Asianet Suvarna News Asianet Suvarna News

ಕೊರೋನಾ 3ನೇ ಅಲೆ ಎದುರಿಸಲು ರಾಜ್ಯಾದ್ಯಂತ ತಯಾರಿ ಆರಂಭ

* ಜಿಲ್ಲಾ ಆರೋಗ್ಯ ಇಲಾಖೆಗಳಿಂದ ಬೆಡ್‌, ಆಕ್ಸಿಜನ್‌ ಸಿದ್ಧತೆ
* ಎಲ್ಲ ತಾಲೂಕುಗಳಲ್ಲಿ ಖಾಲಿ ಇದ್ದ ವೆಂಟಿಲೇಟರ್‌ ಅಳವಡಿಸಲು ಸೂಚನೆ
* ಮಕ್ಕಳ ತಜ್ಞರು, ಎಂಬಿಬಿಎಸ್‌ ವೈದ್ಯರು, ತಜ್ಞ ವೈದ್ಯರ ನೇಮಕ

Starts preparing for Facing Corona 3rd Wave in Karnataka grg
Author
Bengaluru, First Published Jun 2, 2021, 7:39 AM IST

ಬೆಂಗಳೂರು(ಜೂ.02): ಜಿಲ್ಲೆಯಲ್ಲಿ ಮೂರನೇ ಅಲೆಗೆ ಜಿಲ್ಲಾ ಆರೋಗ್ಯ ಇಲಾಖೆ ಸಜ್ಜಾಗುತ್ತಿವೆ. ಅಗತ್ಯ ಇರುವ ಬೆಡ್‌, ಆಕ್ಸಿಜನ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ, ಖಾಲಿ ಇರುವ ವೈದ್ಯರು ಹಾಗೂ ನರ್ಸ್‌ಗಳನ್ನು ತುಂಬಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಮಕ್ಕಳ ತಜ್ಞರು, ಎಂಬಿಬಿಎಸ್‌ ವೈದ್ಯರು, ತಜ್ಞ ವೈದ್ಯರನ್ನು ನೇಮಿಸಿಕೊಳ್ಳಲಾಗಿದೆ. ಇನ್ನು ತಾಲೂಕು ಕೇಂದ್ರಗಳಲ್ಲಿ ಬೆಡ್‌ ಹಾಗೂ ಆಕ್ಸಿಜನ್‌, ಮಕ್ಕಳ ಚಿಕಿತ್ಸೆಗೆ ಬೇಕಾದ ವ್ಯವಸ್ಥೆಗಳ ಸಿದ್ಧತೆಯಲ್ಲಿ ತೊಡಗಿವೆ.

ವಿಜಯಪುರ 60 ಬೆಡ್‌ ಮೀಸಲಿರಿಸಲಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಸಿದ್ಧತೆಗಳ ಬಗ್ಗೆ ಮಕ್ಕಳ ತಜ್ಞರು ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳ ಉನ್ನತ ಸಭೆ ನಡೆಸಿದೆ. ಇನ್ನು ಹಾವೇರಿಯಲ್ಲಿ 30 ಆಕ್ಸಿಜನ್‌ ಬೆಡ್‌ನ ಪ್ರತ್ಯೇಕ ವಾರ್ಡ್‌ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳಿಗಾಗಿ 15 ಬೆಡ್‌ ಸಾಮರ್ಥ್ಯದ ಪ್ರತ್ಯೇಕ ವಿಭಾಗವಿದೆ. ತಾಲೂಕುಗಳಲ್ಲಿ ಖಾಲಿ ಇದ್ದ ವೆಂಟಿಲೇಟರ್‌ ಅಳವಡಿಸಲು ಸೂಚಿಸಲಾಗಿದೆ.

ಕೊರೋನಾ ಮೂರನೇ ಅಲೆಗೆ ಮಕ್ಕಳೇ ಟಾರ್ಗೆಟ್?: ಖುಷಿ ಕೊಟ್ಟ ಭಾರತೀಯ ವಿಜ್ಞಾನಿಗಳ ಮಾತು!

ದಾವಣಗೆರೆ ಜಿಲ್ಲಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಆಕ್ಸಿಜನ್‌ ಘಟಕಗಳ ಸ್ಥಾಪನೆಗೆ ಒತ್ತು ನೀಡಲಾಗಿದೆ. 47 ವೈದ್ಯರು, 19 ತಜ್ಞ ವೈದ್ಯರು, 34 ಶುಶ್ರೂಷಕರ ನೇಮಕಕ್ಕೆ ಕ್ರಮ ವಹಿಸಲಾಗಿದೆ. ಈ ನಡುವೆ ಕಲಬುರಗಿಯಲ್ಲಿ ಇನ್ನೂ ಸಿದ್ಧತೆ ಮಾಡಿಕೊಂಡಿಲ್ಲ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Follow Us:
Download App:
  • android
  • ios