ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗಾಗಿಯೇ ಪಶ್ಚಿಮ ಬಂಗಾಳ ಸರ್ಕಾರವೇ ಕ್ರೆಡಿಟ್ ಕಾರ್ಡ್ ಸ್ಕೀಮ್ ಅನ್ನು ಜಾರಿಗೆ ತರಲಿದೆ. ಸೋಮವಾರ ನಡೆದ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ಸಿಕ್ಕಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆಯೇ ದೀದಿ, ಈ ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದಾರೆ.

ಶಿಕ್ಷಣ ಸಾಲ ಪಡೆಯುವ ಮುನ್ನ ಈ ಸಂಗತಿಗಳ ಬಗ್ಗೆ ತಿಳಿದಿರಲಿ..!

ಸಾಮಾನ್ಯವಾಗಿ ಎಲ್ಲರಿಗೂ ಹೈಯರ್ ಎಜ್ಯುಕೇಷನ್ ಪಡೆಯೋದಕ್ಕೆ ಸಾಧ್ಯವಾಗಲ್ಲ. ಕೆಲವರಿಗೆ ತುಂಬಾ ಓದಬೇಕೆಂಬ ಆಸೆಯಿದ್ದರೂ, ಆರ್ಥಿಕ ಬಲವಿಲ್ಲದೇ ತಮ್ಮ ಕನಸ್ಸನ್ನ ಕೈಬಿಡುತ್ತಾರೆ. ಅದರಲ್ಲೂ ಉನ್ನತ ಶಿಕ್ಷಣ ಪಡೆಯಬೇಕೆಂಬ ಕನಸ್ಸು ಕಾಣುವ ಅದೆಷ್ಟೋ ಹೆಣ್ಣು ಮಕ್ಕಳು, ಅರ್ಧಕ್ಕೆ ವಿದ್ಯಾಭ್ಯಾಸವನ್ನ ನಿಲ್ಲಿಸುತ್ತಾರೆ. ಅಂಥ ವಿದ್ಯಾರ್ಥಿಗಳಿಗೆ ಈ ಯೋಜನೆ ಪ್ರಯೋಜನವಾಗಲಿದೆ.

ಉನ್ನತ ಶಿಕ್ಷಣಕ್ಕಾಗಿ ಕೆಲವರು ಬ್ಯಾಂಕ್‌ಗಳಿಂದ ಶಿಕ್ಷಣ ಸಾಲ ಪಡೆದು ತಮ್ಮ ವಿದ್ಯಾಭ್ಯಾಸವನ್ನ ಮುಂದುವರಿಸುತ್ತಾರೆ. ಆದರೆ, ಬ್ಯಾಂಕ್‌ಗಳು ಕೂಡ ಸಾಲವನ್ನ ಅಷ್ಟು ಸುಲಭವಾಗಿ ನೀಡುವುದಿಲ್ಲ. ಸಾಲ ಪಡೆಯರಲು ಹತ್ತಾರು ಷರತ್ತುಗಳನ್ನ ವಿಧಿಸುತ್ತವೆ. ಯಾರಿಗಪ್ಪಾ ಬೇಕು, ಈ ಬ್ಯಾಂಕ್‌ ಸಾಲ ಎಂಬಷ್ಟರ ಮಟ್ಟಿಗೆ ಬೇಸರವಾಗುತ್ತದೆ. ಇಂಥ ನಾನಾ ಸಂಕಷ್ಟಗಳನ್ನ ದಾಟಿ ಉನ್ನತ ಶಿಕ್ಷಣ ಪಡೆಯೋದು ಕನಸ್ಸಿನ ಮಾತೇ ಸರಿ.  ಪರಿಸ್ಥಿತಿ ಹೀಗಿರುವಾಗ, ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಉನ್ನತ ಶಿಕ್ಷಣಕ್ಕಾಗಿ ಕ್ರೆಡಿಟ್ ಕಾರ್ಡ್ ಒದಗಿಸುವ ಯೋಜನೆಯ ಕ್ರಾಂತಿಕಾರಕ ಎನಿಸಿಕೊಳ್ಳಿದೆ ಎಂದು ಹೇಳಲಾಗುತ್ತಿದೆ.

ಈ ಕ್ರೆಡಿಟ್ ಕಾರ್ಡ್ ಯೋಜನೆ ಉನ್ನತ ಶಿಕ್ಷಣಕ್ಕೆ ಹೋಗುವ ವಿದ್ಯಾರ್ಥಿಗಳಿಗೆ 4% ಬಡ್ಡಿ ದರದಲ್ಲಿ 10 ಲಕ್ಷ ರೂ.ವರೆಗೆ ಸಾಲ ಪಡೆಯಲು ಅವಕಾಶ ನೀಡುತ್ತದೆ. ಪಡೆದ ಸಾಲವನ್ನ ಹಿಂದಿರುಗಿಸಲು ೧೦ ವರ್ಷಗಳ ಕಾಲ ಗಡುವು ಇರುತ್ತೆ. ಬ್ಯಾಂಕ್‌ಗಳು ನೀಡೋ ಇನ್ನಿತರ ಕ್ರೆಡಿಟ್ ಕಾರ್ಡ್‌ಗಳ ರೀತಿಯಲ್ಲೇ ಇದು ಒಂದಾಗಿದ್ದು, ಇದಕ್ಕೆ ಸರ್ಕಾರವೇ ಗ್ಯಾರಂಟಿಯರ್ ಆಗಿರಲಿದೆ. ಈ ಕ್ರೆಡಿಟ್ ಕಾರ್ಡ್ ಸಾಲ ತೀರಿಸಲು ೧೦ ವರ್ಷಗಳ ಅವಧಿ ಇರೋದ್ರಿಂದ ಪೋಷಕರಿಗೆ ಹೊರೆಯಾಗದಂತೆ ಮಕ್ಕಳೇ ಸಾಲವನ್ನ ಮರಿಪಾವತಿಸಬಹುದು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಆರ್ಥಿಕ ಬಿಕ್ಕಟ್ಟು ಇದೆಯಾ? ಈ ಸ್ಕಾಲರ್‌ಶಿಪ್‌ಗಳಿಗೆ ಅಪ್ಲೈ ಮಾಡಿ

ಇದರ ಜೊತೆಗೆ ದೀದಿ ಸಂಪುಟ, ಇನ್ನು ಎರಡು ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. ಗೃಹಿಣಿಯರಿಗೆ ಆದಾಯ ಯೋಜನೆ ಹಾಗೂ ಮನೆ ಬಾಗಿಲಿಗೆ ರೇಷನ್ ಯೋಜನೆಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ತೃಣ ಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಮೂರನೇ ಬಾರಿಗೆ ಗದ್ದುಗೆ ಏರಿದ ಒಂದೇ ತಿಂಗಳಿಗೆ ಮೂರು ಯೋಜನೆಗಳ ಜಾರಿಗೆ ಮುಂದಾಗಿದೆ. ಗೃಹಿಣಿಯರಿಗೆ ಆದಾಯ ಯೋಜನೆ ʼಲಕ್ಷ್ಮೀ-ಆರ್-ಭಂಡಾರ್ʼನಡಿ ಪರಿಶಿಷ್ಟ ಜಾತ/ಪಂಗಡದ ಕುಟುಂಬಕ್ಕೆ ೧ ಸಾವಿರ ರೂಪಾಯಿ ಹಾಗೂ ಸಾಮಾನ್ಯ ವರ್ಗದ ಕುಟುಂಬಕ್ಕೆ ೫೦೦ ರೂಪಾಯಿ ದೊರೆಯಲಿದೆ.

ಮೊದಲ ಸಂಪುಟ ಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರು ಘೋಷಿಸಿರುವ ಯೋಜನೆಗಳು ಜನಪರವಾಗಿವೆ. ಅದರಲ್ಲೂ ಉನ್ನತ ಶಿಕ್ಷಣ ಪಡೆಯಲು ಮುಂದಾಗಿರುವ ಯುವಕರಿಗೆ ಈ ಯೋಜನೆಗಳು ಆರ್ಥಿಕ ಚೈತನ್ಯ ನೀಡಲಿವೆ.

ಕೇವಲ ಶೇ.4ರ ಬಡ್ಡಿದರಲ್ಲಿ ಸಾಲ ನೀಡಿ ಅದನ್ನು 10 ವರ್ಷಗಳಲ್ಲಿ ಮರು ಪಾವತಿಸಲು ಅವಕಾಶ ಕಲ್ಪಿಸುವ ಕ್ರೆಡಿಟ್ ಕಾರ್ಡ್ ಸಾಲ ಯೋಜನೆಯಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಲಿದೆ. ಇದರಿಂದ ಆರ್ಥಿಕ ಕಾರಣದಿಂದಾಗಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ ಎಂಬ ಕೊರಗು ಯುವಕರಿಂದ ನೀಗಲಿದೆ.

ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಟ್ರೈಬಲ್ ಸ್ಕೂಲ್‌ನಲ್ಲಿ ಬೋಧನೆ!

ಇತ್ತೀಚೆಗಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದ ಜನರಿಗೆ ಬಂಪರ್ ಯೋಜನೆಗಳನ್ನು  ಪ್ರಕಟಿಸುತ್ತಿದ್ದಾರೆ.