Asianet Suvarna News Asianet Suvarna News

ಈ ಬಾರಿ SSLC ಫಲಿತಾಂಶ ಮರು ಮೌಲ್ಯಮಾಪನ ಇಲ್ಲ..!

*  ಡಿಜಿಟಲ್ ಮೌಲ್ಯಮಾಪನದಲ್ಲಿ ತಪ್ಪಿನ ಸಾಧ್ಯತೆ ಇಲ್ಲ
*   ಡಿಜಿಟಲ್‌ ಮೌಲ್ಯಮಾಪನದಲ್ಲಿ ತಪ್ಪುಗಳಾಗುವ ಸಾಧ್ಯತೆ ಇಲ್ಲ
*  ಡಿಜಿಟಲ್‌ ಸ್ಕ್ಯಾನಿಂಗ್‌ ಮೂಲಕ ಯಾಂತ್ರಿಕೃತ ಮೌಲ್ಯಮಾಪನ 
 

No Re Evaluation of SSLC Result this time in Karnataka grg
Author
Bengaluru, First Published Aug 11, 2021, 7:43 AM IST

ಬೆಂಗಳೂರು(ಆ.11): ಎಸ್ಸೆಸ್ಸೆಲ್ಸಿ ಪರೀಕ್ಷಾ ಉತ್ತರ ಪತ್ರಿಕೆಗಳನ್ನು ಡಿಜಿಟಲ್‌ ಮೌಲ್ಯಮಾಪನ ನಡೆಸಿರುವುದರಿಂದ ಫಲಿತಾಂಶದ ಮರು ಮೌಲ್ಯಮಾಪನ ಕೋರಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಈ ಬಾರಿ ಅವಕಾಶ ಇಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ವಿದ್ಯಾರ್ಥಿಗಳ ವಲಯದಲ್ಲಿ ಈ ಬಾರಿ ಮರು ಮೌಲ್ಯಮಾಪನಕ್ಕೆ ಅವಕಾಶ ನೀಡಲಾಗಿಲ್ಲ ಎಂಬ ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್‌ ಅವರು ಪ್ರತಿಕ್ರಿಯಿಸಿ ಈ ಬಾರಿ ಡಿಜಿಟಲ್‌ ಮೌಲ್ಯಮಾಪನದಲ್ಲಿ ತಪ್ಪುಗಳಾಗುವ ಸಾಧ್ಯತೆ ಇಲ್ಲ. ಹಾಗಾಗಿ ಮರುಮೌಲ್ಯಮಾಪನದ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೊದಲ ಪ್ರಯತ್ನದಲ್ಲೇ SSLC ಪರೀಕ್ಷೆ ಬರೆದು ಪಾಸ್ ಆದ 44 ವರ್ಷದ ಕರ್ನಾಟಕದ ಮಹಿಳೆ 

ಪ್ರತಿ ವರ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಲಿಖಿತವಾಗಿ ಬರೆಯುತ್ತಿದ್ದರು. ಆದರೆ, ಈ ಬಾರಿ ಬಹು ಆಯ್ಕೆ ಮಾದರಿ ಪ್ರಶ್ನೆಗಳ ಮೂಲಕ ಕೇವಲ ಸರಿ ಉತ್ತರದ ಸಂಖ್ಯೆಯನ್ನು ಒಎಂಆರ್‌ ಶೀಟ್‌ನಲ್ಲಿ ಗುರುತಿಸಿದ್ದಾರೆ. ಈ ಒಎಂಆರ್‌ ಪತ್ರಿಕೆಯನ್ನು ಡಿಜಿಟಲ್‌ ಸ್ಕ್ಯಾನಿಂಗ್‌ ಮೂಲಕ ಯಾಂತ್ರಿಕೃತ ಮೌಲ್ಯಮಾಪನ ನಡೆಸಲಾಗಿದೆ. ಹಾಗಾಗಿ ಮೌಲ್ಯಮಾಪನ ತಪ್ಪಾಗಲು ಸಾಧ್ಯವಿಲ್ಲ. ಇನ್ನು ಪರೀಕ್ಷೆ ಬಳಿಕ ಕೀ ಉತ್ತರಗಳನ್ನೂ ನೀಡಿ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆಕ್ಷೇಪಗಳನ್ನು ಪರಿಶೀಲಿಸಿ ಕನ್ನಡ ಭಾಷಾ ವಿಷಯದ ಒಂದು ಪ್ರಶ್ನೆ ಗೊಂದಲದಿಂದ ಕೂಡಿದ್ದರಿಂದ ಸಾಮೂಕವಾಗಿ ಎಲ್ಲ ಮಕ್ಕಳಿಗೂ ಒಂದು ಕೃಪಾಂಕ ನೀಡಲಾಗಿದೆ. ಈ ಎಲ್ಲಾ ಕಾರಣದಿಂದ ಮರು ಮೌಲ್ಯಮಾಪನದ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
 

Follow Us:
Download App:
  • android
  • ios