ಚಿಕ್ಕಮಗಳೂರು: 20 ಕೋಟಿ ವೆಚ್ಚದ ವಸತಿ ಶಾಲೆಗೆ ರಸ್ತೆಯೇ ಇಲ್ಲ..!

ಕೋಟಿ-ಕೋಟಿ ವೆಚ್ಚದ ಸರ್ಕಾರಿ ವಸತಿ ಶಾಲೆಗೆ ಮರೀಚಿಕೆಯಾದ ರಸ್ತೆ, ಅಧಿಕಾರಿಗಳ ಯಡವಟ್ಟಿಗೆ ಮಕ್ಕಳು- ಶಿಕ್ಷಕರು ಹೈರಾಣ, ತರೀಕೆರೆ ತಾಲೂಕಿನ ನಂದೀಪುರ ಗ್ರಾಮದಲ್ಲಿ ಘಟನೆ, ಶಾಲೆಯ ಮುಖ್ಯ ರಸ್ತೆಗೆ ತಂತಿಬೇಲಿ ಹಾಕಿದ ಖಾಸಗಿ ಜಮೀನು ಮಾಲೀಕರು 

No Road to the Residential School in Chikkamagaluru grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಜೂ.09):  ಖಾಸಗಿ ವಸತಿ ಶಾಲೆಗಿಂತ ಒಂದು ಕೈ ಮೇಲು ಎನ್ನುವ ರೀತಿಯಲ್ಲಿ ಸರ್ಕಾರಿ ವಸತಿ ಶಾಲೆಯನ್ನು ನಿರ್ಮಾಣಮಾಡಲಾಗಿದೆ. ಖಾಸಗಿ ಶಾಲೆಗೂ ತೊಡೆ ತಟ್ಟುವ ರೀತಿಯಲ್ಲಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ನಂದೀಪುರ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಾರಿ ವಸತಿ ಶಾಲೆ ನಿರ್ಮಾಣವಾಗಿದೆ. ಆದ್ರೆ, ಇಲ್ಲಿಗೆ ಹೋಗುವುದಕ್ಕೆ ಮಕ್ಕಳು-ಶಿಕ್ಷಕರು, ಪೋಷಕರಿಗೆ ಸುಸ್ತಾಗುತ್ತೆ. ಯಾಕಂದ್ರೆ, ಶಾಲೆಯಿಂದ ಕೂಗಳತೆಯಲ್ಲಿರೋ ರಸ್ತೆ ಬಿಟ್ಟು ಆರು ಕಿ.ಮೀ. ಸುತ್ತಿ ಬಳಸಿ ಬರಬೇಕು. ಕಾರಣ ಇಷ್ಟೆ. ಶಾಲೆ ಪಕ್ಕದ ಖಾಸಗಿ ಜಮೀನು ಮಾಲೀಕ ಶಾಲೆ ರಸ್ತೆಗೆ ಅಡ್ಡಲಾಗಿ ತಂತಿ ಬೇಲಿ ಹಾಕಿದ್ದಾರೆ. 

ಕೋಟಿ-ಕೋಟಿ ವೆಚ್ಚದ ಸರ್ಕಾರಿ ವಸತಿ ಶಾಲೆಗೆ ಮರೀಚಿಕೆಯಾದ ರಸ್ತೆ : 

ತರೀಕೆರೆಯ ರಾಜ್ಯ ಹೆದ್ದಾರಿಯ ಕೂಳತೆ ದೂರದಲ್ಲಿರೋ ಈ ಶಾಲೆಗೆ ಮಕ್ಕಳು ಮುಖ್ಯರಸ್ತೆ ಮೂಲಕ ಬರುವುದು ತುಂಬಾ ಸಲೀಸು. ಆದರೆ, ಖಾಸಗಿ ಜಮೀನು ಮಾಲೀಕ ರಸ್ತೆಗೆ ಬೇಲಿ ಹಾಕಿರುವುದರಿಂದ ಮಕ್ಕಳು-ಶಿಕ್ಷಕರು  ಸುತ್ತಿಬಳಸಿ ಓಡಾಡುವಂತಾಗಿದೆ. ಸರ್ಕಾರಿ ದಾಖಲೆ ಪ್ರಕಾರ ಶಾಲೆಯ ಮುಖ್ಯ ರಸ್ತೆಗೆ ಸರ್ಕಾರಿ ದಾಖಲೆಗಳ ಪ್ರಕಾರ ನಕಾಶೆಯಲ್ಲಿ ರಸ್ತೆ ಇದೆ. ಸರ್ಕಾರ ಹಾಗೂ ಅಧಿಕಾರಿಗಳು ಕೂಡ ರಸ್ತೆ ನಿರ್ಮಾಣದ ಕುರಿತು ಜಮೀನು ಮಾಲೀಕನಿಗೆ ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನ ಆಗಿಲ್ಲ. ತನಗೆ ಬೇಕಾದಾಗ ಬೇಲಿ ಹಾಕುವುದು, ಬೇಡವೆಂದಾಗ ಬೇಲಿ  ತೆಗೆಯುತ್ತಿರೋ ಜಮೀನು ಮಾಲೀಕನ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ಸರ್ಕಾರ ಹಾಗೂ ಅಧಿಕಾರಿಗಳು ಸರ್ಕಾರಿ ದಾಖಲೆಯ ನಕಾಶೆಯಲ್ಲಿರೋ ರಸ್ತೆ ನಿರ್ಮಿಸಿ ಶಾಲೆಗೆ ಹೋಗುವ ಮಕ್ಕಳಿಗೆ ರಸ್ತೆ ನಿರ್ಮಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ. 

ಚಿಕ್ಕಮಗಳೂರು: ಮತ್ತೊಮ್ಮೆ ಸಿ.ಟಿ.ರವಿಗೆ ಶಾಕ್ ಕೊಟ್ಟ ಶಾಸಕ ಹೆಚ್.ಡಿ. ತಮ್ಮಯ್ಯ

20 ಕೋಟಿ ವೆಚ್ಚದ ವಸತಿ ಶಾಲೆಗೆ ರಸ್ತೆಯೇ ಇಲ್ಲ..

20 ಕೋಟಿ ವೆಚ್ಚದ ಸರ್ಕಾರಿ ಶಾಲೆಗೆ ರಸ್ತೆಯೇ ಇಲ್ಲದಂತಾಗಿದೆ. ಅಧಿಕಾರಿಗಳ ಎಡವಟ್ಟಿನಿಂದ ವಸತಿ ಶಾಲೆ ನಿರ್ಮಾಣ ಮಾಡಿದ ಪರಿಣಾಮ ಇಂದು ಶಿಕ್ಷಕರು ಹಾಗೂ ಮಕ್ಕಳು ರಸ್ತೆ ಇಲ್ಲದೆ ಪರದಾಡ್ತಿದ್ದಾರೆ. ಆರು ವರ್ಷಗಳ ಹಿಂದೆ ಅಂದಿನ ಶಾಸಕ ಶ್ರೀನಿವಾಸ್ ಈ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನಿರ್ಮಾಣ ಮಾಡಲು ಜಾಗ ಮಂಜೂರು ಮಾಡಿಸಿದ್ದರು. ಬಳಿಕ ಶಾಲೆ ಏನೋ ನಿರ್ಮಾಣ ಆಯ್ತು. ಆದ್ರೆ, ಶಾಲೆಗೆ ಹೋಗಲು ರಸ್ತೆ ಗಗನ ಕುಸುಮವಾಯ್ತು. ಜಮೀನು ಮಾಲೀಕ ಶಾಲೆ ಮುಖ್ಯರಸ್ತೆಗೆ ತಂತಿ ಬೇಲಿ ಹಾಕಿರೋ ಪರಿಣಾಮ ಮಕ್ಕಳು ಹಾಗೂ ಶಿಕ್ಷಕರು ಶಾಲೆಗೆ 6 ಕಿ.ಮೀ. ಸುತ್ತಿಕೊಂಡು ಬರುವಂತಾಗಿದೆ..

20 ಕೋಟಿ ವೆಚ್ಚದ ಸರ್ಕಾರಿ ವಸತಿ ಶಾಲೆ. ಕೋಟಿ-ಕೋಟಿ ಖರ್ಚು ಮಾಡಿ ಕಟ್ಟಿದ ಶಾಲೆಗೆ ಹೋಗಿ-ಬರಲು ರಸ್ತೆಯೇ ಇಲ್ಲ ಎನ್ನುವುದು ವಿಪರ್ಯಸವೇ ಸರಿ.ಒಟ್ಟಾರೆ, ಕೋಟಿ-ಕೋಟಿ ವೆಚ್ಚದಲ್ಲಿ ಸುಸಜ್ಜಿತ ವಸತಿ ಶಾಲೆ ನಿರ್ಮಾಣವಾದರೂ ಅಧಿಕಾರಿಗಳ ನಿರ್ಲಕ್ಷ ಹಾಗೂ ಮೈಮರೆತ ಪರಿಣಾಮ ರಸ್ತೆ ಇಲ್ಲದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಿತ್ಯವೂ ಸುತ್ತಿ ಬಳಸಿ ಓಡಾಡುವ ಸ್ಥಿತಿ ನಿರ್ಮಾಣವಾಗಿರೋದು ನಿಜಕ್ಕೂ ದುರಂತ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಗೆ ಸ್ಪಂದಿಸಿ ರಸ್ತೆ ನಿರ್ಮಿಸಿ ಕೊಡಬೇಕೆಂದು ಸ್ಥಳಿಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios