ಮದ್ರಾಸ್ ಐಐಟಿಗೆ ಎಲೆಕ್ಟ್ರಿಕ್ ಬಸ್ಸುಗಳನ್ನು ಗಿಫ್ಟ್ ನೀಡಿದ ಹಳೆ ವಿದ್ಯಾರ್ಥಿಗಳು
*ಐಐಟಿ ಮದ್ರಾಸ್ ಸಂಸ್ಥೆಯ 1981ರ ಬ್ಯಾಚಿನ ವಿದ್ಯಾರ್ಥಿಗಳಿಂದ ಸಂಸ್ಥೆಗೆ ವಿಶೇಷ ಕಾಣಿಕೆ
*ಎಲೆಕ್ಟ್ರಿಕ್ ಬಸ್‌ಗಳನ್ನು ದೇಣಿಗೆಯಾಗಿ ನೀಡಿದ್ದಕ್ಕೆ ಹಳೆಯ ವಿದ್ಯಾರ್ಥಿಗಳಿಗೆ ವ್ಯಾಪಕ ಮೆಚ್ಚುಗೆ
*ಐಐಟಿ ಮದ್ರಾಸ್‌ನಲ್ಲಿ ಕಲಿತ ವಿದ್ಯಾರ್ಥಿಗಳು ಜಗತ್ತಿನ ನಾನಾ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ
ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲೂ ಶಾಲೆ-ಕಾಲೇಜು (School and Collages) ಅತ್ಯಂತ ಅವಿಸ್ಮರಣೀಯ ಘಟ್ಟ. ಎಷ್ಟೇ ಎತ್ತರಕ್ಕೆ ಬೆಳೆದರೂ, ಏನೇ ಸಾಧನೆ ಮಾಡಿದ್ರೂ, ತಾವು ಓದಿದ ಶಾಲೆ-ಕಾಲೇಜನ್ನ ಮಾತ್ರ ಮರೆಯೋಕೆ ಸಾಧ್ಯವಿಲ್ಲ. ಉನ್ನತ ಸ್ಥಾನಕ್ಕೇರುತ್ತಲೇ ಅದೆಷ್ಟೋ ಮಂದಿ ತಾವು ಕಲಿತ ಶಾಲೆ-ಕಾಲೇಜಿಗೆ ಕೈಲಾದಷ್ಟು ಸಹಾಯ ಮಾಡುತ್ತಾರೆ. ಇನ್ನು ಕೆಲವರು, ಆಗಾಗ ಶಾಲೆ, ಕಾಲೇಜಿಗೆ ಭೇಟಿ ನೀಡುತ್ತಿರುತ್ತಾರೆ. ಅಲ್ಲಿನ ಶಿಕ್ಷಕರ ಜೊತೆ ಚರ್ಚಿಸಿ ತಮ್ಮಿಂದಾಗುವ ಸಹಾಯವನ್ನ ಮಾಡುತ್ತಾರೆ. ಇನ್ನು ಶಾಲಾ ಆಡಳಿತ ಮಂಡಳಿಗಳು, ಕಾಲೇಜು ಮ್ಯಾನೇಜ್ಮೆಂಟ್‌ಗಳು ಕೂಡ ತಮ್ಮ ಹಳೇ ವಿದ್ಯಾರ್ಥಿಗಳನ್ನ ಕರೆದು ಕಾರ್ಯಕ್ರಮ ಮಾಡುತ್ತಾರೆ. ಅವರ ಸಾಧನೆಗಳನ್ನ ಮಕ್ಕಳಿಗೆ ತಿಳಿಸುವ ಮೂಲಕ ಅವರನ್ನು ಹುರಿದುಂಬಿಸುವ ಪ್ರಯತ್ನ ಮಾಡುತ್ತಾರೆ. ಇಂಥ ಸಂದರ್ಭ ಬಂದಾಗ ಹಳೇ ವಿದ್ಯಾರ್ಥಿಗಳು ಅಥವಾ ಮಾಜಿ ವಿದ್ಯಾರ್ಥಿಗಳ ಸಂಘ ಕೂಡ ತಾವು ಕಲಿತ ವಿದ್ಯಾಸಂಸ್ಥೆಗೆ ಏನಾದ್ರೂ ಅವಿಸ್ಮರಣೀಯ ಉಡುಗೊರೆ ಕೊಡುವುದು, ಉತ್ತಮ ಕೆಲಸ ಮಾಡಿಸಿಕೊಡೋದು ಸಾಮಾನ್ಯ. ಅಂಥದ್ದೇ ಕೆಲಸವನ್ನ ಇದೀಗ ಐಐಟಿ ಮದ್ರಾಸ್ (IIT Madras) 1981ರ ಬ್ಯಾಚ್ ವಿದ್ಯಾರ್ಥಿಗಳು ಮಾಡಿ ತೋರಿಸಿದ್ದಾರೆ.
ಐಐಟಿ ಮದ್ರಾಸ್ 1981 ಬ್ಯಾಚ್ನ ಹಳೆಯ ವಿದ್ಯಾರ್ಥಿಗಳ ತಂಡ, ತಾವು ಕಲಿತ ಸಂಸ್ಥೆಗೆ ಎಲೆಕ್ಟ್ರಿಕ್ ಬಸ್ಗಳನ್ನ (Electric Buses) ಉಡುಗೊರೆಯಾಗಿ ನೀಡಿ ಎಲ್ಲರ ಗಮನ ಸೆಳೆದಿದೆ. ಈ ಬ್ಯಾಚ್ನಲ್ಲಿ ವಿವಿಧ ಬಿಟೆಕ್, ಎಂಟೆಕ್ ಮತ್ತು ಪಿಎಚ್‌ಡಿ ಕೋರ್ಸ್‌ಗಳಲ್ಲಿ ಸುಮಾರು 600 ವಿದ್ಯಾರ್ಥಿಗಳು ಅಭ್ಯಾಸ ಮಾಡಿದ್ದರು. ಈ ಬ್ಯಾಚ್ ನ ವಿದ್ಯಾರ್ಥಿಗಳು ಪ್ರಪಂಚದಾದ್ಯಂತ ವಿವಿಧೆಡೆ ಕೆಲಸ ಮಾಡುತ್ತಿದ್ದಾರೆ. ಈ ಹಳೆ ವಿದ್ಯಾರ್ಥಿಗಳ ಸಮುದಾಯ, ಇತ್ತೀಚೆಗಷ್ಟೇ ನಡೆದ ತಮ್ಮ 40ನೇ ಪುನರ್ ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. ಈ ಬಾರಿ ಹಳೇ ವಿದ್ಯಾರ್ಥಿಗಳು, ತಮ್ಮ ಸಂಸ್ಥೆಗೆ ಎಲೆಕ್ಟ್ರಿಕ್ ಬಸ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ತನ್ನ ಹಳೆಯ ವಿದ್ಯಾರ್ಥಿಗಳಿಂದ ಸಂಸ್ಥೆ ಪಡೆದ ಇದುವರೆಗಿನ ಅತಿದೊಡ್ಡ ಪರಂಪರೆಯ ಕೊಡುಗೆಯಾಗಿದೆ.
ಹಳೆಯ ವಿದ್ಯಾರ್ಥಿಗಳು ನೀಡಿದ ಈ ಕೊಡುಗೆ ಬಗ್ಗೆ ಸಂಸ್ಥೆ ಕಡೆಯಿಂದಲೂ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ." ಇದೊಂದು ವಿಶೇಷ ಕೊಡುಗೆಯಾಗಿದ್ದು, ಅಸ್ತಿತ್ವದಲ್ಲಿರುವ ಡೀಸೆಲ್ ಬಸ್‌ಗಳು ಮತ್ತು ಗಾಲ್ಫ್ ಕಾರ್ಟ್‌ಗಳನ್ನು ಬದಲಾಯಿಸುತ್ತದೆ. 2050ರ ವೇಳೆಗೆ ಶೂನ್ಯ ಕಾರ್ಬನ್ ಕ್ಯಾಂಪಸ್‌ನ ಗುರಿಯನ್ನು ತಲುಪಲು ಸಂಸ್ಥೆಗೆ ಸಹಾಯವಾಗಲಿದೆ. ಈಗಿರುವ ಡೀಸೆಲ್ ಫ್ಲೀಟ್ ಅನ್ನು ಬದಲಿಸಲು ಹಳೆ ವಿದ್ಯಾರ್ಥಿಗಳ ತಂಡ, ಎಲೆಕ್ಟ್ರಿಕ್ ಬಸ್‌ಗಳು ಮತ್ತು ಗಾಲ್ಫ್ ಕಾರ್ಟ್‌ಗಳ ಫ್ಲೀಟ್ ಅನ್ನು ಉಡುಗೊರೆ ನೀಡಿದ್ದು ಬಹಳ ಸಂತೋಷವಾಗಿದೆ ಎಂದು ಐಐಟಿ ಮದ್ರಾಸ್ ನಿರ್ದೇಶಕ ಪ್ರೊಫೆಸರ್ ವಿ.ಕಾಮಕೋಟಿ ಹೇಳಿದ್ದಾರೆ.
ಗೂಗಲ್‌ನಿಂದ ಐಐಟಿ ಮದ್ರಾಸ್ ಎಐ ಕೇಂದ್ರಕ್ಕೆ 10 ಲಕ್ಷ ಡಾಲರ್ ನೆರವು!
ಎಲೆಕ್ಟ್ರಿಕ್ ಮೊಬಿಲಿಟಿಯನ್ನು ಲೆಗಸಿ ಗಿಫ್ಟ್ ಆಗಿ ಪ್ರತಿಪಾದಿಸಿದ ಹಳೆಯ ವಿದ್ಯಾರ್ಥಿ ಕ್ರಿಶ್ ಭಾರ್ಗವನ್, "ಐಐಟಿ ಮದ್ರಾಸ್ ಕಾರ್ಬನ್ ನ್ಯೂಟ್ರಾಲಿಟಿಯ ಹಾದಿಯಲ್ಲಿದ್ದು, 2050 ವೇಳೆಗೆ ಸಂಪೂರ್ಣವಾಗಿ ಇದನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಐಐಟಿ ಮದ್ರಾಸ್ ಕ್ಯಾಂಪಸ್‌ನ ಈ ಎಲೆಕ್ಟ್ರಿಕ್ ಸಾರ್ವಜನಿಕ ಸಾರಿಗೆಯಿಂದ ಅಸ್ತಿತ್ವದಲ್ಲಿರುವ ಎರಡು ಶ್ರೇಷ್ಠತೆಯ ಕೇಂದ್ರಗಳಿಗೆ ಪೂರಕವಾಗಿರುತ್ತದೆ. ಎಲೆಕ್ಟ್ರಿಕ್ ಮೊಬಿಲಿಟಿಗಾಗಿ CoE ಮತ್ತು ಶೂನ್ಯ ಎಮಿಷನ್ ಟ್ರಕ್ಕಿಂಗ್ಗಾಗಿ CoE. ಎಲೆಕ್ಟ್ರಿಕ್ ವಾಹನಗಳ ಹಲವಾರು ಘಟಕಗಳನ್ನು ಆಮದು ಮಾಡಿಕೊಳ್ಳುವುದು ಬಹಳ ದುಬಾರಿಯಾಗಿದೆ. ಬಾಹ್ಯ ಅವಲಂಬನೆಯನ್ನು ಕಡಿಮೆ ಮಾಡುವ ಯಾವುದೇ ಸ್ವದೇಶಿ-ಬೆಳೆದ ತಂತ್ರಜ್ಞಾನವು ಭಾರತದ ಇಂಧನ ಸ್ವಾತಂತ್ರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದಿದ್ದಾರೆ. ಐಐಟಿ ಮದ್ರಾಸ್ 1959ರಲ್ಲಿ ಆರಂಭವಾಯಿತು. ಈ ಸಂಸ್ಥೆಯಲ್ಲಿ 16 ಶೈಕ್ಷಣಿಕ ವಿಭಾಗಗಳು ಮತ್ತು ಹಲವಾರು ಮುಂದುವರಿದ ಅಂತರಶಿಸ್ತೀಯ ಸಂಶೋಧನಾ ಶೈಕ್ಷಣಿಕ ಕೇಂದ್ರಗಳಿವೆ.
16ನೇ ವಯಸ್ಸಿಗೆ ಮಾಸ್ಟರ್ ಡಿಗ್ರಿ ಪಡೆದುಕೊಂಡ ಪ್ರತಿಭಾವಂತ