Asianet Suvarna News Asianet Suvarna News

21ನೇ ಶತಮಾನಾದ ಶಾಲಾ ಶಿಕ್ಷಣ ಹೇಗಿರಬೇಕು? ಮೋದಿ ಮಾತು

ರಾಷ್ಟ್ರೀಯ ಶಿಕ್ಷಣ ನೀತಿ- 2020/ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್/ ಶಿಕ್ಷಕರು ಮತ್ತು ಶಿಕ್ಷಣ ತಜ್ಞರನ್ನು ಉದ್ದೇಶಿಸಿ ಮಾತನಾಡಲಿರುವ ಮೋದಿ/  ಎರಡು ದಿನಗಳ ಆನ್ ಲೈನ್ ಸಮಾವೇಶ

PM Narendra Modi to Address the Conclave on School Education in 21st Century
Author
Bengaluru, First Published Sep 10, 2020, 5:15 PM IST

ನವದೆಹಲಿ(ಸೆ. 10)   ಪ್ರಧಾನಿ  ನರೇಂದ್ರ ಮೋದಿ ಅವರು ರಾಷ್ಟ್ರೀಯ ಶಿಕ್ಷಣ ನೀತಿ- 2020 (ಎನ್‌ಇಪಿ -2020) ಕ್ಕೆ ಸಂಬಂಧಿಸಿ '21 ನೇ ಶತಮಾನದಲ್ಲಿ ಶಾಲಾ ಶಿಕ್ಷಣ' ಕುರಿತ ಸಮಾವೇಶವನ್ನು ಸೆಪ್ಟೆಂಬರ್ 11 ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ.

ಶಿಕ್ಷಾ ಪರ್ವದ ಅಂಗವಾಗಿ ಕೇಂದ್ರ ಶಿಕ್ಷಣ ಇಲಾಖೆ  ಸೆಪ್ಟೆಂಬರ್ 10 ಮತ್ತು 11 ರಂದು ಈ ಎರಡು ದಿನಗಳ ಸಮಾವೇಶ ಆಯೋಜಿಸಿದೆ.  ಇದೇ ವಿಚಾರಕ್ಕೆ ಸಂಬಂಧಿಸಿ  ಮೋದಿ ಆಗಸ್ಟ್ 7 ರಂದು ಎನ್‌ಇಪಿ -2020 ರ ಅಡಿಯಲ್ಲಿ ಉನ್ನತ ಶಿಕ್ಷಣದಲ್ಲಿ ಪರಿವರ್ತನೆ ಮತ್ತು ಸುಧಾರಣೆ ವಿಚಾರದಲ್ಲಿ ಮಾತನಾಡಿದ್ದರು.

ಹೊಸ ಶಿಕ್ಷಣ ನೀತಿ ನವಭಾರತಕ್ಕೆ ಮುನ್ನುಡಿ

1986 ರ ರಾಷ್ಟ್ರೀಯ ನೀತಿ ನಂತರ ಅಂದರೆ 34 ವರ್ಷಗಳ ನಂತರ ಎನ್‌ಇಪಿ -2020ನ್ನು ತರಲಾಗಿದ್ದು ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಲಾಗಿದೆ. ಮಕ್ಕಳ ಸರ್ವತೋಮುಖ ಅಭುವೃದ್ಧಿ ಮತ್ತು ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ಶಿಕ್ಷಣ ನೀತಿಯನ್ನು ತರಲಾಗಿದೆ.

 ಸೆಪ್ಟೆಂಬರ್ 8 ರಿಂದ  25 ರವರೆಗೆ ಶಿಕ್ಷಾ ಪರ್ವ  ಆಚರಿಸಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ರ ವಿವಿಧ ಅಂಶಗಳ ಕುರಿತು ವಿವಿಧ ವೆಬ್‌ನಾರ್‌ಗಳು, ವರ್ಚುವಲ್ ಸಮ್ಮೇಳನಗಳು ನಡೆಯಲಿದ್ದು ವಿಚಾರಗಳ ಚಿಂತನ-ಮಂಥನವಾಗಲಿದೆ. ಸಾಧಕ ಶಿಕ್ಷಕರನ್ನು ಗೌರವಿಸುವ ಕೆಲಸ ಮಾಡಲಾಗುತ್ತಿದೆ.

 

Follow Us:
Download App:
  • android
  • ios