಲ್ಲದವರನ್ನ ಸಮುದಾಯ ರೇಡಿಯೊ ಮೂಲಕ ಸಂಪರ್ಕಿಸುವುದು ಎಂದು ಸಿಬಿಎಸ್‌ಇ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಮೂಲಕ ಯುವಕರು ಕೋವಿಡ್ ನಿಯಂತ್ರಣದಲ್ಲಿ, ಅದಕ್ಕ ಸಂಬಂಧಿಸಿ ಜಾಗೃತಿ ಮೂಡಿಸುವುದರಲ್ಲಿ ಸಕ್ರಿಯವಾಗಿ ಪಾಲ್ಕೊಳ್ಳಬಹುದು. ಇಂದಿನ ಬಿಕ್ಕಟ್ಟಿನ ಸ್ಥಿತಿಯಲ್ಲಿ ಎಲ್ಲರೂ ಕೈಜೋಡಿಸುವ ಮೂಲಕ ಮಾನವ ಕುಲಕ್ಕೆ ಮುಳ್ಳಾಗಿರುವ ಈ ಕೋವಿಡ್‌ನಿಂದ ಎಲ್ಲರನ್ನೂ ರಕ್ಷಿಸಬೇಕಿದೆ. ಹಾಗಾಗಿ, ಪ್ರತಿಯೊಬ್ಬರು ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸಿದರೆ, ಸರ್ಕಾರದ ಜತೆಗೆ ಕೈಜೋಡಿಸಿದರೆ ಪರಿಣಾಮಕಾರಿಯಾಗಿ ಕೋವಿಡ್ ನಿಯಂತ್ರಿಸಬಹುದಾಗಿದೆ.

ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಟ್ರೈಬಲ್ ಸ್ಕೂಲ್‌ನಲ್ಲಿ ಬೋಧನೆ!

Latest Videos
Follow Us:
Download App:
  • android
  • ios